ಆರೋಗ್ಯ

ಯೌವನಾವಸ್ಥೆಯಲ್ಲೆ ಕಾಡುವ ಬೆನ್ನು ನೋವಿಗೆ ಸುಲಭ ಪರಿಹಾರ ..!

Pinterest LinkedIn Tumblr

ವಯಸ್ಸಾದಂತೆ ಬೆನ್ನು ನೋವು ಕಾಣಿಸಿಕೊಳ್ಳೋದು ಸಾಮಾನ್ಯ. ಆದರೆ ಯೌವನಾವಸ್ಥೆಯಲ್ಲೆ ನಿಮಗೆ ಬೆನ್ನು ನೋವು ಕಾಣಿಸಿಕೊಂಡರೆ ನೀವು ಬೆಳಗ್ಗೆ ಎದ್ದು ದೈಹಿಕ ವ್ಯಾಯಾಮ ಮಾಡೋದು ಪ್ರಾರಂಭಿಸಬೇಕು ಎಂಬ ಸೂಚನೆಯನ್ನ ನಿಮ್ಮ ದೇಹವೇ ನಿಮಗೆ ನೀಡುತ್ತಿದೆ ಎಂದರ್ಥ.

ವಾಸ್ತವವಾಗಿ ದೈನಂದಿನ ಚಟುವಟಿಕೆಗಳನ್ನ ಮಾಡುವಾಗ ನಾವು ಮಾಡುವ ಸಣ್ಣ ತಪ್ಪುಗಳಿಂದ ಬೆನ್ನು ನೋವು ಪ್ರಾರಂಭವಾಗಬಹುದು. ಉದಾಹರಣೆಗೆ ನಾವು ದೀರ್ಘಕಾಲ ಕಂಪ್ಯೂಟರ್ ಮುಂದೆ ಕುಳಿತುಕೊಂಡು ಕೆಲಸ ಮಾಡೋದು, ಒಂದೆ ಭಂಗಿಯಲ್ಲಿ ಕುಳಿತುಕೊಳ್ಳೋದು, ನಮ್ಮ ಹೊಟ್ಟೆಯ ಮೇಲೆ ಮಲಗುವುದು, ಹೆಚ್ಚಾಗಿ ನಡೆಯದೆ ಇರೋದು ಮತ್ತು ಲಿಫ್ಟ್​ಗಳನ್ನೇ ಅವಲಂಬಿಸೋದು. ಈ ತರಹದ ಸಣ್ಣ ವಿಷಯಗಳಲ್ಲಿ ನಾವು ಚಟುವಟಿಕೆಯಿಂದ ಇರದೆ ಇರೋದು, ನಮ್ಮ ದೇಹದಲ್ಲಿನ ಸ್ನಾಯು ಚಲನೆಗೆ ತೊಂದರೆಯನ್ನ ಉಂಟು ಮಾಡುತ್ತದೆ. ಇದರಿಂದ ನಮ್ಮ ದೇಹದ ಸ್ನಾಯುಗಳ ನೋವಿಗೆ ಕಾರಣವಾಗುತ್ತದೆ.

ನಿಯಮಿತ ವ್ಯಾಯಾಮ ಮಾಡುವುದರಿಂದ ಸಾಮಾನ್ಯವಾಗಿ ನಾವು ನಮ್ಮ ಬೆನ್ನು ನೋವಿಗೆ ತಕ್ಕ ಮಟ್ಟಿಗೆ ಪರಿಹಾರ ಕಂಡುಕೊಳ್ಳಬಹುದು. ವ್ಯಾಯಾಮದಿಂದ ದೇಹದ ಸ್ನಾಯುಗಳ ಚಲನೆ ಉಂಟುಮಾಡುವ ಮೂಲಕ ಫಿಟ್​​ನೆಸ್​ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

1. ಯೋಗ
ಬೆನ್ನು ನೋವಿಗೆ ಯೋಗ ಮಾಡುವುದು ಅತ್ಯಂತ ಸಾಮಾನ್ಯವಾದ ಪರಿಹಾರಗಳಲ್ಲಿ ಒಂದು. ಯೋಗಾಸನದಲ್ಲಿ ಹಲವಾರು ರೀತಿಯ ಯೋಗ ಭಂಗಿಗಳಿವೆ. ಡಾಲ್ಫಿನ್ ಭಂಗಿ ಮತ್ತು ಮೇಲ್ಮುಖ ಬಿಲ್ಲು ಭಂಗಿಗಳು ಬೆನ್ನು ನೋವಿನ ನಿವಾರಣೆಗೆ ಸಹಕರಿಸುತ್ತವೆ. ಸ್ನಾಯುವಿನ ಫಿಟ್​ನೆಸ್​ಗೆ ಇದು ತುಂಬಾ ಉಪಯುಕ್ತ ಪರಿಹಾರ.

2. ಅಕ್ಯುಪಂಕ್ಚರ್​
ಇದರ ಹೆಸರೇ ಸೂಚಿಸುವಂತೆ, ಅಕ್ಯುಪಂಕ್ಚರ್​​ನಲ್ಲಿ ನಿಮ್ಮ ಚರ್ಮಕ್ಕೆ ಸೂಜಿಯನ್ನು ಚುಚ್ಚಲಾಗುತ್ತದೆ. ಅದನ್ನ ಊಹಿಸಿಕೊಂಡರೆ ನಿಮಗೆ ಭಯವಾಗಬಹುದು. ಆದರೆ ವಾಸ್ತವವಾಗಿ ಈ ಚಿಕಿತ್ಸೆ ಸಾಂಪ್ರದಾಯಿಕ ಔಷಧಿಗಳಿಗಿಂತ ಉತ್ತಮ ಪರಿಹಾರ ನೀಡುತ್ತದೆ ಅಂತ ಹೇಳಲಾಗುತ್ತದೆ.

