ಆರೋಗ್ಯ

ಸುಂದರ ಆರೋಗ್ಯದ ಗುಟ್ಟು ಈ 35 ಸೂತ್ರಗಳಲ್ಲಡಗಿದೆ.

Pinterest LinkedIn Tumblr

ನಮ್ಮ ನಿತ್ಯದ ಚಟುವಟಿಕೆಗಳಿಗೆ  ಸರಿಯಾದ ತಾಪಮಾನದಲ್ಲಿ ಇದ್ದರೆ ಮಾತ್ರ ಆರೋಗ್ಯಕ್ಕೆ ಪೂರಕ.

1. ಬೆಳಿಗ್ಗೆ 4.30 ಕ್ಕೆ ನಿದ್ದೆಯಿಂದ ಏಳಬೇಕು.
2. ನಿದ್ದೆಯಿಂದೆ ಎಚ್ಚರಗೊಂಡ ತಕ್ಷಣ ಕುಳಿತುಕೊಂಡು ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಸೇವಿಸಬೇಕು.
3. ಐಸ್ ಕ್ರೀಂ ತಿನ್ನಲೇ ಬಾರದು.
4. ಫ್ರಿಡ್ಜ್ ನಿಂದ ಹೊರತೆಗೆದ ಆಹಾರ ಪದಾರ್ಥಗಳನ್ನು, ಒಂದು ಗಂಟೆಯ ನಂತರ ಉಪಯೋಗಿಸಬೇಕು.
5. ತಂಪು ಪಾನೀಯವನ್ನು ಸೇವಿಸಲೇ ಬಾರದು.
6. ಮಾಡಿದ ಅಡುಗೆ ಬಿಸಿಯಾಗಿರುವಾಗಲೇ40 ನಿಮಿಷಗಳ ಒಳಗೆ ತಿನ್ನಬೇಕು.
7.ಊಟವಾದ ನಂತರ 5-10 ನಿಮಿಷಗಳ ಕಾಲ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು.
8. ಬೆಳಿಗ್ಗೆ 8.30 ರ ಒಳಗೆ ಉಪಹಾರವನ್ನು ಸೇವಿಸಬೇಕು.
9. ಬೆಳಿಗ್ಗಿನ ಉಪಹಾರದೊಂದಿಗೆ ಹಣ್ಣಿನ ರಸವನ್ನು ಕುಡಿಯಬೇಕು.
10. ಉಪಹಾರದ ನಂತರ ತಪ್ಪದೇ ಕೆಲಸ ಮಾಡಬೇಕು.
11. ಮಧ್ಯಾನ್ಹದ ಒಳಗೆ 2-3 ಲೋಟ ನೀರು ಕುಡಿಯಬೇಕು.
12. ಊಟ ಮಾಡುವ 48 ನಿಮಿಷಗಳ ಮೊದಲು ನೀರು ಸೇವಿಸಬೇಕು.
13. ಕುಳಿತುಕೊಂಡು ಊಟ ಮಾಡಬೇಕು.
14.ಆಹಾರವನ್ನು ಚೆನ್ನಾಗಿ ಜಗಿದು ನುಂಗಬೇಕು.
15. ಮಧ್ಯಾನ್ಹದ ಸಾಂಬಾರಿನಲ್ಲಿ ಓಮ ಪುಡಿಯನ್ನು ಉಪಯೋಗಿಸಬೇಕು.
16. ಮಧ್ಯಾನ್ಹ ಹೊಟ್ಟೆ ತುಂಬಾ ಊಟ ಮಾಡಬೇಕು.
17. ಮಧ್ಯಾನ್ಹದ ಊಟದ ನಂತರ ಮಜ್ಜಿಗೆ ಸೇವಿಸಬೇಕು.
18. ಊಟದ ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಬೇಕು.
19. ಸೂರ್ಯ ಮುಳುಗುವುದಕ್ಕೆ ಮುಂಚೆಯೇ ಊಟ ಮಾಡಬೇಕು.
20. ರಾತ್ರಿಯ ವೇಳೆ ಮಿತವಾಗಿ ಊಟಮಾಡಬೇಕು.
21. ರಾತ್ರಿ ಊಟದ ನಂತರ ಒಮದು ಕಿ.ಮೀ ದೂರ ನಡೆಯಬೇಕು.
22. ರಾತ್ರಿ ಊಟವಾದ ಒಮದು ಗಂಟೆಯ ನಂತರ ಹಾಲು ಕುಡಿಯಬೇಕು.
23. ರಾತ್ರಿವೇಳೆ ಲಸ್ಸೀ, ಮಜ್ಜಿಗೆ ಕುಡಿಯ ಬಾರದು.
24. ರಾತ್ರಿಯ ವೇಳೆ ಹುಳಿ ಹಣ್ಣುಗಳನ್ನು ತಿನ್ನಬಾರದು.
25. ರಾತ್ರಿ 9-10 ಗಂಟೆಗೆ ಮಲಗಬೇಕು.
26. ಸಕ್ಕರೆ, ಮೈದಾ, ಉಪ್ಪು ಕಡಿಮೆ ಉಪಯೋಗಿಸಬೇಕು.
27. ರಾತ್ರಿ ಸಲಾಡ್ ತಿನ್ನಬಾರದು.
28. ವಿದೇಶಿ ಆಹಾರ ಪದಾರ್ಥಗಳನ್ನು ತಿನ್ನಲೇ ಬಾರದು.
29. ಟೀ, ಕಾಫೀ ಕುಡಿಯದಿರಲು ಪ್ರಯತ್ನಿಸಿ.
30. ಹಾಲಿಗೆ ಅರಶಿನ ಬೆರೆಸಿ ಕುಡಿದರೆ, ಕ್ಯಾನ್ಸರ್ ಬರುವುದಿಲ್ಲ.
31. ಆಯುರ್ವೇದ ಚಿಕಿತ್ಸಾ ಪದ್ದತಿ ಒಳ್ಳೆಯದು.
32. ಅಕ್ಟೋಬರ್ ನಿಂದ ಮಾರ್ಚ್ (ಚಳಿಗಾಲ) ಬೆಳ್ಳಿ, ಬಂಗಾರದ ಪಾತ್ರೆಯಲ್ಲಿ ನೀರು ಕುಡಿಯಬೇಕು.
33. ಜೂನ್ ನಿಂದ ಸೆಪ್ಟೆಂಬರ್ ( ಮಳೆಗಾಲ) ತಿಂಗಳಲ್ಲಿ ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯಬೇಕು.
34. ಮಾರ್ಚ್ ನಿಂದ ಜೂನ್ ( ಬೇಸಿಗೆ ಕಾಲ) ಮಣ್ಣಿನ ಪ್ರಾತ್ರೆಯಲ್ಲಿರಿಸಿದ ನೀರನ್ನು ಕುಡಿಯಬೇಕು.
35. ಊಟಮಾಡುವಾಗ ನೀರು ಕುಡಿಯ ಬಾರದು.
ಅವಶ್ಯವಿದ್ದಾಗ ಮಾತ್ರ ನೀರು ಕುಡಿಯಬೇಕು.

Comments are closed.