ಆರೋಗ್ಯ

ವಿದ್ಯಾರ್ಥಿಗಳ ಆರೋಗ್ಯಕ್ಕಾಗಿ ಇಲ್ಲಿದೆ ಕೆಲವು ಸಲಹೆ….

Pinterest LinkedIn Tumblr

ನವದೆಹಲಿ: ಇದು ಪರೀಕ್ಷೆಗಳ ಸಮಯ. ವಿದ್ಯಾರ್ಥಿಗಳು ಹಾಗೂ ಪೋಷಕರು ಸಹಜವಾಗಿಯೇ ಒತ್ತಡದಲ್ಲಿರುತ್ತಾರೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ವಿದ್ಯಾರ್ಥಿಗಳು ಬಿಡುವಿಲ್ಲದಂತೆ ವ್ಯಾಸಂಗದಲ್ಲಿ ನಿರತರಾಗುತ್ತಾರೆ ಆದರೆ, ಇಂತಹ ಪರಿಸ್ಥಿತಿಯಲ್ಲಿ ಆರೋಗ್ಯಕ್ಕೂ ಒತ್ತು ನೀಡಬೇಕಾದದ್ದು ಅಗತ್ಯವಾಗಿದೆ.

ಈ ಬಗ್ಗೆ ಮಾಲಯ ಔಷಧಕಂಪನಿ ಆರ್ಯುವೇದ ತಜ್ಞ ಡಾ. ಹರಿಪ್ರಸಾದ್ ಅವರು ಕೆಲವೊಂದು ಸಲಹೆ ನೀಡಿದ್ದಾರೆ.

ಪ್ರತಿದಿನ ವ್ಯಾಯಾಮ: ಶೈಕ್ಷಣಿಕವಾಗಿ ಸಾಧನೆ ಮಾಡಲು ದೈಹಿಕ ಚಟುವಟಿಕೆ ಪರಿಣಾಮಕಾರಿ ಸಾಧನವಾಗಿದೆ.

ಈ ಬಗ್ಗೆ ಕೊಲಂಬಿಯಾದ ಬ್ರಿಟೀಷ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನ ಪ್ರಕಾರ,ಪ್ರತಿದಿನ ಏರೋಬಿಕ್ಸ್ ವ್ಯಾಯಾಮ ಮಾಡುವುದರಿಂದ ಮೆದುಳಿನ ಶಕ್ತಿ ಹೆಚ್ಚಾಗಿ ಓದಿದ ವಿಷಯವೆಲ್ಲಾ ಹೆಚ್ಚುಕಾಲ ಜ್ಞಾಪಕದಲ್ಲಿ ಉಳಿಯುವಂತಾಗುತ್ತದೆ ಎಂಬುದು ದೃಢಪಟ್ಟಿದೆ.

ಆರೋಗ್ಯಕರ ಆಹಾರ ಪದ್ದತಿ ನಿರ್ವಹಣೆ : ಎಲ್ಲಾ ವೇಳೆಯಲ್ಲೂ ಉತ್ತಮ ಆಹಾರ ಪದ್ಧತಿ ನಿರ್ವಹಣೆಯೂ ಅಗತ್ಯವಾಗಿದೆ.

ಊಟದಲ್ಲಿ ತರಕಾರಿ , ಹಣ್ಣು, ಧಾನ್ಯ, ಹಾಲಿನ ಉತ್ಪನ್ನಗಳು, ಮೀನು ಮತ್ತು ಮೊಟ್ಟೆ ಹೆಚ್ಚಾಗಿ ಸೇವಿಸುವುದಿಂದ ಪೋಷಕಾಂಶ ಹೆಚ್ಚಾಗಿ ಉತ್ತಮ ಆರೋಗ್ಯಕಾಪಾಡಬಹುದಾಗಿದೆ. ವ್ಯಾಸಂಗದಲ್ಲಿ ಹೆಚ್ಚಿನ ಆಸಕ್ತಿ ತಾಳಬಹುದಾಗಿದೆ.

ಆಹಾರದಲ್ಲಿ ಸೂಕ್ತ ಗಿಡಮೂಲಿಕೆಗಳ ಬಳಕೆ : ಆಯುರ್ವೇದ ಪಠ್ಯ ಮತ್ತು ಆಧುನಿಕ ಸಂಶೋಧನೆ ಪ್ರಕಾರ ಗಿಡಮೂಲಿಕೆ ಸೇವಿಸುವುದರಿಂದ ನೆನಪಿನ ಶಕ್ತಿ ಸಂರಕ್ಷಿಸಬಹುದಾಗಿದೆ. ಮಾನಸಿಕ ಆರೋಗ್ಯ ಕಾಪಾಡಿ ವಿದ್ಯಾರ್ಥಿಗಳು ತಮ್ಮ ಗುರಿ ಸಾಧಿಸಲು ಅನುಕೂಲವಾಗಲಿದೆ.

ಸರಿಯಾದ ನಿದ್ರೆ : ಪರೀಕ್ಷೆಗಳ ಸಂದರ್ಭದಲ್ಲಿ ಓದಿನ ಜೊತೆಗೆ ಸೂಕ್ತ ನಿದ್ರೆಯೂ ಅತ್ಯವಶ್ಯಕ. ಪರೀಕ್ಷೆಗಾಗಿ ತಯಾರಾಗುತ್ತಿರುವ ವಿದ್ಯಾರ್ಥಿಗಳು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಪ್ರತಿ ರಾತ್ರಿ 6ರಿಂದ 8 ಗಂಟೆಗಳ ನಿದ್ರೆ ಮಾಡಲೇಬೇಕು.

ಹಾರ್ವಡ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ಪ್ರಕಾರ ನಿದ್ರೆ ಮತ್ತು ನೆನಪಿನ ಶಕ್ತಿ ಮಧ್ಯೆ ಗಟ್ಟಿಯಾದ ಬಾಂಧವ್ಯವಿರುವುದು ದೃಢಪಟ್ಟಿದೆ.

ಸರಿಯಾಗಿ ನಿದ್ರೆ ಮಾಡುವುದರಿಂದ ಓದಿದ ವಿಷಯವನ್ನು ಮನನ ಮಾಡಿಕೊಳ್ಳಲು ಹಾಗೂ ಪರೀಕ್ಷೆಯನ್ನುಉತ್ತಮವಾಗಿ ಬರೆಯಲು ಸಾಧ್ಯವಾಗಲಿದೆ.

Comments are closed.