ಆರೋಗ್ಯ

ಬೆಳಗಿನ ತಿಂಡಿ ತಿನ್ನುವ ಮುನ್ನ ಈ ಪಾನೀಯ ಸೇವಿಸಿ, ಉತ್ತಮ ಫಲಿತಾಂಶ ಕಾಣಿರಿ….!

Pinterest LinkedIn Tumblr

ನಿಂಬೆ ಮತ್ತು ಶುಂಠಿಯನ್ನು ಸೇರಿಸಿ ಚಹಾ ಮಾಡಿ ಸೇವಿಸಿದರೆ ಉತ್ತಮ ರುಚಿ ಹಾಗೂ ಆರೋಗ್ಯಕರವಾಗಿರುತ್ತದೆ. ಈ ವಿಧಾನವು ಬಹಳ ಸರಳ ಹಾಗೂ ಸುಲಭವಾಗಿರುವುದರಿಂದ ಇದನ್ನು ತಯಾರಿಸುವುದು ಹಾಗೂ ಸೇವಿಸುವುದು ಕಷ್ಟವಾಗದು.

ನೀವು ಏನು ಮಾಡಬೇಕು..? ಒಂದು ಪಾತ್ರೆಯಲ್ಲಿ ನೀರನ್ನು ಬಿಸಿಮಾಡಲು ಇಡಿ. ನೀರು ಬಿಸಿಯಾಗಿ ಕುಡಿಯಲು ಆರಂಭಿಸಿದ ಮೇಲೆ ಉರಿಯನ್ನು ಆರಿಸಿ, ಬಳಿಕ ನೀರಿಗೆ ಶುಂಠಿಯ ತುಂಡನ್ನು ಸೇರಿಸಿ. ಅದನ್ನು 5 ನಿಮಿಷಗಳವರೆಗೆ ಮುಚ್ಚಿ. ನಂತರ ನಿಂಬೆ ರಸವನ್ನು ಸೇರಿಸಿ, ಬೆಳಗಿನ ತಿಂಡಿ ಮಾಡುವ ಮುನ್ನ ಈ ಚಹಾವನ್ನು ಸೇವಿಸುವುದು ಉತ್ತಮ ಪರಿಣಾಮಕಾರಿಯಾಗಿ ಇರುತ್ತದೆ.

ನಿಂಬೆ ಮತ್ತು ಶುಂಠಿ ಪಾನಕ ನಿಂಬೆಯ ಪಾನೀಯದ ಜೊತೆ ಶುಂಠಿಯನ್ನು ಸೇರಿಸುವುದು ಒಂದು ಉತ್ತಮವಾದ ಪಾಕವಿಧಾನ. ಇದನ್ನು ಸೇವಿಸುವುದರಿಂದ ಅರೋಗ್ಯ ಬಹಳ ಉತ್ತಮವಾಗಿರುತ್ತದೆ. ಜೊತೆಗೆ ತೂಕ ನಷ್ಟಕ್ಕೆ ಕಾರಣವಾಗುವುದು. ಶುಂಠಿ ಮತ್ತು ನಿಂಬೆಯ ಪ್ರಯೋಜನವನ್ನು ಪಡೆಯಲು ಇದೊಂದು ಪರ್ಯಾಯವಾದ ವಿಧಾನ. ಇದರ ಉಪಯೋಗ ಪಡೆಯಲು ಚಹಾವನ್ನು ತಯಾರಿಸಿ ಸೇವಿಸಬೇಕೆಂದೇನೂ ಇಲ್ಲ.

ಶುಂಠಿ ಮತ್ತು ನಿಂಬೆಯ ಇತರ ಪ್ರಯೋಜನಗಳು ರಕ್ತವನ್ನು ಶುಚಿಗೊಳಿಸುವುದು. ಚರ್ಮದ ಆರೈಕೆಯಲ್ಲಿ ಸಹಾಯ ಮಾಡುವುದು ಉತ್ತಮ ಜೀರ್ಣಕ್ರಿಯೆಗೆ ಪ್ರೋತ್ಸಾಹ ನೀಡುವುದು. ಈ ಮಿಶ್ರಣವನ್ನು ನೀವು ತೆಗೆದುಕೊಂಡು ತೂಕ ಇಳಿಸುವ ಮನಸ್ಸು ಮಾಡ್ದುತ್ತಿದ್ದಿರಿ ಎಂದಾದರೆ ಜಂಕ್ ಫುಡ್, ಫಾಸ್ಟ್ ಫುಡ್, ಪಾನೀಯಗಳು, ಕೊಬ್ಬು ಭರಿತ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಬೇಕು.

Comments are closed.