ಆರೋಗ್ಯ

ಈರುಳ್ಳಿ ರಸ ಹಚ್ಚುದರಿಂದ 20 ದಿನದಲ್ಲಿ ಕೂದಲು ಉದುರುವಿಕೆ ಸಮಸ್ಯೆ ನಿಲ್ಲುತ್ತೆ…! ಇದು ಸತ್ಯವೋ ಸುಳ್ಳೋ ? ಇಲ್ಲಿದೆ ಉತ್ತರ

Pinterest LinkedIn Tumblr

ಬೆಂಗಳೂರು : ತಲೆಗೂದಲು ಉದುರುವಿಕೆ ಸಮಸ್ಯೆ ನಿವಾರಣೆಗೆ ಮಾರುಕಟ್ಟೆಯಲ್ಲಿ ತರಹೇವಾರಿ ಶಾಂಪೂಗಳು, ತೈಲ, ಸೋಪುಗಳು ಲಭ್ಯವಿವೆ. ಆದರೆ ಅವುಗಳನ್ನು ಬಳಸುವುದರಿಂದ ತಲೆ ಕೂದಲು ಉದುರುವಿಕೆ ಸಮಸ್ಯೆ ಇನ್ನೂ ನಿವಾರಣೆ ಆಗಿಲ್ಲವೇ. ಹಾಗಿದ್ದರೆ ಚಿಂತಿಸಬೇಕಾಗಿಲ್ಲ. ಕೆಂಪು ಈರುಳ್ಳಿಯನ್ನು ಬೇಯಿಸಿ ಅದರ ರಸವನ್ನು ತಲೆಗೆ ಹಚ್ಚುವುದರಿಂದ ಕೂದಲು ಉದುರುವಿಕೆ ಸಮಸ್ಯೆ ಕೇವಲ 20 ದಿನಗಳಲ್ಲಿ ನಿವಾರಣೆಯಾಗುತ್ತದೆ.

ಅಲ್ಲದೇ ತಲೆಗೂದಲು ಇಲ್ಲದವರಿಗೂ ಕೂದಲು ಬರಲಿದೆಯಂತೆ! ಹೀಗೊಂದು ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈರುಳ್ಳಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ ಕೂದಲಿನ ಮರು ಹುಟ್ಟುವಿಕೆ ಮತ್ತು ಕೂದಲು ಉದುರುವಿಕೆಯ ಸಮಸ್ಯೆಯನ್ನು ನಿವಾರಣೆ ಮಾಡಲಿದೆ. ಕೂದಲಿನ ಎಲ್ಲಾ ರೀತಿಯ ಸಮಸ್ಯೆಗಳಿಗೆ ಕೆಂಪು ಈರುಳ್ಳಿ ರಾಮಬಾಣ ಎಂದು ಸಾಮಾಜಿಕ ಜಾಲತಾಣಗಲ್ಲಿ ವೈರಲ್‌ ಆಗಿರುವ ಸಂದೇಶದಲ್ಲಿ ಬಿಂಬಿಸಲಾಗುತ್ತಿದೆ.

ಒಂದು ವೇಳೆ ಈ ಸುದ್ದಿ ನಿಜವೇ ಆಗಿದ್ದರೆ ದುಬಾರಿ ಬೆಲೆಯ ಶಾಂಪೂ ಹಾಗೂ ಕೇಶತೈಲಗಳನ್ನು ಬಳಸುವ ಅಗತ್ಯವೇ ಇಲ್ಲ. ಈ ಸುದ್ದಿಯನ್ನು ಖಚಿತಪಡಿಸಿಕೊಳ್ಳಲು ವೈದ್ಯರನ್ನು ಕೇಳಿದ ಸಂದರ್ಭದಲ್ಲಿ, ಈರುಳ್ಳಿಯಲ್ಲಿ ಸಲ್ಫರ್‌ ಮತ್ತು ಅಮೈನೋ ಆ್ಯಸಿಡ್‌ ಇರುವುದರಿಂದ ಅದರ ರಸವನ್ನು ತಲೆಗೆ ಹಚ್ಚುವುದರಿಂದ ಕೆಲವೊಂದು ಲಾಭಗಳು ಇರಬಹುದು. ಆದರೆ, ಅದರಿಂದ 20 ದಿನಗಳಲ್ಲಿ ಕೂದಲು ಉದುರುವಿಕೆ ನಿವಾರಣೆ ಆಗಲಿದೆ ಎನ್ನುವುದೆಲ್ಲಾ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.

Comments are closed.