ಆಹಾರಕ್ಕೆ ಈ ಎಲೆ ಒಳ್ಳೆಯ ಪರಿಮಳವನ್ನು ಬಿರಿಯಾನಿ ಎಲೆ. ಬಿರಿಯಾನಿ ಎಲೆಯೆಂದರೆ ತಿಳಿಯದವರು ಯಾರಿದ್ದಾರೆ ಹೇಳಿ. ಇತ್ತೀಚೆಗೆ ವಿಜ್ಞಾನಿಗಳು ಕೆಲವು ಅಧ್ಯಯನಗಳನ್ನು ನಡೆಸಿ ಕುತೂಹಲಕಾರಿಯಾದ ಬ್ಯೂಟಿ ಬೆನಿಫಿಟ್ಸ್ ಕಂಡುಹಿಡಿದಿದ್ದಾರೆ. ಮುಖ್ಯವಾದ ವಿಟಮಿನ್ ಗಳು, ಪೋಷಕಾಂಶಗಳು , ಆಂಟಿ ಆಕ್ಸಿಡೆಂಟ್ಸ್ ,ಕೂದಲಿಗೆ ಹಾಗೂ ಚರ್ಮಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತವೆ.
ಬಿರಿಯಾನಿ ಎಲೆಯನ್ನು ಉಪಯೋಗಿಸಿದರೆ… ತಲೆಯಲ್ಲಿರುವ ಹೊಟ್ಟು ಮಾಯವಾಗುತ್ತದೆ ಎಂದು ಹೇಳಿದ್ರೆ ನಿಮಗೆ ಅಚ್ಚರಿಯಾಗುತ್ತದಲ್ಲವೇ?
ಬಿರಿಯಾನಿ ಎಲೆಯನ್ನು ಬಿಸಿ ನೀರಿನಲ್ಲಿ ನೆನೆಸಿ ,ತಣ್ಣಗಾದ ನಂತರ ನೀರನ್ನು ಅಥವಾ ಅದೇ ನೀರಿನಲ್ಲಿ ಎಲೆಯನ್ನು ರುಬ್ಬಿಕೊಂಡು ತಲೆಗೆ ಪೇಸ್ಟ್ ನಂತೆ ಹಚ್ಚಿ ಸ್ನಾನ ಮಾಡುವುದರಿಂದ ತಲೆಯಲ್ಲಿರುವ ಹೊಟ್ಟು ಮಾಯವಾಗುತ್ತದೆ. ಇದನ್ನು ತಪ್ಪದೆ ವಾರಕ್ಕೆ ಎರಡು ಸಲ ಮಾಡಬೇಕು.
ಒಂದು ವೇಳೆ ಹೊಟ್ಟಿನ ಸಮಸ್ಯೆ ಹೆಚ್ಚಾಗಿದ್ದಲ್ಲಿ, ಬಿರಿಯಾನಿ ಎಲೆಗಳಿಂದ ಎಣ್ಣೆಯನ್ನು ತಯಾರಿಸಿಕೊಂಡು , ಎಣ್ಣೆಯನ್ನು ತಲೆಗೆ ಹಚ್ಚಿಕೊಂಡು ಮಾರನೆ ದಿನ ತಣ್ಣಿರಿನಿಂದ ತಲೆಯನ್ನು ತೊಳೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ತಲೆಯಲ್ಲಿರುವ ಹೊಟ್ಟಿನ ಸಮಸ್ಯೆ ನಿವಾರಣೆ ಆಗುತ್ತದೆ. ಕೂದಲು ಸೊಂಪಾಗಿ ಬೆಳೆಯುತ್ತವೆ. ಆದುದರಿಂದಲೇ ಬಿರಿಯಾನಿ ಎಲೆಗಳನ್ನು ಆಯುರ್ವೇದಿಕ್ ಎಣ್ಣೆ ತಯಾರಿಕಯಲ್ಲಿ ಉಪಯೋಗಿಸುತ್ತಾರೆ.
Comments are closed.