ಆರೋಗ್ಯ

ಪ್ರತಿ ದಿನ ಏಲಕ್ಕಿ ಉಪಯೋಗದ ಸರ್ವಕಾಲಿಕ ಸತ್ಯ ಬಗ್ಗೆ ತಿಳಿಯಿರಿ

Pinterest LinkedIn Tumblr

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಏಲಕ್ಕಿ ಸಣ್ಣದಾದರೂ ಅದರ ಉಪಯೋಗಗಳು ಲೆಕ್ಕಕ್ಕೆ ಸಿಗದಷ್ಟು. ಸಣ್ಣದಾದ ಏಲಕ್ಕಿಯನ್ನು ನಾವು ಸಾಮಾನ್ಯವಾಗಿ ಆಹಾರದ ಸ್ವಾದ ಹೆಚ್ಚಿಸಲು ಬಳಸಿಕೊಳ್ಳುವುದು ತಿಳಿದಿರುವ ವಿಷಯ. ಇದರ ಜೊತೆಗೆ ಹಲವು ರೋಗಗಳ ಶಮನಕ್ಕೆ ಔಷದಿಯ ರಾಮಬಾಣವಾಗಿರುವುದು ಇದರ ವಿಶೇಷ. ನಿಯಮಿತವಾಗಿ ಏಲಕ್ಕಿ ಸೇವಿಸುವುದರಿಂದ ರೋಗ ನಿರೋಧಕ, ಜೀರ್ಣಶಕ್ತಿ ವೃದ್ಧಿಸಿ, ವ್ಯಕ್ತಿಯು ಚೈತನ್ಯಯುಕ್ತವಾಗಿ ಮತ್ತು ಲವಲವಿಕೆಯಿಂದಿರಲು ಸದ್ಯ. ಅಲ್ಲದೆ ತಲೆಗೂದಲಿನ ಆರೋಗ್ಯವು ಚನ್ನಾಗಿರುತ್ತದೆ. ಹಾಗಾಗಿ ಊಟದ ಅನಂತರ ಒಂದೆರಡು ಕಾಳು ಏಲಕ್ಕಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು..

* ನಿಯಮಿತವಾಗಿ ಏಲಕ್ಕಿ ಸೇವಿಸುವುದರಿಂದ ರೋಗ ನಿರೋಧಕ, ಜೀರ್ಣಶಕ್ತಿ ವೃದ್ಧಿಸಿ, ವ್ಯಕ್ತಿಯು ಚೈತನ್ಯಯುಕ್ತವಾಗಿ ಮತ್ತು ಲವಲವಿಕೆಯಿಂದಿರಲು ಸಾಧ್ಯ. ಅಲ್ಲದೆ ತಲೆಗೂದಲಿನ ಆರೋಗ್ಯವೂ ಚೆನ್ನಾಗಿರುತ್ತದೆ. ಹಾಗಾಗಿ ಊಟದ ಅನಂತರ ಒಂದೆರಡು ಕಾಳು ಏಲಕ್ಕಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೇಯದು..

* ಲೈಂಗಿಕ ಆಸಕ್ತಿ ಹೆಚ್ಚಳಕ್ಕೆ ಏಲಕ್ಕಿ ಹಾಲಿನ ಸೇವನೆ : ಹಾಲಿನಲ್ಲಿ ಏಲಕ್ಕಿ ಹಾಕಿ ಕುದಿಸಿ ಇದಕ್ಕೆ ಸ್ವಲ್ಪ ಜೇನು ಸೇರಿಸಿ. ಪ್ರತಿ ದಿನ ರಾತ್ರಿ ನಿಯಮಿತವಾಗಿ ಸೇವನೆ ಮಾಡಿದರೆ ಲೈಂಗಿಕ ಆಸಕ್ತಿ ಹೆಚ್ಚಾಗುತ್ತದೆ, ಜೊತೆಗೆ ಮಧುರ ದಾಂಪತ್ಯದ ಜೀವನ ನಿಮ್ಮದಾಗುತ್ತದೆ.

* ರಕ್ತ ಕ್ಲೀನ್ ಆಗುತ್ತದೆ : ಏಲಕ್ಕಿಯಲ್ಲಿರುವ ರಾಸಾಯನಿಕ ಗುಣದಿಂದಾಗಿ ಶರೀರದಲ್ಲಿರುವ ಫ್ರೀ ರೆಡಿಕಲ್ ಮತ್ತು ಇತರ ವಿಷಯುಕ್ತ ಕಣಗಳು ದೂರವಾಗುತ್ತವೆ. ಇದರಿಂದ ರಕ್ತ ಶುದ್ಧವಾಗುತ್ತದೆ.

