ರಾಷ್ಟ್ರೀಯ

ಉತ್ತರ ಪ್ರದೇಶದಲ್ಲಿ ‘ಮಾಲಿನ್ಯ ನಿಗ್ರಹ’ಕ್ಕೆ ಒಂಬತ್ತು ದಿನಗಳ ಮಹಾಯಾಗ; ಹೋಮಕ್ಕೆ 500 ಕ್ವಿಂಟಾಲ್ ಮರ ಬಳಕೆ

Pinterest LinkedIn Tumblr

ಮೀರತ್(ಉತ್ತರಪ್ರದೇಶ): ವಾಯುಮಾಲಿನ್ಯ ನಿಗ್ರಹಕ್ಕಾಗಿ ಉತ್ತರಪ್ರದೇಶದ ಮೀರತ್ ನಲ್ಲಿ ಮಹಾಯಾಗ ಕೈಗೊಳ್ಳಲಾಗಿದೆ.

ಮೀರತ್ ನ ಭಾನ್ಸಾಲಿ ಮೈದಾನದಲ್ಲಿ ಶ್ರೀ ಆಯುಚಂಡಿ ಮಹಾಯಾಗ ಸಮಿತಿ ಭಾನುವಾರದಿಂದ ಒಂಬತ್ತು ದಿನಗಳ ಮಹಾಯಾಗವನ್ನು ಕೈಗೊಂಡಿದೆ. ಇದರಲ್ಲಿ 500 ಕ್ವಿಂಟಲ್ ಮಾವಿನ ಮರದ ದಿಮ್ಮಿಗಳನ್ನು ಅಗ್ನಿಗಾಹುತಿ ನೀಡಲಾಗುತ್ತದೆ.

ನವರಾತ್ರಿ ಸಮಯದಲ್ಲಿ ಮಾಲಿನ್ಯವನ್ನು ನಿಗ್ರಹಿಸುವುದು ಈ ದೊಡ್ಡ ಪವಿತ್ರವಾದ ಮಹಾಯಾಗದ ಉದ್ದೇಶ. ಇದು ಓಝೋನ್ ಪದರವನ್ನು ಸಂರಕ್ಷಿಸುವುದರ ಮೂಲಕ ಮನುಕುಲದ ಮತ್ತು ಪರಿಸರಕ್ಕೆ ಸಹಾಯ ಮಾಡುತ್ತದೆ ಎಂದು ಸಮಿತಿಯ ಉಪಾಧ್ಯಕ್ಷ ಗಿರೀಶ್ ಬನ್ಸಾಲ್ ಹೇಳಿದ್ದಾರೆ.

ಮಹಾಯಾಗದಲ್ಲಿ 108 ಹೋಮ ಕುಂಡಗಳನ್ನು ನಿರ್ಮಿಸಲಾಗಿದೆ. ಮಾರ್ಚ್ 26ರವರೆಗೆ ಈ ಮಹಾಯಾಗ ನಡೆಯಲಿದ್ದು ಇದಕ್ಕಾಗಿ 500 ಕ್ವಿಂಟಲ್ ಮಾವಿನ ಮರದ ದಿಮ್ಮಿಗಳನ್ನು ಬಳಸಲಾಗುತ್ತದೆ ಎಂದರು.

ಈ ಮಹಾಯಾಗದಲ್ಲಿ ವಾರಣಾಸಿ ಮತ್ತು ವೃಂದಾವನದ ಪುರೋಹಿತರು ಭಾಗವಹಿಸುತ್ತಿದ್ದಾರೆ ಎಂದರು.

Comments are closed.