ಆರೋಗ್ಯ

ಉಸಿರಾಟದ ತೊಂದರೆಯನ್ನು ನಿವಾರಿಸಲು ಹಸಿ ಈರುಳ್ಳಿ ಸಹಕಾರಿ

Pinterest LinkedIn Tumblr

ಈರುಳ್ಳಿಯನ್ನು ಹೆಚ್ಚು ಪ್ರಮಾಣದ ಸಲ್ಫರ್ ಅಂಶಗಳಿದ್ದು ಇದರಿಂದಲೇ ಇದರ ವಾಸನೆ ಮತ್ತು ನಿಗ್ರಹಿಸುವ ಗುಣಗಳಲ್ಲಿದೆ ವಿಟಮಿನ್ ಸಿ’ ವಿಟಮಿನ್ ಬಿದ್ದ 6, ಬಯೋಟಿನ್, ಫೋಲಿಕ್ ಆಸಿಡ್, ಕ್ರೋಮಿಯಂ ಕ್ಯಾಲ್ಸಿಯಂ, ಮತ್ತು ಫೈಬರ್ ಅನ್ನು ಇದು ಒಳಗೊಂಡಿದೆ. ಆದ್ದರಿಂದಲೇ ಈರುಳ್ಳಿಯನ್ನು ಹಸಿಯಾಗಿ ಸೇವಿಸಲು ವೈದ್ಯರ ಸಲಹೆ ನೀಡುತ್ತಿದ್ದು ಇದರಿಂದ ಕೂಡ ಹೆಚ್ಚುವರಿ ಆರೋಗ್ಯ ಪ್ರಯೋಜನಗಳನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ
ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲಿರುವ ಈರುಳ್ಳಿ ಅದರಲ್ಲಿರುವ ಸಲ್ಫರ್ ಅಂಶಗಳಿಂದ ನೈಸರ್ಗಿಕ ರಕ್ತ ತೆಳುಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ ಇದರಿಂದ ಹೃದಯಾಘಾತದಂತಹ ಅಪಘಾತಗಳು ಉಂಟಾಗುವುದಿಲ್ಲ. ಪ್ಲೇಟ್ಲೆಟ್ ಸಮೂಹವನ್ನು ಇದು ತಡೆಗಟ್ಟುವುದರಿಂದ ಅಫದಮನಿಗಳು ಗಟ್ಟಿ ಯಾಗುವುದನ್ನು ಇವುಗಳು ನಿರ್ಬಂಧಿಸುತ್ತವೆ.

ಉಸಿರಾಟವನ್ನು ತೊಂದರೆಗಳನ್ನು ಪರಿಹರಿಸುತ್ತದೆ
ಈರುಳ್ಳಿಯಲ್ಲಿರುವ ಉರಿಯೂತದ ಕ್ರಿಯೆಯು ಶ್ವಾಸನಾಳ ಸಹಾಯಗಳನ್ನು ಸಡಿಲಗೊಳಿಸುತ್ತದೆ ಮತ್ತು ಅಸ್ತಮಾ ಹಾಗೂ ಬ್ರಾಂಕೈಟಿಸ್ ಅನ್ನು ಬಿಡುಗಡೆ ಮಾಡುತ್ತದೆ. ಕೆಮ್ಮು , ಶೀತ, ಜ್ವರ, ಸೀನುವಿಕೆ , ಮೂಗು ಕ‌ಟ್ಟುವಿಕೆಯನ್ನು ತಡೆಯುತ್ತದೆ.

ಮಲಬದ್ಧತೆಗೆ ಉತ್ತಮ ಔಷಧ
ಇದು ಪಚನಗೊಳ್ಳುವಂತಹ ನಾರಿನಂಶವನ್ನು ಒಳಗೊಂಡಿರುವುದರಿಂದ ನಿಮ್ಮ ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾವನ್ನು ಬೆಳೆಸುತ್ತದೆ. ಹಸಿ ಈರುಳ್ಳಿಯನ್ನು ದಿನಕ್ಕೊಂದರಂತೆ ಸೇವಿಸುವುದರಿಂದ ಮಲಬದ್ಧತೆ ದೂರಾಗುತ್ತದೆ. ಅದ್ದರಿಂದ ಪ್ರತಿನಿತ್ಯ ಈರುಳ್ಳಿ ಸೇವನೆಯಿಂದ ಉಂಟಾಗುವ ಪ್ರಯೋಜನಗಳಲ್ಲಿ ಇದೂ ಒಂದಾಗಿದೆ.

