ಕರಾವಳಿ

ದರಿದ್ರ ಸಬ್ಜೆಕ್ಟ್ ನಾವ್ಯಾಕೆ ಮಾತನಾಡೋಣ. ಆ ಬಗ್ಗೆ ಮಾತನಾಡಿದರೆ ಬಾಯಲ್ಲಿ ಹುಳ ಬೀಳುತ್ತದೆ: ಕೆ.ಎಸ್ ಈಶ್ವರಪ್ಪ

Pinterest LinkedIn Tumblr

ಬೈಂದೂರು: ಅದು ದರಿದ್ರ ಸಬ್ಜೆಕ್ಟ್ ನಾವ್ಯಾಕೆ ಮಾತನಾಡೋಣ. ಆ ಬಗ್ಗೆ ಮಾತನಾಡಿದರೆ ಬಾಯಲ್ಲಿ ಹುಳ ಬೀಳುತ್ತದೆ. ಮಾತೆಯರ ಮಾನ ಹರಾಜಾಗಿಲ್ಲ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಕುರಿತು ಬೈಂದೂರಿನಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ದುಶ್ಯಾಸನ ಹಾಗೆ ಮಾಡಿದ ಎಂದು ಮಾತೆಯರ ಮಾನ ಹರಾಜು ಆಗುತ್ತಾ? ಆ ಪ್ರಕರಣದಲ್ಲಿ ದುಶ್ಯಾಶನನೇ ಹಾಳಾದ. ಮಹಿಳೆಯರೆಂದರೆ ಸೀತೆ, ಸಾವಿತ್ರಿ, ದ್ರೌಪದಿ ಎಂದು ಪೂಜೆ ಮಾಡುತ್ತೇವೆ. ಈ ಪ್ರಕರಣದ ನಂತರ ರಾಜ್ಯ , ದೇಶಾದ್ಯಂತ ಚೀ ತು ಎನ್ನುತ್ತಿದ್ದಾರೆ. ಈ ದೇಶ ಸ್ತ್ರೀಯರಿಗೆ ಗೌರವ ಕೊಡುವ ದೇಶ. ದುರುಪಯೋಗ ಮಾಡಿಕೊಂಡವರು ಏನು ಅನುಭವಿಸಬೇಕೋ ಅನುಭವಿಸುತ್ತಾರೆ ಎಂದರು.

ತಮ್ಮ ಪುತ್ರ ಕಾಂತೇಶ್ ತಡೆಯಾಜ್ಞೆ ತಂದ ವಿಚಾರದಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಹೇಗಾದರೂ ಮಾಡಿ ನಮ್ಮನ್ನು ಹಿಂದೆ ಸರಿಸಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ನಮಗೆ ಅಪಮಾನ ಮಾಡಬೇಕು ಎಂಬ ಕುತಂತ್ರ ನಡೆಯುತ್ತಿದೆ. ಕುತಂತ್ರ ರಾಜಕಾರಣಕ್ಕೆ ಹೇಗೆ ಉತ್ತರ ಕೊಡಬೇಕು?. ಇದೇ ಕಾರಣಕ್ಕೆ ತಡೆಯಾಜ್ಞೆ ತಂದಿದ್ದೇವೆ. ಅದು ಬಿಟ್ಟು ಬೇರೆ ಏನೂ ಇಲ್ಲ ಎಂದರು.

Comments are closed.