ಆರೋಗ್ಯ

ತಾಮ್ರದ ಬಳೆ ಹಾಕುವುದರಿಂದ ಏನೆಲ್ಲ ಲಾಭವಿದೆ ಗೊತ್ತಾ..?

Pinterest LinkedIn Tumblr

ಸಂಧಿವಾತ ಸಮಸ್ಯೆ ಇರುವವರ ಕಾಲಿನಲ್ಲಿ ಸೆಳೆತದಂತಹ ಅನುಭವ ಆಗುತ್ತದೆ. ಇಂತಹ ಸಮಸ್ಯೆ ನಿವಾರಣೆಗೆ ತಾಮ್ರದ ಕೈಕಡಗವನ್ನು ಹಾಕಿಕೊಂಡರೆ ಕಡಿಮೆಯಾಗುತ್ತದೆ. ತಾಮ್ರದ ಕೈಕಡಗವು ಮಣಿ ಗಂಟಿನಲ್ಲಿ ಕುಳಿತುಕೊಳ್ಳುವುದರಿಂದ ದೇಹದ ಇತರ ಗಂಟುಗಳಲ್ಲಿ ಇರುವಂತಹ ಸಮಸ್ಯೆಯನ್ನು ನಿವಾರಿಸುತ್ತದೆ.

-ಗಂಟಿನಲ್ಲಿರುವ ಸೆಳೆತ ಕಡಿಮೆ ಮಾಡುವುದರೊಂದಿಗೆ ತಾಮ್ರವು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ತಾಮ್ರದಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ ಎಂದು ಕೆಲವೊಂದು ಮೂಲಗಳು ತಿಳಿಸುತ್ತವೆ.

-ಸತು ಮತ್ತು ಕಬ್ಬಿಣದ ಮಿಶ್ರಣದಿಂದ ತಾಮ್ರವನ್ನು ತಯಾರಿಸಲಾಗುತ್ತದೆ. ಈ ಖನಿಜಾಂಶಗಳು ದೇಹಕ್ಕೆ ಅಗತ್ಯವಾಗಿ ಬೇಕಾಗುತ್ತದೆ. ಈ ಖನಿಜಾಂಶಗಳ ಕೊರತೆಯಿದ್ದರೆ ಇದನ್ನು ಧರಿಸಿದಾಗ ಸಮಸ್ಯೆ ಬಗೆಹರಿಯುತ್ತದೆ ಎಂದು ಕೆಲವೊಂದು ಅಧ್ಯಯನಗಳಿಂದ ತಿಳಿದು ಬರುತ್ತದೆ.

-ತಾಮ್ರವು ಪೂರಕ ಆಹಾರಕ್ಕಿಂತ ಉತ್ತಮವಾಗಿ ಕೆಲಸ ಮಾಡುತ್ತದೆ. ಕೆಲವೊಂದು ಸೂಕ್ಷ ್ಮ ಖನಿಜಾಂಶಗಳು ಬೆವರಿನ ಮೂಲಕ ನೇರವಾಗಿ ರಕ್ತನಾಳಗಳನ್ನು ಸೇರಿಕೊಳ್ಳುವುದರಿಂದ ಇದು ತುಂಬಾ ಪರಿಣಾಮಕಾರಿಯಾಗಿದೆ ಎನ್ನಲಾಗಿದೆ.

-ತಾಮ್ರದ ಕೊರತೆಯ ಸಮಸ್ಯೆಗೆ ಅಯೊರ್ಟಿಕ್‌ ಅನೆರೈಸ್ಮಗಳು ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯಿದ್ದರೆ ಕೆಟ್ಟ ಕೊಲೆಸ್ಟ್ರಾಲ್‌ ಹೆಚ್ಚಾಗಿ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ತಾಮ್ರದ ಕೈಕಡವನ್ನು ಧರಿಸುವುದು ಹೃದಯದ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.

– ತಾಮ್ರದಲ್ಲಿ ಹೆಚ್ಚಿನ ಆ್ಯಂಟಿಆಕ್ಸಿಡೆಂಟ್‌ಗಳು ಇರುವ ಕಾರಣ ಇದು ವೃದ್ಧಾಪ್ಯದ ಲಕ್ಷ ಣಗಳನ್ನು ನಿಧಾನಗೊಳಿಸುತ್ತದೆ.

Comments are closed.