ಆರೋಗ್ಯ

ಅಸ್ತಮಾ ನಿವಾರಿಸುವ ಆಡುಸೋಗೆ…ಮಾಡುವ ವಿಧಾನ ಇಲ್ಲದೆ ನೋಡಿ…

Pinterest LinkedIn Tumblr

-ಆಡುಸೋಗೆ ಎಲೆಗಳನ್ನು ನೀರಲ್ಲಿ ಕುದಿಸಿ ಕಷಾಯ ಮಾಡಿ ದಿನಕ್ಕೆ 2 ಬಾರಿ ಸೇವಿಸಿದರೆ ಗಂಟಲು ಉರಿ, ಕೆಮ್ಮು ಮತ್ತು ಹಳದಿ ಅಥವಾ ಹಸಿರು ಕಫ ಇದ್ದರೆ ಬೇಗ ಶಮನವಾಗುತ್ತದೆ.

-ಮೊಣಕಾಲು, ಮಂಡಿಗಳಲ್ಲಿ ಊತ, ನೋವು ಮತ್ತು ಕೆಂಪಾಗಿದ್ದರೆ ಆಡುಸೋಗೆ ಎಲೆಯನ್ನು ಎಳ್ಳೆಣ್ಣೆಯಲ್ಲಿ ಬೇಯಿಸಿ ಬಟ್ಟೆಯಲ್ಲಿಟ್ಟು ಕಟ್ಟಿದರೆ ಊತ, ನೋವು ಬೇಗ ಕಡಿಮೆಯಾಗುತ್ತದೆ.

-ಅಸ್ತಮಾ ಇದ್ದರೆ ಆಡುಸೋಗೆ ಎಲೆಯ ರಸಕ್ಕೆ ಶುಂಠಿ ರಸ ಮತ್ತು ಜೇನುತುಪ್ಪ ಸೇರಿಸಿ ದಿನಕ್ಕೆ 2 ರಿಂದ 4 ಬಾರಿ ಸೇವಿಸಿದರೆ ಆಸ್ತಮಾ ನಿವಾರಣೆಯಾಗುತ್ತದೆ.

-ಅಂಗೈ ಮತ್ತು ಅಂಗಾಲಿನಲ್ಲಿ ಉರಿ ಹೆಚ್ಚಿದ್ದರೆ ಆಡುಸೋಗೆ ಎಲೆಯ ಕಷಾಯ ಮಾಡಿ ಅದರಲ್ಲಿ ಅಂಗೈಮತ್ತು ಅಂಗಾಲನ್ನು 10 ರಿಂದ 15 ನಿಮಿಷ ಇಟ್ಟರೆ ಉರಿ ಬೇಗ ಶಮನವಾಗುತ್ತದೆ.

-ಹೊಟ್ಟೆಯಲ್ಲಿ ಹುಣ್ಣಾಗಿದ್ದು ಉರಿ, ನೋವಿದ್ದರೆ ಆಡುಸೋಗೆ ಎಲೆಯ ಪುಡಿಗೆ ಜೇಷ್ಠಮಧು ಪುಡಿ ಮತ್ತು ಕಲ್ಲುಸಕ್ಕರೆ ಪುಡಿ ಸೇರಿಸಿ ಸೇವಿಸಿದರೆ ಹೊಟ್ಟೆ ಹುಣ್ಣು ಗುಣವಾಗುತ್ತದೆ.

-ಆಡುಸೋಗೆ ಎಲೆಯ ರಸ, ಒಣದ್ರಾಕ್ಷಿ ಮತ್ತು ಅಳಲೆಕಾಯಿ ಹಣ್ಣಿನ ತಿರುಳನ್ನು ನೀರಿಗೆ ಹಾಕಿ ಕಷಾಯ ತಯಾರಿಸಿ ದಿನಕ್ಕೆ 2 ಬಾರಿ ಕುಡಿದರೆ ಮೂಗಿನಲ್ಲಿ ರಕ್ತ ಸೋರುವುದು ನಿಲ್ಲುತ್ತದೆ.

-ವಸಡುಗಳಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಆಡುಸೋಗೆ ಎಲೆಗಳನ್ನು ಪೇಸ್ಟ್‌ಮಾಡಿ ವಸಡುಗಳಿಗೆ ಲೇಪ ಮಾಡಿದರೆ ರಕ್ತ ನಿಲ್ಲುತ್ತದೆ.

-ಮೂತ್ರದಲ್ಲಿ ರಕ್ತ ಹೋಗುತ್ತಿದ್ದರೆ ಆಡುಸೋಗೆ ಬೇರಿನ ಕಷಾಯವನ್ನು ಸೇವಿಸಿದರೆ ಪ್ರಯೋಜನವಿದೆ.

-ಋುತುಸ್ರಾವ ಸಮಯದಲ್ಲಿ ಅಧಿಕ ರಕ್ತಸ್ರಾವ ಆಗುತ್ತಿದ್ದರೆ ಆಡುಸೋಗೆ ಎಲೆ ಪುಡಿಗೆ ಅದರದೇ ಕಷಾಯ ಮತ್ತು ಕಲ್ಲುಸಕ್ಕರೆ ಬೆರೆಸಿ ಸೇವಿಸಿದರೆ ರಕ್ತಸ್ರಾವ ನಿಲ್ಲುತ್ತದೆ .

Comments are closed.