ಆರೋಗ್ಯ

ನಿಂಬೆ, ಕಿತ್ತಳೆ ತಿಂದ್ರೆ ಬ್ಲಡ್ ಕ್ಯಾನ್ಸರ್ ಬರಲ್ವಂತೆ !

Pinterest LinkedIn Tumblr

ಲ್ಯುಕೆಮಿಯಾ ಎಂಬ ಭಯಾನಕ ಖಾಯಿಲೆ ಬಗ್ಗೆ ನಿಮಗೆ ತಿಳಿದಿರಬಹುದು. ಇದೊಂದು ಡೆಡ್ಲೀ ಬ್ಲಡ್ ಕ್ಯಾನ್ಸರ್. ಹೆಚ್ಚಾಗಿ ಕ್ಯಾನ್ಸರ್ ನಮಗಿದೆ ಅಂತ ಗೊತ್ತಾಗೋದೇ ನಾಲ್ಕನೇ ಸ್ಟೇಜ್‌ಗೆ ಹೋದ ಬಳಿಕ. ಲ್ಯುಕೆಮಿಯವೂ ಇದಕ್ಕಿಂತ ಹೊರತಲ್ಲ. ಈಗ ಸ್ವಲ್ಪ ನಿರಾಳವಾಗುವ ಸುದ್ದಿಯೊಂದು ಬಂದಿದೆ.

‘ವಿಟಮಿನ್ ಸಿ’ಯ ಅಂಶ ಹೆಚ್ಚಿರುವ ಕಿತ್ತಳೆ ಹಣ್ಣು, ನಿಂಬೆಹಣ್ಣಿನ ಸೇವನೆ ಹೆಚ್ಚೆಚ್ಚು ಮಾಡುತ್ತಿದ್ದರೆ ಈ ಲ್ಯುಕೆಮಿಯದಿಂದ ದೂರವಿರಬಹುದು ಎಂದು ಇತ್ತೀಚಿನ ಸಂಶೋಧನೆಯೊಂದು ಹೇಳುತ್ತಿದೆ. ಇದಕ್ಕೊಂದು ಕಾರಣವೂ ಇದೆ. ಲ್ಯುಕೆಮಿಯ ತೊಂದರೆಯಿಂದ ಬಳಲುತ್ತಿದ್ದ ಹೆಚ್ಚಿನವರಲ್ಲಿ ವಿಟಮಿನ್ ಸಿ ಕೊರತೆಯಿತ್ತು.

ಹಾಗಾಗಿ ಲ್ಯುಕೆಮಿಯಾಗೆ ‘ಮಿಟಮಿನ್ ಸಿ’ ಕೊರತೆಯೂ ಒಂದು ಕಾರಣ ಇರಬಹುದು ಎಂದು ವೈದ್ಯ ವಿಜ್ಞಾನ ಅಂದಾಜಿಸಿದೆ.ಹಾಗಾಗಿ ‘ಮಿಟಮಿನ್ ಸಿ’ ಅಂಶ ಹೆಚ್ಚಿರುವ ನಿಂಬೆ, ಕಿತ್ತಳೆಯನ್ನು ಹೆಚ್ಚೆಚ್ಚು ಸೇವಿಸಿ.

Comments are closed.