ಆರೋಗ್ಯ

20 -30ರ ವಯಸ್ಸಿನಲ್ಲಿ ಕಾಡುವ ಸೊಂಟ ನೋವಿಗೆ ಬದಲಾದ ಜೀವನ ಶೈಲಿಯೇ ಕಾರಣವೇ..?

Pinterest LinkedIn Tumblr

ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರಲ್ಲೂ ಇದೀಗ ಸಾಮಾನ್ಯವಾಗಿ ಕಾಣಿಸುವಂತಹ ಸಮಸ್ಯೆ ಎಂದರೆ ಅದು ಸೊಂಟ ನೋವು. ಹಿಂದೆ ಕೇವಲ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಸೊಂಟ ನೋವು, ಇಂದು 20 ? 30ವಯಸ್ಸಿನವರನ್ನೂ ಕಾಡುತ್ತಿದೆ. ಇದಕ್ಕೆ ನಮ್ಮ ಬದಲಾದ ಜೀವನ ಶೈಲಿಯೇ ಕಾರಣ ಇರಬಹುದು.

1.ತೆಂಗಿನ ಎಣ್ಣೆ ಜೊತೆ ಕರ್ಪೂರ ಮಿಕ್ಸ್ ಮಾಡಿ 5 ನಿಮಿಷ ಕುದಿಸಿ. ನಂತರ ಇದನ್ನು ತಣಿಸಿ ಸ್ಟೋರ್ ಮಾಡಿಡಿ. ಇದನ್ನು ವಾರದಲ್ಲಿ ಎರಡು ಬಾರಿ ಮಲಗುವ ಮುನ್ನ ಸೊಂಟಕ್ಕೆ ಹಚ್ಚಿದರೆ ಉತ್ತಮ.

2.ಉಗುರುಬಿಸಿ ನೀರಿಗೆ ಅಥವಾ ಬಿಸಿ ನೀರಿಗೆ ನೀಲಗಿರಿ ಎಣ್ಣೆ ಹಾಕಿ, ಅದರಿಂದ ಸ್ನಾನ ಮಾಡಿದರೆ ನೀವು ಸೊಂಟ ನೋವಿನಿಂದ ಸುಲಭವಾಗಿ ಮುಕ್ತಿ ಹೊಂದಬಹುದು.

3.ನೀವು ತುಂಬಾ ಹೊತ್ತು ಟಿವಿ ನೋಡುತ್ತಿದ್ದರೆ ಸೊಂಟ ಬಳಿ ತಲೆ ದಿಂಬು ಇಟ್ಟು ಅದರ ಮೇಲೆ ಹಾಟ್ ವಾಟರ್ ಬ್ಯಾಗ್ ಇರಿಸಿ. ಇದರಿಂದ ನೋವು ನಿವಾರಣೆಯಾಗುತ್ತದೆ.

4.ಸ್ನಾನಕ್ಕೆ ಹೋಗುವ ಅರ್ಧಗಂಟೆ ಮುನ್ನ ಸಾಸಿವೆ ಎಣ್ಣೆ ಹಾಕಿ ಮಸಾಜ್ ಮಾಡಿ. ಆದರೆ ಸ್ನಾನ ಮಡುವಾಗ ಮಾತ್ರ ಹಾಟ್ ವಾಟರ್ ಬಳಕೆ ಮಾಡಬೇಕು.

5.ಸೊಂಟ ನೋವಿನಿಂದ ಮುಕ್ತಿ ಪಡೆಯಲು ನೀವು ಮಾಡಬೇಕಾದ ಮತ್ತೊಂದು ವಿಧಾನ ಎಂದರೆ ಪ್ರತಿ ದಿನ ಹಾಲಿಗೆ ಸ್ವಲ್ಪ ಅರಿಶಿನ, ಎರಡು ಹನಿ ಜೇನು ಹಾಕಿ ಸೇವಿಸಿ.

6.ಚಹಾದ ಜೊತೆ ಶುಂಠಿ ಹಾಕಿ ಸೇವನೆ ಮಾಡುವುದು ಸಹ ಸೊಂಟ ನೋವಿಗೆ ಮದ್ದು.

7.ಹರ್ಬಲ್ ಆಯಿಲ್ ಬಳಸಿ ಸೊಂಟಕ್ಕೆ ಮಸಾಜ್ ಮಾಡುವುದು ಉತ್ತಮ.

Comments are closed.