ಬೇವಿನಸೊಪ್ಪು ಅಥವಾ ಕರಿಬೇವು ಹಾಗೂ ಜೇನುತುಪ್ಪದ ಮಿಶ್ರಣದ ಮಾಹಿತಿಯನ್ನು ತಿಳಿದುಕೊಳ್ಳುತ್ತಿದ್ದೆವು. ಇಂದಿನ ಅಂಕಣದಲ್ಲಿ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ. ಆಕ್ಸಿಡೇಟಿವ್ ಒತ್ತಡದಿಂದ ದೇಹಕ್ಕಾಗುವ ಹಾನಿಯನ್ನು ತಡೆಯಲು ಕರಿಬೇವಿನಸೊಪ್ಪಿನ ಸೇವನೆ ನೈಸರ್ಗಿಕ ಮಾರ್ಗ. ಇದರ ಆ್ಯಂಟಿ ಬ್ಯಾಕ್ಟೀರಿಯಲ್ ಗುಣವು ದೇಹವನ್ನು ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದು ಆ್ಯಂಟಿ ಕ್ಯಾನ್ಸರ್ ಹಾಗೂ ಆ್ಯಂಟಿ ಇನ್ಫ್ಲಮೇಟರಿ ಗುಣವನ್ನು ಹೊಂದಿದೆ.
ಇದರಲ್ಲಿ ಲಿನೊಲೊಲ್ ಎಂಬ ಅಂಶ ಇದ್ದು, ಅದು ದೇಹಕ್ಕೆ ಹಾನಿ ಮಾಡಬಹುದಾದ ಬ್ಯಾಕ್ಟೀರಿಯಾಗಳನ್ನು ಸಾಯಿಸಿ ದೇಹವನ್ನು ರಕ್ಷಿಸುವ ಕಾರ್ಯಕ್ಕೆ ಬದ್ಧವಾದುದು. ಅಲ್ಲದೆ ಹಾನಿಕಾರಕ ಫ್ರೀ ರ್ಯಾಡಿಕಲ್ಸ್ನ್ನು ತೊಲಗಿಸಲೂ ಬೇವಿನಸೊಪ್ಪು ಸಹಕಾರಿ. ಇದರೊಟ್ಟಿಗೆ ಜೇನುತುಪ್ಪವೂ ಇರುವುದರಿಂದ ಜೇನುತುಪ್ಪದಲ್ಲಿ ವಿಶೇಷ ಆಂಟಿ ವೈರಲ್, ಆಂಟಿ ಬ್ಯಾಕ್ಟೀರಿಯಲ್, ಸಾಮಾನ್ಯವಾಗಿ ಆಂಟಿ ಮೈಕ್ರೋಬಿಯಲ್ ಗುಣ ಇರುವುದರಿಂದ ಬೇವಿನಸೊಪ್ಪು ಹಾಗೂ ಜೇನುತುಪ್ಪದ ಮಿಶ್ರಣವು ಆರೋಗ್ಯಕ್ಕೆ ಅನುಕೂಲಕಾರಿಯಾಗಿ ಕೆಲಸ ಮಾಡುತ್ತದೆ.
ಮಧುಮೇಹಿಗಳ ಆರೋಗ್ಯಕ್ಕೆ ಕರಿಬೇವು ಬಹಳ ಒಳ್ಳೆಯದು. ಇದು ರಕ್ತದಲ್ಲಿ ಸಕ್ಕರೆ ಅಂಶವನ್ನು ಹತೋಟಿಯಲ್ಲಿಡಲು ಪರಿಣಾಮಕಾರಿಯಾಗಿ ವರ್ತಿಸುತ್ತದೆ. ಆದ್ದರಿಂದ ಮಧುಮೇಹ ಇರುವವರು ಬೇವಿನಸೊಪ್ಪನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದು ಉತ್ತಮ. ದೃಷ್ಟಿಯ ಸ್ಪಷ್ಟತೆಗೆ ಬೇವಿನಸೊಪ್ಪು ಸೇವನೆ ಒಳ್ಳೆಯದು. ವಿಟಮಿನ್ ಎ ಯನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವುದರಿಂದ ಇದು ಸಾಧ್ಯವಾಗುತ್ತದೆ. ಸ್ಟ್ರೆಸ್ ಕಡಿಮೆ ಮಾಡಲು, ಗಾಯಗಳನ್ನು ತ್ವರಿತವಾಗಿ ಗುಣ ಮಾಡಲು,
ತ್ವಚೆಯ ಸೌಂದರ್ಯವನ್ನು ಹೆಚ್ಚಿಸಲು ಬೇವಿನಸೊಪ್ಪು ಹಾಗೂ ಜೇನುತುಪ್ಪದ ಸೇವನೆ ಮಾಡಿ. ಬೇವಿನಸೊಪ್ಪನ್ನು ಜಜ್ಜಿ ಅದಕ್ಕೆ ಜೇನುತುಪ್ಪವನ್ನು ಮಿಶ್ರಣ ಮಾಡಿ ಗಾಯಗಳಾದ ಭಾಗದಲ್ಲಿ ಲೇಪಿಸಿಕೊಳ್ಳುವುದರಿಂದ ಗಾಯಗಳು ವೇಗವಾಗಿ ಶಮನವಾಗುತ್ತವೆ. ಉರಿಯೂತವಿದ್ದಲ್ಲಿ ಕಡಿಮೆಯಾಗುತ್ತದೆ. ಮುಖಕ್ಕೆ ಪ್ಯಾಕ್ ಮಾಡಿಕೊಂಡಲ್ಲಿ ಚರ್ಮವು ಕಾಂತಿಯುಕ್ತವಾಗುತ್ತದೆ.