* ಡಿಫ್ರೆಷನ್ ಕಡಿಮೆ ಮಾಡುತ್ತೆ :ಈಗಿನ ಕಾಲದಲ್ಲಿ ಒತ್ತಡ ಅನ್ನೋದು ಯಾರಿಗೆ ಇರಲ್ಲ ಹೇಳಿ. ಅದ್ರಿಂದ ಪ್ರತಿ ಮನೆಯಲ್ಲೂ ಒಬ್ರಲ್ಲ ಒಬ್ಬ ಸದಸ್ಯ ಸಂಕುಚಿತಗೊಳ್ತಾರೆ. ಆದ್ರೆ ಹಾಗೆ ಆಗಬಾರದು, ಡಿಫ್ರೆಷನ್ ಸಮಸ್ಯೆ ದೂರವಾಗ್ಬೇಕು ಅಂದ್ರೆ ಮನೆಯಲ್ಲಿ ಪರಿಮಳಯುಕ್ತವಾದ ಒಂದು ಏಲಕ್ಕಿ ಮಾಲೆಯನ್ನು ಇಟ್ಟಿರಿ. ಅಡುಗೆ ಮನೆಯ ಸಾಂಬಾರ ಪದಾರ್ಥದ ಡಬ್ಬದಲ್ಲಿ 100 ಗ್ರಾಂನಷ್ಟೋ, 200 ಗ್ರಾಂನಷ್ಟೋ ಏಲಕ್ಕಿಯನ್ನು ಮುಚ್ಚುಳ ಹಾಕಿ ಡಬ್ಬದಲ್ಲಿ ಇಟ್ಟರೆ ಸಾಲದು. ಅದ್ರ ಘಮಘಮಿಸುವ ಸ್ವಾದ ಮನೆಯ ಮೂಲೆಮೂಲೆಯನ್ನು ಪಸರಿಸಿದ್ರೆ ಮನೆಯ ಸದಸ್ಯರಲ್ಲಿ ಡಿಫ್ರೆಷನ್ ಸಮಸ್ಯೆ ಬಾಧಿಸೋದಿಲ್ಲ.

* ಧನಾತ್ಮಕ ಶಕ್ತಿ ಹೆಚ್ಚಿಸುತ್ತೆ: ಪ್ರತಿಯೊಬ್ಬರ ಮನೆಯಲ್ಲೂ ಪಾಸಿಟೀವ್ ಎನರ್ಜಿ ಇರಬೇಕು ಅಂತ ಬಯಸ್ತೀವಿ. ಈ ಪಾಸಿಟೀವ್ ಎನರ್ಜಿ ಕೇವಲ ವಾಸ್ತುಪ್ರಕಾರ ಮನೆಕಟ್ಟಿದಾಗ ಮಾತ್ರವಲ್ಲ ಬದಲಾಗಿ ನೀವು ಹೇಗೆ ನಿಮ್ಮ ಮನೆಯನ್ನು ಸ್ವಚ್ಛ ಮತ್ತು ಸುಂದರವಾಗಿ ಇಟ್ಟುಕೊಂಡಿದ್ದೀರಿ ಅನ್ನೋದ್ರ ಮೇಲೂ ಕೂಡ ಆಧಾರಿತವಾಗಿರುತ್ತೆ. ಆ ನಿಟ್ಟಿನಲ್ಲಿ ಸಹಾಯ ಮಾಡುವುದೇ ಏಲಕ್ಕಿ ಮಾಲೆ. ಮನೆಯಲ್ಲಿ ಏಲಕ್ಕಿ ಮಾಲೆ ಇದ್ರೆ ಆ ಮನೆಯಲ್ಲಿ ಧನಾತ್ಮಕ ಶಕ್ತಿಗೆ ಕೊರತೆಯೇ ಇರೋದಿಲ್ಲ.

*ಉತ್ತಮ ಉಸಿರಾಟಕ್ಕೆ ಸಹಕಾರಿ ಕೆಲವರಿಗೆ ಉಸಿರಾಟ ಪ್ರಕ್ರಿಯೆ ಉತ್ತಮವಾಗಿರುವುದಿಲ್ಲ. ಉಸಿರಾಟದಲ್ಲಿ ವಾಸನೆಯಾಗುವ ಸಮಸ್ಯೆ ಇರುತ್ತೆ. ಬಾಯಿ ಬಿಟ್ರೆ ಇನ್ನೊಬ್ಬರಿಗೆ ಕಿರಿಕಿರಿಯನ್ನಿಸುವ ಸಮಸ್ಯೆ ಅದು. ಇಂತಹ ಸಮಸ್ಯೆ ಮನೆಯ ಯಾವ ಸದಸ್ಯರಿಗೂ ಬರಬಾರದು ಅಂದ್ರೆ ಅದಕ್ಕೆ ನೆರವಾಗುವುದು ಏಲಕ್ಕಿ ಮಾಲೆ. ಮನೆಯಲ್ಲಿರುವ ಏಲಕ್ಕಿ ಮಾಲೆಯ ಘಮ ಇಡೀ ಮನೆಯ ವಾತಾವರಣವನ್ನು ಬದಲಿಸುವುದು ಮಾತ್ರವಲ್ಲ ಬದಲಾಗಿ ಮನೆಯ ಎಲ್ಲಾ ಸದಸ್ಯರ ಸರಾಗವಾದ ಮತ್ತು ಸ್ವಚ್ಛ ಉಸಿರಾಟಕ್ಕೆ ಕಾರಣವಾಗುತ್ತೆ.

*ಹೃದಯದ ಆರೋಗ್ಯವನ್ನು ಸಮಸ್ಥಿತಿಯಲ್ಲಿಡಲು ಇದು ಸಹಕಾರಿ. ಅಸ್ತಮಾ ಸಮಸ್ಯೆಯಿಂದ ಬಳಲುವವರು ಹೆಚ್ಚು ಏಲಕ್ಕಿ ಉಪಯೋಗಿಸುವುದು ಒಳ್ಳೆಯದು. ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಕಾರಿ…

* ನೆಗಡಿ ಮತ್ತು ಕೆಮ್ಮು ಸಮಸ್ಯಾಯೇ ನಿವಾರಿಸಲು. ಚರ್ಮದ ಕಾಂತಿಯನ್ನು ಹೆಚ್ಚಿಸಲು. ಅಸಿಡಿಟಿಯಿಂದ ತೇಗು ಬರುತ್ತಿದ್ದರೆ ಏಲಕ್ಕಿ ಸೇವನೆಯಿಂದ ಕಡಿಮೆಯಾಗುತ್ತದೆ.

Comments are closed.