ಆರೋಗ್ಯ

ಪೋಷಕಾಂಶಭರಿತ ಗೆಡ್ಡೆರೂಪದ ತರಕಾರಿಗಳ ಅರೋಗ್ಯಕರ ಗುಣಗಳು

Pinterest LinkedIn Tumblr

ಸಸ್ಯಹಾರಿಗಳ ಬಹು ಬಳಕೆಯ ತರಕಾರಿ ಮೂಲಂಗಿ. ಮೂಲಂಗಿ ಕೇವಲ ರುಚಿಯೊಂದೇ ಅಲ್ಲ, ಅದರಲ್ಲಿ ರೋಗನಿರೋಧಕ ಶಕ್ತಿ ಇದೆ. ಸಲಾಡ್ ಒಂದೇ ಅಲ್ಲ ಬಗೆ ಬಗೆಯಲ್ಲಿ ಮೂಲಂಗಿಯನ್ನು ಸೇವಿಸಲಾಗುತ್ತೆ. ಇದರಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಅಂಶವಿದೆ. ಅಲ್ಲದೆ ಸಾರಜನಕ, ಪಿಷ್ಟ, ಮೇದಸ್ಸು, ಖನಿಜಾಂಶ, ನಾರಿನಾಂಶ, ರಂಜಕ, ಸೋಡಿಯಂ, ಪೊಟ್ಯಾಷಿಯಂ, ರೈಬೋಪ್ಲೆವಿನ್, ಆಕ್ಸಾನಿಕ್ ಆಮ್ಲ, ಎ-ಸಿ ಜೀವಸತ್ವ, ಸುಣ್ಣ, ಕಬ್ಬಿಣ, ಥಯಾಮಿನ್ ನಂತಹ ಪೋಷಕಾಂಶಗಳಿವೆ. ಮೂಲಂಗಿ ತಾಜಾ ತರಕಾರಿಯಾಗಿರುವುದರಿಂದ ಹಸಿಯಾಗಿ ತಿನ್ನಬಹುದು. ಇದನ್ನು ಹಸಿಯಾಗಿ ತಿನ್ನುವುದರಿಂದಲೇ ಉಪಯೋಗಗಳು ಹೆಚ್ಚು.

ಮೂಲಂಗಿ ಭಯಾನಕ ರೋಗ ಕ್ಯಾನ್ಸರ್ ವಿರುದ್ಧ ನಮ್ಮ ದೇಹ ಹೋರಾಡಲು ನೆರವಾಗುತ್ತದೆ.
ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಲು ಸಹಕಾರಿ.
ಮೂತ್ರಕೋಶ ಮತ್ತು ಮೂತ್ರಪಿಂಡವನ್ನು ಶುಚೀಕರಿಸಲು ಸಹಕಾರಿಯಾದ ಮೂಲಂಗಿ ಸೇವನೆಯಿಂದ ಉರಿಮೂತ್ರ ಮುಂತಾದ ಮೂತ್ರ ಸಂಬಂಧಿ ಕಾಯಿಲೆಗಳಿಂದ ಮುಕ್ತಿ ಹೊಂದಲು ಅನುವಾಗುತ್ತದೆ.
ಕೆಂಪು ಮೂಲಂಗಿ ಸೇವನೆಯಿಂದ ಮೂಳೆಗಳು ಗಟ್ಟಿಗೊಳ್ಳುತ್ತವೆ.
ಮೂಲಂಗಿ ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸುವುದಲ್ಲದೇ, ನರಮಂಡಲ ಬಲಗೊಳ್ಳಲು ಸಹಕಾರಿ.
ಕಾಮಾಲೆಗೆ ಕೆಂಪು ಮೂಲಂಗಿ ರಸದ ಸೇವನೆ ಮಾಡಿದರೆ ರೋಗವನ್ನು ಶೀಘ್ರವಾಗಿ ಗುಣಪಡಿಸಿ ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ.
ನಿತ್ಯವೂ ಮೂಲಂಗಿ ಸೇವಿಸುವವರಿಗೆ ಹೃದಯಾಘಾತದ ಸಂಭವ ಕಡಿಮೆ.
ರಕ್ತದಲ್ಲಿರುವ ಸಕ್ಕರೆಯ ಗುಣಮಟ್ಟವನ್ನು ನಿಯಂತ್ರಿಸುವ ಮೂಲಕ ಮಧುಮೇಹದವರಿಗೂ ಉಪಕಾರಿಯಾಗಿದೆ.
ಮೂಲಂಗಿ ಸೇವನೆಯಿಂದ ದಂತ ಸಮಸ್ಯೆ ನಿವಾರಣೆಯಾಗುತ್ತದೆ. ಹಲ್ಲುಗಳು ಗಟ್ಟಿಯಾಗುತ್ತವೆ. ಹಳದಿ ಹಲ್ಲಿನ ಸಮಸ್ಯೆಯೂ ನಿವಾರಣೆಯಾಗುತ್ತದೆ.
ಮೂಲಂಗಿಗೆ ಸ್ವಲ್ಪ ನಿಂಬು ರಸವನ್ನು ಹಾಕಿ ಹಲ್ಲುಜ್ಜುವುದರಿಂದ ಹಲ್ಲು ಬೆಳ್ಳಗಾಗುತ್ತದೆ.
ಮೂಲಂಗಿ ಸೇವನೆಯಿಂದ ಕೂದಲು ಹೊಳೆಯುವುದಲ್ಲದೇ, ಉದುರುವ ಸಮಸ್ಯೆಯಿಂದಲೂ ಮುಕ್ತಿ ದೊರೆಯುತ್ತದೆ.
ದೇಹದಲ್ಲಿ ರಕ್ತದ ಕೊರತೆ ಇದ್ದರೆ ಮೂಲಂಗಿ ರಸ ಮತ್ತು ದಾಳಿಂಬೆ ರಸ ಮಿಶ್ರಿತ ಪಾನೀಯ ಕುಡಿಯುವುದು ಒಳ್ಳೆಯದು.
ಮೂಲಂಗಿ ಕತ್ತರಿಸಿ, ಅದಕ್ಕೆ ಉಪ್ಪು ಬೆರೆಸಿ ತಿನ್ನುವುದರಿಂದ ಬಾಯಿ ವಾಸನೆ ಹೋಗುತ್ತದೆ.
ಮೂಲಂಗಿ ರಸಕ್ಕೆ ನಿಂಬೆ ರಸ ಮತ್ತು ಉಪ್ಪು ಸೇರಿಸಿ, ಸೇವಿಸುವುದರಿಂದ ಕೊಬ್ಬು ಕರಗುತ್ತದೆ.
ಮೂಲಂಗಿ ಶರೀರಕ್ಕೊಂದೇ ಅಲ್ಲ ಮೊಡವೆ ನಿವಾರಣೆಗೂ ಸಹಕಾರಿ.
ಹೊಟ್ಟೆ ನೋವಿನ ಸಮಸ್ಯೆಗೆ ಮೂಲಂಗಿ ರಸ ರಾಮಬಾಣ. ಜೀರ್ಣಕ್ರಿಯೆ ಸರಿ ಮಾಡಿ, ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ.

Comments are closed.