ಆರೋಗ್ಯ

ಹಾಗಲಕಾಯಿಯನ್ನು ಯಾರೆಲ್ಲ ಸೇವಿಸಬಾರದು…ಯಾಕೆ ಸೇವಿಸಬಾರದು..?

Pinterest LinkedIn Tumblr

ಹಸಿರು ತರಕಾರಿಗಳನ್ನು ಸೇವಿಸುವುದು ಉತ್ತಮ ಅನ್ನುತ್ತಾರೆ ವೈದ್ಯರು. ಆದರೆ ಅವುಗಳಲ್ಲಿ ಯಾವುದನ್ನೂ ಸೇವಿಸ ಬೇಕು ಯಾವುದನ್ನೂ ಸೇವಿಸ ಬಾರದು ಅನ್ನೋ ಮಾಹಿತಿಯನ್ನು ನಾವು ತಿಳಿಯುವುದು ಉತ್ತಮ. ಹಾಗಾದರೆ ಹಾಗಲಕಾಯಿಯನ್ನು ಯಾರೆಲ್ಲ ಸೇವಿಸ ಬಾರದು ಅನ್ನೋದನ್ನ ತಿಳಿಯೋಣ ಬನ್ನಿ…

ಯಾವಾಗಲು ಕಡು ಹಸಿರು ಬಣ್ಣದ ಹಾಗಲಕಾಯಿಯನ್ನೆ ಉಪಯೋಗಿಸಿ. ನೀಲಿ ಅಥವಾ ಕೇಸರಿ ಬಣ್ಣದ ಕಲೆಗಳಿರುವ ಹಾಗಲಕಾಯಿ ತಿನ್ನಬೇಡಿ. ಗರ್ಭಾವಸ್ಥೆಯಲ್ಲಿ ಹಾಗಲಕಾಯಿ ತಿಂದರೆ ಅದರಲ್ಲಿರುವ ಮೊಮೊಕೈರಿನ್ ನಿಂದ ಗರ್ಭಾಪಾತವಾಗುತ್ತದೆ. ಫರ್ಟಿಲಿಟಿ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುತ್ತಿರುವ ಮಹಿಳೆ ಅಥವಾ ಪುರುಷರು ಇದನ್ನು ಸೇವಿಸಬಾರದು. ಯಾಕೆಂದರೆ ಇದರಿಂದ ಔಷಧಿ ಪ್ರಭಾವ ಕಡಿಮೆಯಾಗುತ್ತದೆ. ಹಾಗಲಕಾಯಿ ಜಾಸ್ತಿ ತಿನ್ನುವುದರಿಂದ ಲಿವರ್ ನಲ್ಲಿ ಎಂಜಾಯಿಮ್ಸಾ ಹೆಚ್ಚಾಗಿ ಲಿವರ್ ಇನ್ ಫೆಕ್ಷನ್ ಆಗುವ ಸಾಧ್ಯತೆ ಇದೆ.

ಹೆಚ್ಚು ಹಾಗಲಕಾಯಿ ಸೇವಿಸುವುದರಿಂದ ಮುಟ್ಟಿನ ಸಮಸ್ಯೆ ಇರುವವರಿಗೆ ಪಿರಿಯಡ್ಸ್ ಸಂದರ್ಭದಲ್ಲಿ ಅಧಿಕ ರಕ್ತಸ್ರಾವವಾಗುತ್ತದೆ. ಹೆಚ್ಚು ಹಾಗಲಕಾಯಿ ತಿನ್ನುವುದರಿಂದ ಮೂಲವ್ಯಾಧಿ ಸಮಸ್ಯೆ ಉಂಟಾಗುತ್ತದೆ. ಇದನ್ನು ಸೇವಿಸುವುದರಿಂದ ಸಕ್ಕರೆ ಅಂಶ ನಾರ್ಮಲ್ ಗಿಂತಲೂ ಕಡಿಮೆಯಾಗುತ್ತದೆ.

Comments are closed.