ಆರೋಗ್ಯ

ದೀರ್ಘಕಾಲದವರೆಗೆ ಕಾಡುವ ಕೆಮ್ಮು ನಿವಾರಣೆಗೆ ಮನೆಮದ್ದು

Pinterest LinkedIn Tumblr

ಮಳೆಗಾಲ, ಚಳಿಗಾಲ ಬಂತೆಂದರೆ ಸಾಕು, ಗಂಟಲಿನಲ್ಲಿ ಕಫ ಉತ್ಪತ್ತಿಯಾಗಿ ಗಂಟಲಿನಲ್ಲಿ ಕಿರಿ ಕಿರಿಯನ್ನುಂಟು ಮಾಡುತ್ತದೆ. ಇದು ಕೆಮ್ಮಿಗೆ ಕಾರಣವಾಗುತ್ತದೆ. ಕೆಮ್ಮು ಉಂಟಾದರೆ ರಾತ್ರಿಯೆಲ್ಲಾ ಸರಿಯಾಗಿ ನಿದ್ದೆ ಮಾಡಲೂ ಆಗದೆ, ಕೆಮ್ಮಿ ಕೆಮ್ಮಿ ಎದೆನೋವು, ನಿದ್ರಾಹೀನತೆ ಸಮಸ್ಯೆಗಳು ಕಾಡತೊಡಗುತ್ತವೆ.

ಇದಕ್ಕೆ ಅದೆಷ್ಟೋ ಮನೆಮದ್ದುಗಳು ಅಥವಾ ಮಾತ್ರೆ, ಸಿರಪ್ ಗಳನ್ನು ತಗೊಂಡರು ಕೆಲವೊಮ್ಮೆ ಕೆಮ್ಮು ಗುಣವಾಗದೆ, ದೀರ್ಘಕಾಲದವರೆಗೆ ಕಾಡುವುದುಂಟು.
ಆದರೆ ವೀಳ್ಯದೆಲೆಯಲ್ಲಿದೆ ಇದಕ್ಕೆ ಪರಿಣಾಮಕಾರಿ ಔಷಧಿ. ಅಷ್ಟೇ ಅಲ್ಲ, ಇದರಲ್ಲಿದೆ ಇನ್ನೂ ಹಲವಾರು ಔಷಧೀಯ ಗುಣಗಳಿವೆ;

ವೀಳ್ಯದೆಲೆ ರಸಕ್ಕೆ ತುಳಸಿ ಎಲೆಯ ರಸ, ಒಂದು ಚಮಚ ಜೇನುತುಪ್ಪ ಸೇರಿಸಿ ಸೇವಿಸಿದರೆ ನೆಗಡಿ ವಾಸಿಯಾಗುತ್ತದೆ.
ಒಂದರೆಡು ವೀಳ್ಯದೆಲೆಯನ್ನು ದಿನಕ್ಕೆ ಎರಡು ಮೂರು ಬಾರಿ ಜಗಿದರೆ ಕಫ ನೀರಾಗುತ್ತದೆ. ಇದರಿಂದ ಕೆಮ್ಮು ಕೂಡ
ಒಂದು ಚಮಚ ವೀಳ್ಯದೆಲೆಯ ರಸವನ್ನು ಒಂದು ಚಮಚ ಜೇನುತುಪ್ಪದ ಜತೆ ಸೇವಿಸಿದರೆ ಒಣ ಕೆಮ್ಮು ಕಮ್ಮಿಯಾಗುತ್ತದೆ.
ವೀಳ್ಯದೆಲೆಯನ್ನು ಕಿವಿಗಳ ಮೇಲೆ ಕಟ್ಟಿದರೆ ಗ್ಯಾಸ್ಟಿಕ್‌ನಿಂದ ಉಂಟಾಗುವ ತಲೆ ನೋವು ವಾಸಿಯಾಗುತ್ತದೆ.
ಗಾಯಕ್ಕೆ ವೀಳ್ಯದೆಲೆಯ ರಸದ ಜೊತೆಗೆ ನಿಂಬೆ ರಸವನ್ನು ಬೆರೆಸಿ, ಹಚ್ಚಿದರೆ ಗಾಯ ಬೇಗ ವಾಸಿಯಾಗುತ್ತದೆ.
ಕೆಮ್ಮು ಹಾಗೂ ಕಫದ ಸಮಸ್ಯೆ ಉಂಟಾದಾಗ ಒಂದು ವೀಳ್ಯದೆಲೆಯಲ್ಲಿ ಒಂದೆರಡು ಹರಳು ಉಪ್ಪು ಹಾಗೂ ಒಂದೆರಡು ಕರಿಮೆಣಸನ್ನು ಸೇರಿಸಿ ಸೇವಿಸಿದರೆ ಈ ಸಮಸ್ಯೆಗೆ ಮುಕ್ತಿ ಸಿಗುತ್ತದೆ.

Comments are closed.