ಮನೋರಂಜನೆ

ದಿನೇಶ್ ಕಾರ್ತಿಕ್ ಬ್ಯಾಟಿಂಗ್’ಗೆ ಎಲ್ಲರೂ ಫಿದಾ ಆದರೆ ಅಮಿತಾಬ್ ಬಚ್ಚನ್ ಮಾತ್ರ ಸಾರಿ ಕೇಳುವ ಮೂಲಕ ಸುದ್ದಿಯಾಗಿದ್ದಾರೆ..!

Pinterest LinkedIn Tumblr

ದಿನೇಶ್ ಕಾರ್ತಿಕ್ ಅದ್ಭುತ ಬ್ಯಾಟಿಂಗ್ ನೆರವಿನಿಂದ ಬಾಂಗ್ಲಾದೇಶವನ್ನು ಮಣಿಸಿದ ಟೀಂ ಇಂಡಿಯಾ ನಿದಾಸ್ ಟ್ರೋಫಿ ಎತ್ತಿ ಹಿಡಿಯಿತು. ಹಿರಿ-ಕಿರಿಯ ಆಟಗಾರರೂ ಸೇರಿದಂತೆ ಬಾಲಿವುಡ್ ಮಂದಿಯೂ ಕಾರ್ತಿಕ್ ಆಟವನ್ನು ಗುಣಗಾನ ಮಾಡಿದರು.

ಆದರೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮಾತ್ರ ಕಾರ್ತಿಕ್ ಕ್ಷಮೆ ಕೋರಿ ಸುದ್ದಿಯಾಗಿದ್ದಾರೆ. ಯಾಕೆ ಹೀಗೆ ಅನ್ತೀರಾ ಈ ಸ್ಟೋರಿ ಓದಿ..

ಅಮಿತಾಬ್ ಓರ್ವ ಕ್ರಿಕೆಟ್ ಪ್ರೇಮಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಟ್ವೀಟ್ ಮಾಡುವ ಬರದಲ್ಲಿ ತಪ್ಪು ಟ್ವೀಟ್ ಮಾಡಿ ಆ ಬಳಿಕ ಡಿಕೆ ಕ್ಷಮೆ ಕೋರಿದ್ದು ಮಾತ್ರವಲ್ಲದೇ ಸರಿಯಾದ ಟ್ವೀಟ್ ಮಾಡಿದ್ದಾರೆ. ಅಷ್ಟಕ್ಕೂ ಆಗಿದ್ದು ಇಷ್ಟೇ.. ಕಾರ್ತಿಕ್ ಅದ್ಭುತ ಆಟವಾಡಿದರು. 2 ಓವರ್’ನಲ್ಲಿ 24 ರನ್’ಗಳ ಅಗತ್ಯವಿದ್ದಾಗ, ಕೊನೆಯ ಎಸೆತದಲ್ಲಿ 5 ರನ್ ಗಳಿಸಬೇಕಿದ್ದಾಗ ಸಿಕ್ಸರ್ ಬಾರಿಸಿ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು.

ಆದರೆ ತಕ್ಷಣ ಎಚ್ಚೆತ್ತುಕೊಂಡ ಬಿಗ್ ಬಿ, 2 ಓವರ್’ನಲ್ಲಿ 34 ರನ್’ಗಳ ಅಗತ್ಯವಿತ್ತು ಎಂದಾಗಬೇಕಿತ್ತು. 24 ಅಲ್ಲ, ತಪ್ಪು ಟ್ವೀಟ್’ಗಾಗಿ ಕಾರ್ತಿಕ್ ಕ್ಷಮೆ ಕೇಳುತ್ತೇನೆ ಎಂದು ಅಮಿತಾಬ್ ಬಚ್ಚನ್ ಕ್ಷಮೆ ಕೋರಿ ಮರು ಟ್ವೀಟ್ ಮಾಡಿದ್ದಾರೆ.

Comments are closed.