ಕಲ್ಲಂಗಡಿ ಹಣ್ಣಿನಲ್ಲಿ ಶೇ.93 ರಷ್ಟು ನೀರಿನಾಂಶ ಇರುವುದರಿಂದ ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪವನ್ನು ಕುಗ್ಗಿಸುವುದಲ್ಲದೆ ಚರ್ಮಕ್ಕೆ ತೇವಾಂಶವನ್ನು ಒದಗಿಸಿ ತಂಪಾಗಿರಿಸುತ್ತದೆ. ಕಲ್ಲಂಗಡಿ ಹಣ್ಣು ಖನಿಜಗಳು ಮತ್ತು ವಿಟಮಿನ್ ಎ, ಇ, ಸಿ ಮತ್ತು ಬಿ6 ಹೊಂದಿರುವುದರಿಂದ ಹಲವು ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ. ಅದನ್ನು ಉಪಯೋಗಿಸುವುದು ಹೇಗೆಂದು ತಿಳಿಯೋಣ.
1. ಒಂದು ಚಮಚ ಕಲ್ಲಂಗಡಿ ಹಣ್ಣಿನ ರಸದಲ್ಲಿ ಒಂದು ಚಮಚ ಮೊಸರು / ಒಂದು ಚಮಚ ಜೇನು / ಒಂದು ಚಮಚ ಸೌತೆಕಾಯಿಯ ರಸವನ್ನು ಬೆರೆಸಿ ಮುಖಕ್ಕೆ ಪ್ಯಾಕ್ ನಂತೆ ಹಚ್ಚಿಕೊಂಡು 20 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು,ಮೊಸರಿನಲ್ಲಿರುವ ಲಾಕ್ಟಿಕ್ ಆಮ್ಲವು ಚರ್ಮದ ಮೇಲಿರುವ ಮೃತಕಣಗಳನ್ನು ತೊಲಗಿಸುತ್ತದೆ.ಜೇನು ಚರ್ಮದ ಮೇಲಿರುವ ಟ್ಯಾನ್ ಅನ್ನು ತೊಲಗಿಸುತ್ತದೆ.ಸೌತೆ ಪಿಗ್ಮಂಟೇಷನ್ ಅನ್ನು ನಿವಾರಿಸುತ್ತದೆ.
2. ಸಣ್ಣಗೆ ಹಚ್ಚಿದ ಕಲ್ಲಂಗಡಿ ಹಣ್ಣು ಹಾಗೂ ಬಾಳೇಹಣ್ಣನ್ನು ಪೇಸ್ಟ್ ಮಾಡಿಕೊಂಡು ಮುಖಕ್ಕೆ ಪ್ಯಾಕ್ ನಂತೆ ಹಚ್ಚಿಕೊಂಡು 20 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯುವುದರಿಂದಲೂ ಬಾಳೆಹಣ್ಣಿನಲ್ಲಿರುವ ಬಿ ವಿಟಮಿನ್ ಕಾಂಪ್ಲೆಕ್ಸ್ ಮೊಡವೆಗಳಿಂದಾಗುವ ನೋವು ಉಪಶಮನವಾಗುತ್ತದೆ.
Comments are closed.