ಕರಾವಳಿ

ಡಯಾಬೀಟಿಸ್ ವ್ಯಕ್ತಿಗಳು ಸಕ್ಕರೆಯ ಬದಲು ಇದನ್ನ ತಿನ್ನಬಹುದೇ…?

Pinterest LinkedIn Tumblr

ಬೆಲ್ಲ ದೇಹಕ್ಕೆ ಶಕ್ತಿಯನ್ನು ನೀಡಿ ಆರೋಗ್ಯವನ್ನು ಹುರುಪಾಗಿಡುತ್ತದೆ. ಹೆಚ್ಚು ಸುಸ್ತು, ಆಯಾಸವಾದಾಗ ಒಂದು ತುಂಡು ಬೆಲ್ಲ, ನೀರು ಮತ್ತು ಒಂದು ಹಿಡಿ ನೆಲಗಡಲೆ ತಿಂದರೆ ಆಯಾಸ ಪರಿಹಾರವಾಗಿ ದೇಹದಲ್ಲಿ ಉತ್ಸಾಹ ತುಂಬುತ್ತದೆ.

ಬೆಲ್ಲದಲ್ಲಿ ಹಲವಾರು ಆರೋಗ್ಯಕರ ಗುಣಗಳಿವೆ. ಆಯುರ್ವೇದಲ್ಲಿ ಶ್ವಾಸಕೋಶದ ಸಮಸ್ಯೆ, ತಲೆನೋವು, ಅಸ್ತಮಾ, ಮೈಗ್ರೇನ್‌ ಮುಂತಾದ ಕಾಯಿಲೆಗಳಿಗೆ ಕೊಡುವ ಔಷಧಿಗಳಲ್ಲಿ ಬೆಲ್ಲ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇಷ್ಟೆಲ್ಲಾ ಗುಣಗಳು ಇರುವ ಬೆಲ್ಲವನ್ನು ಮಧುಮೇಹಿಗಳು ಸಕ್ಕರೆಗೆ ಬದಲಾಗಿ ಬಳಸಬಹುದು ಎಂದು ನಾವು ನಂಬಿದ್ದೇವೆ. ಆದರೆ ಇದು ನಿಜವೇ?

ಖಂಡಿತ ಅಲ್ಲ, ಮಧುಮೇಹಿಗಳು ಬೆಲ್ಲವನ್ನು ತಿನ್ನುವಂತಿಲ್ಲ. ಅದರಿಂದ ಮಾಡಿದ ಪದಾರ್ಥಗಳನ್ನೂ ತಿನ್ನುವಂತಿಲ್ಲ. ಇದರಲ್ಲಿರುವ ಸುಕ್ರೋಸ್‌ ಅಂಶ ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚುವಂತೆ ಮಾಡುವುದು. ಸಕ್ಕರೆ ತಿಂದರೆ ಮಧುಮೇಹಿಗಳಲ್ಲಿ ತಕ್ಷಣವೇ ಸಕ್ಕರೆಯಂಶ ಜಾಸ್ತಿಯಾದರೆ, ಬೆಲ್ಲ ತಿಂದರೆ ನಿಧಾನಕ್ಕೆ ಸಕ್ಕರೆಯಂಶ ಹೆಚ್ಚಾಗುವುದು.

ಹಾಗಾಗಿ ಬೆಲ್ಲವನ್ನು ಸಕ್ಕರೆ ಬದಲಾಗಿ ಬಳಸುತ್ತಿದ್ದರೆ ಅದನ್ನು ಈಗಲೇ ನಿಲ್ಲಿಸಿಬಿಡಿ.

Comments are closed.