
ಚಿತ್ರದುರ್ಗ: ಹಾಸ್ಟೆಲ್ಗಳಿಗೆ ಬೆತ್ತಲೆಯಾಗಿ ನುಗ್ಗಿ ಮಹಿಳೆಯರ ಒಳಉಡುಪು ಕದಿಯುತ್ತಿದ್ದ ವಿಕೃತ ಕಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಶಿವನಿ ಗ್ರಾಮದವನಾದ ಕಲ್ಲೇಶ(27), ಚಿತ್ರದುರ್ಗದ ಹೊಸದುರ್ಗದಲ್ಲಿದ್ದ ಹಾಸ್ಟೆಲ್ಗೆ ಬೆತ್ತಲೆಯಾಗಿ ನುಗ್ಗಿ ಅಲ್ಲಿ ಸಿಗುವ ಮಹಿಳೆಯರ ಒಳ ಉಡುಪುಗಳನ್ನು ಧರಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಆತಂಕ ಮೂಡಿಸಿದ್ದ ಕಲ್ಲೇಶನ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿತ್ತು. ಹೊಸದುರ್ಗ ಪೊಲೀಸರು ವಿಕೃತ ಕಾಮಿಯನ್ನು ಬಂಧಿಸಿದ್ದಾರೆ.
Comments are closed.