3. ಬಾಡಿ ಸ್ಟ್ರೆಚಿಂಗ್ ಎಕ್ಸರ್ಸೈಸಸ್​​
ಇದು ಮುಖ್ಯವಾಗಿ ಕಾಂಡಗಳು ಮತ್ತು ಕಾಲುಗಳ ಮೇಲೆ ಕೇಂದ್ರೀಕರಿಸುತ್ತದೆ, ಆದರೆ ಈ ವ್ಯಾಯಾಮವನ್ನು ಮಾಡುವುದರ ಮುಖ್ಯ ಗುರಿ ದೇಹದ ಎಲ್ಲಾ ಸ್ನಾಯುಗಳನ್ನು ಸ್ಟ್ರೆಚ್​​ ಮಾಡುವುದು. ಬೆನ್ನು ನೋವಿನಿಂದ ಬಳಲುತ್ತಿರುವವರಿಗೆ, ಸ್ಟ್ರೆಚಿಂಗ್ ಎಕ್ಸರ್ಸೈಸ್​​ ತುಂಬಾ​ ಉಪಕಾರಿ.

4. ಮಸಾಜ್
ಪ್ರತಿದಿನ ಬೆಳಗ್ಗೆ ಮೂವತ್ತು ನಿಮಿಷಗಳ ಕಾಲ ಸಾಸಿವೆ ಎಣ್ಣೆಯಿಂದ ಬೆನ್ನಿಗೆ ಮಸಾಜ್​ ಮಾಡಬೇಕು. ನಂತರ ಬಿಸಿ ನೀರಿನಿಂದ ಸ್ನಾನ ಮಾಡಬೇಕು. ಇದನ್ನ ನಿಯಮಿತವಾಗಿ ಮಾಡಿದರೆ ನಿಮಗೆ ಬೆನ್ನುನೋವಿನಿಂದ ಪರಿಹಾರ ಸಿಗುತ್ತದೆ.

5. ಅಲೋವೆರಾ
ಅಲೋವೆರಾ ಔಷಧೀಯ ಗುಣಗಳಿಗಾಗಿ ಹೆಸರುವಾಸಿ. ಬೆನ್ನಿಗೆ ನಿಯಮಿತವಾಗಿ ಅಲೋವೆರಾ ಜೆಲ್ ಹಚ್ಚುವುದರಿಂದ ಬೆನ್ನುನೋವಿಗೆ ಪರಿಹಾರ ನೀಡುತ್ತದೆ. ಅಲೋವೆರಾ ಜೆಲ್​ ಸೇವಿಸುವುದರಿಂದಲೂ ಕೂಡ ನೋವಿನ ನಿವಾರಣೆ ಆಗುತ್ತದೆ. ಇದೊಂದು ಉತ್ತಮ ನೈಸರ್ಗಿಕ ಪರಿಹಾರವಾಗಿದೆ.

6. ಅಕ್ವಾಟಿಕ್​ ಥೆರಪಿ
ಇದೊಂದು ವಿಭಿನ್ನ ರೀತಿಯ ವರ್ಕೌಟ್​​. ಅಕ್ವಾಟಿಕ್​​ ಥೆರಪಿಯಲ್ಲಿ ರೆಸಿಸ್ಟೆನ್ಸ್​​ಗಾಗಿ ವೆಯ್ಟ್ಸ್​​ ಬದಲಾಗಿ ನೀರನ್ನು ಬಳಸಲಾಗುತ್ತದೆ. ವಾರದಲ್ಲಿ 5 ಬಾರಿಯಂತೆ 2 ತಿಂಗಳವರೆಗೆ ನಿಯಮಿತವಾಗಿ ಈ ಚಿಕಿತ್ಸೆಯನ್ನು ತೆಗೆದುಕೊಳ್ಳುವುದರಿಂದ ಬೆನ್ನು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಗರ್ಭಿಣಿ ಮಹಿಳೆಯರಿಗೂ ಕೂಡ ಅಕ್ವಾಟಿಕ್​ ಥೆರಪಿ ಉತ್ತಮ ಪರಿಹಾರ ಎನ್ನುವುದು ಸಾಬೀತಾಗಿದೆ.

7. ಬೆಳ್ಳುಳ್ಳಿ
ಬೆಳ್ಳುಳ್ಳಿ ಪೇಸ್ಟ್ ಅನ್ನು ನಿಮ್ಮ ಬೆನ್ನಿಗೆ ಹಚ್ಚಿ 30 ನಿಮಿಷ ಉಜ್ಜಬೇಕು. ನಂತರ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು. ಹಾಗೇ 3-4 ಬೆಳ್ಳುಳ್ಳಿ ಎಸಳುಗಳ ಸೇವನೆಯು ಸಹ ಬೆನ್ನುನೋವಿಗೆ ಉತ್ತಮ ಪರಿಹಾರ. ಮತ್ತೊಂದು ಪ್ಲಸ್​ ಪಾಯಿಂಟ್​ ಎಂದರೆ ಇದರಿಂದ ಯಾವುದೇ ಸೈಡ್​ ಎಫೆಕ್ಟ್ಸ್​ ಆಗುವುದಿಲ್ಲ.

Comments are closed.