ಕ್ಷಯಕ್ಕೆ ಉತ್ತಮ ಔಷಧ
ಇದು ನಂಜುನಿರೋಧಕ ಮತ್ತು ಆಂಟಿಮೈಕ್ರೋಬಿಯಲ್ ಗುಣಗಳನ್ನು ಹೊಂದಿದೆ ಕ್ಷಯರೋಗ ಕಾರಣವಾಗಿರುವ ಮ್ಯಾಕೊಬ್ಯಾಕ್ಟೀರಿಯಾವನ್ನು ಇದು ನಿಶ್ಕಿಯಗೊಳಿಸುತ್ತದೆ ಮತ್ತು ನಿರೋಧಕ ಪರಿಣಾಮವನ್ನು ಬೀರುತ್ತದೆ. ಹಸಿ ಈರುಳ್ಳಿಯನ್ನು ನಿತ್ಯವೂ ಸೇವಿಸುವುದು ಒಳ್ಳೆಯದು.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
ಕ್ಯಾಲೋರಿ ಪ್ರಮಾಣ ಈರುಳ್ಳಿಯಲ್ಲಿ ಕಡಿಮೆ ಇರುವುದರಿಂದ ಕೊಬ್ಬು ಇಲ್ಲ. ಅಧಿಕ ರಕ್ತದೊತ್ತಡವನ್ನು ಇದು ನಿರ್ವಹಿಸುತ್ತದೆ ಪ್ರತಿ ನಿತ್ಯವೂ ಹಸಿ ಈರುಳ್ಳಿಯನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರಲಿದೆ.

ಕ್ಯಾನ್ಸರ್ ವಿರೋಧಿ ಗುಣಗಳು
ಈರುಳ್ಳಿಯಲ್ಲಿರುವ ಫೆಟೊಕೆಮಿಕಲ್ಸ್ ಡಿಲ್ಫೈಡ್ಸ್, ಟ್ರೈಸುಲ್ಪೈಡ್ಸ್, ಸೆಪೇನ್ ಮತ್ತು ಕೈರ್ಸಟಿನ್ ನಿಮ್ಮ ರಕ್ತದ ತೆಳುಗೊಳಿಸುವಿಕೆಗೆ ಸಹಾಯ ಮಾಡುತ್ತದೆ. ಇದರಿಂದ ಉರಿಯೂತ ಕಡಿಮೆಯಾಗಿ ಇದು ಕ್ಯಾನ್ಸರ್ ತಡೆಗಟ್ಟುವ ದಿವ್ಯೌಷಧಿಯಾಗಿ ಸಹಾಯ ಮಾಡಲಿದೆ.

ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಿಸುತ್ತದೆ
ಹಸಿ ಈರುಳ್ಳಿಯನ್ನು ಸೇವಿಸುವುದು ಹೊಟ್ಟೆಗೆ ಸಂಬಂಧಿತ ವಾಗಿರುವ ಸರ್ವ ರೋಗವನ್ನು ಪರಿಹರಿಸುತ್ತದೆ ಗಾಳಿ ಗುಳ್ಳೆಯ ಅಸ್ವಸ್ತತೆ, ಜೀರ್ಣಕಾರಿ ಸಮಸ್ಯೆಗಳನ್ನು ಇದು ದೂರವಾಗುತ್ತದೆ.

ರಕ್ತದ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ
ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಈರುಳ್ಳಿ ಸಹಕಾರಿ ಎಂದೆನಿಸಲಿದೆ ನಿಮ್ಮ ಸಕ್ಕರೆ ಸೇವನೆಯನ್ನು ಮಿತದಲಿಟ್ಟುಕೊಳ್ಳುವುದರ ಜೊತೆಗೆ ಈರುಳ್ಳಿ ಸೇವಿಸುವುದರಿಂದ ಸಕ್ಕರೆಯ ದುಷ್ಪರಿಣಾಮ ನಿವಾರಿಸಲಿದೆ.

Comments are closed.