ಆರೋಗ್ಯ

ದೇಶದಲ್ಲಿ ನಿತ್ಯ 6.25 ಲಕ್ಷಕ್ಕೂ ಹೆಚ್ಚು ಮಕ್ಕಳು ಸಿಗರೇಟ್‌ ಸೇದುತ್ತಾರೆ ! ವಾರಕ್ಕೆ 17,887 ಜನ ಸಾಯುತ್ತಾರೆ !

Pinterest LinkedIn Tumblr

ನವದೆಹಲಿ: ದೇಶದಲ್ಲಿ ನಿತ್ಯ 6.25 ಲಕ್ಷಕ್ಕೂ ಹೆಚ್ಚು ಮಕ್ಕಳು ಸಿಗರೇಟ್‌ ಸೇದುತ್ತಾರೆ. ಇದಲ್ಲದೆ ಧೂಮಪಾನದಿಂದಾಗಿ ವಾರಕ್ಕೆ 17,887 ಜನ ಮೃತಪಡುತ್ತಿದ್ದಾರೆ ಎಂದು ಜಾಗತಿಕ ತಂಬಾಕು ಅಟ್ಲಾಸ್‌ ವರದಿ ಹೇಳಿದೆ.

ಅಧ್ಯಯನದ ಪ್ರಕಾರ, ದೇಶದಲ್ಲಿ ಧೂಮಪಾನದಿಂದ ಸಾವಿಗೀಡಾಗುವವರ ಸಂಖ್ಯೆಯು ಮಾನವ ಅಭಿವೃದ್ಧಿ ಸೂಚ್ಯಂಕ (HDI) ದೇಶಗಳಲ್ಲಿ ಉಂಟಾಗುವ ಸಾವಿನ ಸರಾಸರಿಗಿಂತ ಕಡಿಮೆಯಿದೆ.

ದೇಶದ ಧೂಮಪಾನದ ಆರ್ಥಿಕ ವೆಚ್ಚ 18,18,691 ಮಿಲಿಯನ್‌ ಎಂದು ಅಮೆರಿಕನ್‌ ಕ್ಯಾನ್ಸರ್‌‌ ಸೊಸೈಟಿ (ಎಸಿಎಸ್) ಮತ್ತು ಅಮೆರಿಕ ಮೂಲದ ವಿಟಲ್ ಸ್ಟ್ರಾಟಜೀಸ್‌ ವರದಿಯಲ್ಲಿ ಹೇಳಲಾಗಿದೆ.

ಭಾರತದಲ್ಲಿ ಪ್ರತಿದಿನ ಸುಮಾರು 4,29,500 ಹುಡುಗರು ಮತ್ತು 1,95,500 ಹುಡುಗಿಯರು, 9,03,42,900ಕ್ಕೂ ಪುರುಷರು ಮತ್ತು 1,34,66,600 ಮಹಿಳೆಯರು ಪ್ರತಿದಿನ ಸಿಗರೇಟ್‌ ಸೇದುತ್ತಾರೆ. ಇದರಲ್ಲಿ ಧೂಮಪಾನ ಮಾಡದೆಯೇ 17,10,94,600 ತಂಬಾಕು ಅವರ ದೇಹ ಸೇರುತ್ತಿದ್ದು, ಇದು ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಪರಿಣಾಮ ಬೀರಲಿದೆ ಎಂದು ವರದಿ ತಿಳಿಸಿದೆ.

ಭಾರತದಲ್ಲಿ 2016ರ ವೇಳೆ ಸುಮಾರು 82.12 ಬಿಲಿಯನ್‌ ಸಿಗರೇಟ್‌ನ್ನು ಉತ್ಪಾದನೆ ಮಾಡಲಾಗಿದೆ. ಇದು ವಿಶ್ವದ ಆರು ದೊಡ್ಡ ಕಂಪನಿಗಳ ಆದಾಯ 346 ಶತಕೋಟಿ ಯುಎಸ್‌ ಡಾಲರ್ಸ್‌ಗಿಂತ ಹೆಚ್ಚಾಗಿದ್ದು, ದೇಶದ ಒಟ್ಟಾರೆ ರಾಷ್ಟ್ರೀಯ ಆದಾಯದ ಶೇ. 15ರಷ್ಟಕ್ಕೆ ಸಮನಾಗಿದೆ ಎಂದು ವರದಿ ತಿಳಿಸಿದೆ.

Comments are closed.