ಆರೋಗ್ಯ

ಹಲಸಿನ ಹಣ್ಣು ವೀರ್ಯಾಣುಗಳ ಸಾಮರ್ಥ್ಯ ಹೆಚ್ಚಿಸುತ್ತೆ ! ಇನ್ನೇನು ಆರೋಗ್ಯಕರ ಗುಣಗಳು ಇವೆ ನೋಡಿ…

Pinterest LinkedIn Tumblr

ಇನ್ನೇನು ಹಲಸಿನ ಹಣ್ಣಿನ ಸೀಸನ್‌ ಮುಗೀತಾ ಬಂತು…ಈ ಸೀಸನ್‌ ಮುಗಿದ ಮೇಲೆ ಮತ್ತೆ ಈ ಹಣ್ಣನ್ನು ಸವಿಯಲು ಹಲವು ತಿಂಗಳು ಕಾಯಬೇಕಾಗುತ್ತದೆ. ಹಲಸಿನ ಕಾಯಿ ಹಾಗೂ ಹಣ್ಣಿನಿಂದ ಹಲವಾರು ಬಗೆಯ ತಿನಿಸುಗಳನ್ನು ಮಾಡಿ ಈ ಸೀಸನ್‌ನಲ್ಲಿ ಸವಿಯುತ್ತಾರೆ. ಈ ಹಣ್ಣಿನಲ್ಲಿರುವ ಅದ್ಭುತ ಗುಣಗಳ ಬಗ್ಗೆ ತಿಳಿದರೆ ಇದರ ಸೀಸನ್‌ ಮುಗಿಯುವವರೆಗೆ ಒಂದು ದಿನ ಮಿಸ್ ಮಾಡದೆ ತಿನ್ನುವಿರಿ.

ನೀವು 100 ಗ್ರಾಂ ಹಲಸಿನ ಹಣ್ಣು ತಿಂದರೆ ಇಷ್ಟೆಲ್ಲಾ ಪೋಷಕಾಂಶಗಳು ದೊರೆಯುತ್ತವೆ:
ಶಕ್ತಿ 95kcal, ಕಾರ್ಬೋಹೈಡ್ರೇಟ್ಸ್ 19 ಗ್ರಾಂ, ನಾರಿನಂಶ 1.5 ಗ್ರಾಂ, ಕೊಬ್ಬು 0.64 ಗ್ರಾಂ, ಪ್ರೊಟೀನ್‌ 1.72ಗ್ರಾಂ, ಕೊಬ್ಬು0.64 ಗ್ರಾಂ, ಪ್ರೊಟೀನ್‌ 1.72ಗ್ರಾಂ, ವಿಟಮಿನ್‌ ಎ, ವಿಟಮಿನ್‌ ಸಿ, ವಿಟಮಿನ್‌ ಇ, ಕ್ಯಾಲ್ಸಿಯಂ, ಕಬ್ಬಿಣದಂಶ, ಮೆಗ್ನಿಷಿಯಂ, ರಂಜಕ, ಪೊಟಾಶ್ಯಿಯಂ, ಸತು ಇನ್ನು ಹಲವು ಪೋಷಕಾಂಶಗಳಿವೆ.

ಹಲಸಿನ ಹಣ್ಣಿನಲ್ಲಿರುವ ಆರೋಗ್ಯಕರ ಗುಣಗಳು
1. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ
2. ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ
3. ಹೃದಯ ಆರೋಗ್ಯವನ್ನು ವೃದ್ಧಿಸುತ್ತದೆ
4. ರಕ್ತಹೀನತೆ ಸಮಸ್ಯೆ ಉಂಟಾಗುವುದಿಲ್ಲ
5. ಜೀರ್ಣಕ್ರಿಯೆಗೆ ಸಹಕಾರಿ
6. ದೊಡ್ಡ ಕರುಳಿನ ಕ್ಯಾನ್ಸರ್‌ ತಡೆಗಟ್ಟುತ್ತದೆ
7. ಕಣ್ಣಿನ ದೃಷ್ಟಿಯನ್ನು ತೀಕ್ಷ್ಣಗೊಳಿಸುತ್ತೆ
8. ಅಸ್ತಮಾ ಕಾಯಿಲೆಯನ್ನು ಕಡಿಮೆ ಮಾಡುತ್ತೆ
9. ಬೇಗನೆ ಮುಪ್ಪು ಬರದಂತೆ ತಡೆಯುತ್ತದೆ
10. ಬೆನ್ನಿನ ಮೂಳೆಯನ್ನು ಬಲವಾಗಿಸುತ್ತದೆ
11. ಪುರುಷರಲ್ಲಿ ವೀರ್ಯಾಣುಗಳ ಸಾಮರ್ಥ್ಯ ಹೆಚ್ಚಿಸುತ್ತೆ

Comments are closed.