ಆರೋಗ್ಯ

ನೀವು ದಪ್ಪಗಾಗಲು ಇಲ್ಲಿದೆ ಸರಳ ಉಪಾಯ !

Pinterest LinkedIn Tumblr

ತುಂಬಾ ದಪ್ಪವಿರುವವರಿಗೆ ಸಣ್ಣಗಾಗಲು ಆಸೆ, ತುಂಬಾ ಸಣ್ಣಗಿರುವವರು ದಪ್ಪಗಾಗಬೇಕೆಂದು ಕೊರಗುತ್ತಾರೆ. ತೂಕ ಇಳಿಸಲು, ಸಣ್ಣಗಾಗಲು ಸಾಕಷ್ಟು ವಿಧಾನಗಳಿವೆ. ಆದರೆ, ದಪ್ಪಗಾಗಲು ಸಲಹೆ ನೀಡುವವರು ಕಡಿಮೆ. ದಪ್ಪಗಾಗಬೇಕೇ ಅದಕ್ಕೆ ಕೆಲ ಆರೋಗ್ಯಕರ ಪದ್ಧತಿಗಳನ್ನು ಪಾಲಿಸಬೇಕು. ದಪ್ಪಗಾಗಲು ಜಂಕ್‌ಫುಡ್, ಫಾಸ್ಟ್ ಫುಡ್‌ಗಳನ್ನು ತಿನ್ನುವಂತಿಲ್ಲ ಇದು ಅನಾರೋಗ್ಯಕ್ಕೆ ಕಾರಣವಾಗಬಹುದು. ಹಾಗಾಗಿ, ದಪ್ಪಗಾಗಲು ಕೆಲ ಟಿಪ್ಸ್‌ಗಳು ಈ ರೀತಿ ಇವೆ.

ಪ್ರತಿದಿನ ಕಡಲೇಬೀಜವನ್ನು ರಾತ್ರಿ ನೆನಸಿ ಬೆಳಿಗ್ಗೆ ತಿನ್ನಬೇಕು. ಹೀಗೆ ಪ್ರತಿದಿನ ಅಂದರೆ ಒಂದು ತಿಂಗಳು ತಿನ್ನುವುದರಿಂದ ಶರೀರದ ತೂಕ ಹೆಚ್ಚಾಗುತ್ತದೆ.

ಪ್ರತಿದಿನ ತೆಂಗಿನಕಾಯಿ ತುರಿಗೆ ಒಣ ದ್ರಾಕ್ಷಿ ಸೇರಿಸಿ ತಿಂದರೆ ಒಂದು ತಿಂಗಳ ಒಳಗೆ ಮೈ-ಕೈ ತುಂಬಿಕೊಳ್ಳುತ್ತಾರೆ.

ಪ್ರತಿದಿನ ಎರಡು ಬಾಳೆಹಣ್ಣು ತಿಂದು ಒಂದು ಗ್ಲಾಸ್ ಹಾಲಿಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿದರೆ ಶರೀರ ದಪ್ಪವಾಗುತ್ತದೆ.

ಬಾರ್ಲಿಯನ್ನು ಸ್ವಲ್ಪ ಹುರಿದು ಅದಕ್ಕೆ ತುಪ್ಪ ಸೇರಿಸಿ ಬೇಯಿಸಬೇಕು. ಇದಕ್ಕೆ ಒಂದು ಗ್ಲಾಸ್ ಹಾಲು, ಸಕ್ಕರೆ, ಡ್ರೈಫ್ರೂಟ್ಸ್, ತುಪ್ಪದಲ್ಲಿ ಕರಿದು ಸೇರಿಸಿ ದಿನಾ ಸಂಜೆಯ ಹೊತ್ತಿಗೆ ತಿಂದರೆ ಒಂದು ತಿಂಗಳ ಒಳಗೆ ದಪ್ಪಗಾಗಬಹುದು. ಇದು ಬಹಳ ಆರೋಗ್ಯಕರ ಹಾಗೂ ಪುಷ್ಠಿದಾಯಕ, ಅಲ್ಲದೆ ಸುಲಭವಾಗಿ ಜೀರ್ಣವಾಗುತ್ತದೆ, ಮಕ್ಕಳಿಗೂ ಒಳ್ಳೆಯದು.

Comments are closed.