ಕರ್ನಾಟಕ

ಸಿ.ಎಂ.ಇಬ್ರಾಹಿಂ ಐಎಸ್​ಐ ಏಜೆಂಟ್​, ಮೊದಲು ಅವರ ತನಿಖೆಯಾಗಲಿ: ಪ್ರಮೋದ್​ ಮುತಾಲಿಕ್​

Pinterest LinkedIn Tumblr


ಬೆಂಗಳೂರು: ಗೌರಿ ಹತ್ಯೆ ಪ್ರಕರಣದಲ್ಲಿ ಪ್ರಮೋದ್​ ಮುತಾಲಿಕ್​ ಹೆಡ್​ ಆಫೀಸ್​ ಎಂದು ಹೇಳಿರುವ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಶ್ರೀರಾಮಸೇನೆ ಮುಖಂಡ ಪ್ರಮೋದ್​ ಮುತಾಲಿಕ್​, ಇಬ್ರಾಹಿಂ ಐಎಸ್​ಐ ಏಜೆಂಟ್ ಎಂದು ನಾನು ಹೇಳುತ್ತೇನೆ. ಮೊದಲು ಅವರನ್ನೇ ತನಿಖೆಗೆ ಒಳಪಡಿಸಬೇಕು ಎಂದಿದ್ದಾರೆ.

ರಾಜಾಜಿನಗರ ರಾಮಮಂದಿರದಲ್ಲಿ ನಡೆದ ಜನಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಗೌರಿ ಹತ್ಯೆಗೂ, ಶ್ರೀರಾಮಸೇನೆಗೂ ಯಾವುದೇ ಸಂಬಂಧವಿಲ್ಲ. ಈ ಕೇಸ್​ನಲ್ಲಿ ಶ್ರೀರಾಮಸೇನೆ, ಹಿಂದು ಜಾಗೃತಿ ಸಂಘಟನೆ ಹೆಸರು ಕೇಳಿ ಬರುತ್ತಿರುವುದು ಸುಳ್ಳು. ದಾರಿಯಲ್ಲಿ ಹತ್ತು ಹೆಜ್ಜೆ ಹೋದರೆ ಸಾವಿರಾರು ಜನರು ಫೋಟೋ ತೆಗೆದುಕೊಳ್ಳುತ್ತಾರೆ. ಅವರೆಲ್ಲ ಶ್ರೀರಾಮಸೇನೆ ಕಾರ್ಯಕರ್ತರಲ್ಲ. ಅಭಿಮಾನಿಗಳಷ್ಟೇ ಎಂದಿದ್ದಾರೆ.
ಗೌರಿ ಹತ್ಯೆ ತನಿಖೆಯಲ್ಲಿ ನಾಟಕ ನಡೆಯುತ್ತಿದೆ. ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿರುವ ಪರಶುರಾಮ್​ ವಾಗ್ಮೋರೆ ಹಿಂದಿರುವ ದುಷ್ಟ ಶಕ್ತಿಯನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದ್ದಾರೆ.

ಎಲ್ಲ ಪ್ರಗತಿಪರರೂ ಕಾಂಗ್ರೆಸ್​ ಏಜೆಂಟರು. ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ಪ್ರಗತಿಪರರ ವಿದೇಶ ಯಾತ್ರೆಗೆ ಹಣ ಹೊಡೆಯುತ್ತಿದ್ದರು. ಮೋದಿ ಅಧಿಕಾರಕ್ಕೆ ಬಂದ ಮೇಲೆ ಅದನ್ನೆಲ್ಲ ಕಟ್​ ಮಾಡಿದರು. ಹಾಗಾಗಿ ಅವರೆಲ್ಲ ಸೇರಿ ಮೋದಿ ವಿರುದ್ಧ ಧ್ವನಿ ಎತ್ತಿದ್ದಾರೆ. ಪ್ರಶಸ್ತಿ ವಾಪಸ್​ ಕೊಟ್ಟಿದ್ದಾರೆ ಹೊರತು ಯಾರೂ ಚೆಕ್​ನ್ನು ಹಿಂದಿರುಗಿಸಿಲ್ಲ ಎಂದು ಕುಟುಕಿದರು.

Comments are closed.