ಆರೋಗ್ಯ

ಅಡುಗೆ ಮಾಡುವಾಗ ಈ ಎಣ್ಣೆ ಬಳಸಿ ಅರೋಗ್ಯದಲ್ಲಿ ಬದಲಾವಣೆ ಕಾಣಿರಿ

Pinterest LinkedIn Tumblr

ನಿಮ್ಮ ಮನೆಗಳಲ್ಲಿ ಅಡುಗೆಗೆ ಒಗ್ಗರಣೆ ಹಾಕಲು ಉಪಯೋಗಿಸುವ ಸಾಸಿವೆಯಲ್ಲಿ ಹಲುವು ರೀತಿಯ ಉಪಯೋಗಗಳು ಇವೆ.ನೀವು ಸಾಸಿವೆ ಎಣ್ಣೆ ಬಳಸಿದರೆ ನಿಮ್ಮ ಅರೋಗ್ಯ ಇನ್ನು ಉತ್ತಮವಾಗಿರುತ್ತೆ. ನೀವು ಮನೆಯಲ್ಲಿ ಅಡುಗೆ ಮಾಡುವಾಗ ಆದೊಷ್ಟು ಸಾಸಿವೆ ಎಣ್ಣೆ ಬಳಸಿ ನಿಮ್ಮ ಅರೋಗ್ಯ ಕಾಪಾಡಿಕೊಳ್ಳಿ

ಸಾಸಿವೆ ಎಣ್ಣೆಯ ಲಾಭಗಳು:
1.ಸಾಸಿವೆ ಎಣ್ಣೆ ನಿಮ್ಮ ಹೃದಯಕ್ಕೆ ಅತ್ಯುತ್ತಮ. ದಿನನಿತ್ಯ ಅಡುಗೆಯಲ್ಲಿ ಬಳಸಿ ನಿಮ್ಮ ಹೃದಯಕ್ಕೆ ಸಂಬಂಧಿಸಿದೆ ಕಾಯಿಲೆಗಳು ಬರುವುದಿಲ್ಲ.

2.ಸಂಧಿವಾತ ಮತ್ತು ಸ್ನಾಯು ಸೆಳೆತದ ನೋವನ್ನು ಕಡಿಮೆಗೊಳಿಸುತ್ತದೆ ಮತ್ತು ಇದರ ಜೊತೆ ನಿಮ್ಮ ತೂಕ ಇಳಿಸಲು ಸಹಕಾರಿ.

3.ನಿಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ. ನಿಮ್ಮ ಅಡುಗೆಯಲ್ಲಿ ಬಳಸಿ ನೋಡಿ.

4.ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಾಸಿವೆ ಪುಟ್ಟದಾದರೂ ಇದರಲ್ಲಿರುವ ಖನಿಜಗಳ ಸಂಖ್ಯೆ ದೊಡ್ಡದು.ಕಬ್ಬಿಣ ಮ್ಯಾಂಗನೀಸ್, ತಾಮ್ರ ಮೊದಲಾದ ಖನಿಜಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

5.ಬ್ಯಾಕ್ಟೀರಿಯಾ ನಿವಾರಕ: ಸಾಸಿವೆ ಎಣ್ಣೆಯಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ದೇಹಕ್ಕೆ ಮಾರಕವಾದ ಬಹಳಷ್ಟು ಬ್ಯಾಕ್ಟೀರಿಯಾಗಳನ್ನು ತೊಗಿಸುತ್ತದೆ. ವಿಶೇಷವಾಗಿ ಹೊಟ್ಟೆ, ಮೂತ್ರಕೋಶ, ಮೂತ್ರನಾಳಗಳಲ್ಲಿ ಸೋಂಕು ಉಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ.

6.ವೃದ್ಧಾಪ್ಯವನ್ನು ದೂರವಿಡುತ್ತದೆ: ಸಾಸಿವೆ ಕಾಳಿನಲ್ಲಿ ಕ್ಯಾರೋಟಿನ್, ಝಿಯಾಕ್ಸಾಥಿನ್ ಎ,ಸಿ ಮತ್ತು ಕೆ ಹೇರಳವಾಗಿವೆ. ಇದರಿಂದ ವೃದ್ಧಾಪ್ಯವನ್ನು ದೂರವಿರಿಸುತ್ತದೆ.ಸಾಸಿವೆ ಎಣ್ಣೆಯ ಮಸಾಜ್ ಸಾಧ್ಯವಾಗದಿದ್ದರೆ ಒಂದು ಬಟ್ಟೆಯಲ್ಲಿ ಸಾಸಿವೆ ಕಾಳುಗಳನ್ನು ಹಾಕಿ ಜಜ್ಜಿ ಸ್ನಾನ ಮಾಡುವ ನೀರಿನಲ್ಲಿ ಮುಳುಗಿಸಿ ಆ ನೀರಿನಲ್ಲಿ ಸ್ನಾನ ಮಾಡುವುದರಿಂದಲೂ ಉತ್ತಮವಾದದ್ದು.

Comments are closed.