ಧೂಮಪಾನ, ಮಧ್ಯಪಾನ, ದೇಹದಲ್ಲಿ ಅತಿಯಾದ ಬೊಜ್ಜು ಸಂಗ್ರಹದಿಂದ ಹೃದಯಾಘಾತವಾಗುತ್ತದೆ ಎಂಬುದನ್ನು ಕೇಳಿದ್ದೇವೆ. ಇದೀಗ ಭುಜದ ನೋವಿನಿಂದಲೂ ಹೃದಯ ಸಂಬಂಧಿ ಕಾಯಿಲೆ ಬರುವ ಸಾಧ್ಯತೆ ಇದೆ ಎಂಬುದನ್ನು ಅಮೆರಿಕ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ.
ಭುಜದ ನೋವು ದೇಹದೊಳಗಿನ ರಕ್ತ ಸಂಚಾರಕ್ಕೂ ಸಂಬಂಧಪಟ್ಟಿರುತ್ತದೆ. ಭುಜದ ಸಂದುಗಳಲ್ಲಿನ ನೋವುವನ್ನು ನಿರ್ಲಕ್ಷಿಸಿದರೆ ಮುಂದೆ ಅದು ಹೃದಯ ಸಂಬಂಧಿ ಕಾಯಿಲೆಗೆ ಎಡೆಮಾಡಿಕೊಡಲಿದೆ. ಅತಿಯಾದ ಭುಜದ ನೋವಿನಿಂದ ಒಬ್ಬ ವ್ಯಕ್ತಿ ಬಳಲುತ್ತಿದ್ದಾನೆಂದರೆ ಆತನಲ್ಲಿ ಹೃದಯ ಸಂಬಂಧಿ ಕಾಯಿಲೆಯ ಲಕ್ಷಣಗಳಿವೆ ಎಂದರ್ಥ.
ಹೀಗಾಗಿ ವ್ಯಕ್ತಿಯು ಸರಿಯಾದ ಔಷಧೋಪಚಾರ ಪಡೆದು ಭುಜದ ನೋವನ್ನು ಗುಣ ಮಾಡಿಕೊಳ್ಳಬೇಕು ಎಂದು ವಿಶ್ವವಿದ್ಯಾಲಯದ ಸಂಶೋಧಕ ಕುರ್ತ್ ಹೆಗ್ವುನ್ ತಿಳಿಸಿದ್ದಾರೆ. ಭುಜದ ಸಮಸ್ಯೆಯಿಂದ ಅತಿಯಾದ ಬೊಜ್ಜು, ಸಕ್ಕರೆ ಕಾಯಿಲೆ ಬರುವ ಸಾಧ್ಯತೆಯೂ ಇದೆ.