ಆರೋಗ್ಯ

ಜೀವನದಲ್ಲಿ 60 ಪ್ರತಿಶತದಷ್ಟು ಜನರು ಖಿನ್ನತೆಯನ್ನು ಅನುಭವಿಸಿರುತ್ತಾರೆ ಯಾಕೆ..?

Pinterest LinkedIn Tumblr

ಖಿನ್ನತೆಯ ಅಸ್ವಸ್ಥತೆ ಎಂಬುದು ಮಾನಸಿಕ ಅಸ್ವಸ್ಥತೆಯಾಗಿದೆ. ಇದು ಕಡಿಮೆ ಆತ್ಮಾಭಿಮಾನದ ಜೊತೆ ಮಂದಸ್ಥಿತಿ ಹಾಗು ಸಹಜವಾಗಿ ಸಂತೋಷ ಪಡುವಂತಹ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುವ ಲಕ್ಷಣಗಳಿಂದ ಕೂಡಿದೆ. ಸಾಮಾನ್ಯ ಪದವಾದ ಖಿನ್ನತೆಯನ್ನು ಅಸ್ವಸ್ಥತೆ ಸೂಚಿಸಲು ಹೆಚ್ಚಾಗಿ ಬಳಸಲಾಗುತ್ತದೆ. ಇದನ್ನು ಮಾನಸಿಕ ಖಿನ್ನತೆಯ ಇತರ ವಿಧಗಳನ್ನು ಸೂಚಿಸಲು ಕೂಡ ಬಳಸಬಹುದಾಗಿದ್ದರಿಂದ ವೈದ್ಯಕೀಯ ಮತ್ತು ಸಂಶೋಧನೆಯ ಬಳಕೆಯಲ್ಲಿ ಅಸ್ವಸ್ಥತೆಗಾಗಿ ನಿರ್ದಿಷ್ಟ ಪರಿಭಾಷೆಯ ಅಗತ್ಯವಿರುವುದರಿಂದ ಇದನ್ನು ಬಳಸುತ್ತಿಲ್ಲ. ಪ್ರಧಾನ ಖಿನ್ನತೆಯೆಂಬುದು ದುರ್ಬಲ ಸ್ಥಿತಿಯಾಗಿದ್ದು, ಇದು ವ್ಯಕ್ತಿಯ ಕುಟುಂಬ, ಕೆಲಸ ಅಥವಾ ಶಾಲಾ ಜೀವನ, ನಿದ್ರಿಸುವ ಮತ್ತು ಆಹಾರ ಸೇವಿಸುವ ಅಭ್ಯಾಸಗಳು ಮತ್ತು ಸಾಮಾನ್ಯ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ, ಸುಮಾರು 3.4 ಪ್ರತಿಶತದಷ್ಟು ಜನರು ಪ್ರಧಾನ ಖಿನ್ನತೆಯಿಂದಾಗಿ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾರೆ. ಅಲ್ಲದೇ ಆತ್ಯಹತ್ಯೆ ಮಾಡಿಕೊಳ್ಳುವ 60 ಪ್ರತಿಶತದಷ್ಟು ಜನರು ಖಿನ್ನತೆಯನ್ನು ಅಥವಾ ಮಾನಸಿಕ ಅಸ್ವಸ್ಥತೆಯನ್ನು ಹೊಂದಿರುತ್ತಾರೆ.

1. ಆಳವಾದ ಉಸಿರಾಟದ ತಂತ್ರಗಳು ಮತ್ತು ಧ್ಯಾನವು ನಿಮ್ಮ ಮನಸ್ಸು ಹಾಗೂ ದೇಹದ ವಿಶ್ರಾಂತಿಗೆ ಸಹಾಯ ಮಾಡುತ್ತದೆ.
2. ನಿಯಮಿತವಾದ ನಿದ್ರೆಯ ವೇಳಾಪಟ್ಟಿಯನ್ನು ಕಾಪಾಡಿಕೊಳ್ಳಿ. ಪ್ರತಿದಿನ ಒಂದೇ ಸಮಯದಲ್ಲಿ ಮಲಗಿ ಹಾಗೂ ಒಂದೇ ಸಮಯದಲ್ಲಿ ಎದ್ದೇಳಿ.
3. ಸಂಜೆ ಸಮಯದಲ್ಲಿ ಸ್ವಲ್ಪ ವ್ಯಾಯಾಮ ಮಾಡಿ. ಇದು ನಿಮ್ಮನ್ನು ದಣಿದಂತೆ ಮಾಡಿ ನೀವು ಸುಲಭವಾಗಿ ನಿದ್ರೆಗೆ ಜಾರುವಂತೆ ಮಾಡುತ್ತದೆ.
4. ಖಿನ್ನತೆಗೆ ನಿಯಮಿತವಾದ ಹಾಗೂ ಆರೋಗ್ಯಕರ ಆಹಾರ ತಿನ್ನುವ ಮೂಲಕ ಚಿಕಿತ್ಸೆ ನೀಡಬಹುದು. ನಿರ್ದಿಷ್ಟವಾಗಿ ಕೆಲವು ಆಹಾರಗಳು, ಚಾಕೊಲೇಟ್​​​ ಮತ್ತು ಸಿಹಿತಿಂಡಿಗಳು ಒಳ್ಳೆಯ ಮತ್ತು ಸಂತೋಷವನ್ನು ಅನುಭವಿಸುವಂತೆ ಮಾಡುತ್ತವೆ.
5. ಅಧ್ಯಯನಗಳ ಪ್ರಕಾರ ವ್ಯಾಯಾಮವು ನಿಮ್ಮ ಖಿನ್ನತೆಯ ಜೊತೆ ಹೋರಾಡುವಲ್ಲಿ ಸಹಾಯ ಮಾಡುತ್ತದೆ. ಏಕೆಂದರೆ ಇದು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ನಿಮ್ಮಲ್ಲಿರುವ ಚಿಂತೆಗಳಿಂದ ನಿಮ್ಮನ್ನು ವಿಚಲನಗೊಳಿಸುತ್ತದೆ.
6. ಪೋಷಕ ಪರಿಸರದಲ್ಲಿ ನಿಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಹಂಚಿಕೊಳ್ಳುವುದರ ಮೂಲಕ ನಿಮ್ಮಲ್ಲಿರುವ ಒತ್ತಡ, ಆತಂಕ ಮತ್ತು ದುಃಖದ ಭಾವನೆಗಳನ್ನು ಕಡಿಮೆ ಮಾಡಿಕೊಳ್ಳುವ ಮೊದಲ ಹಂತವಾಗಿದೆ.

Comments are closed.