ಆರೋಗ್ಯ

ಸಣ್ಣ ಮಗುವಿಗೆ ಮುಂಜಾನೆಯ ಸೂರ್ಯನ ಬೆಳಕು ಅತೀ ಮುಖ್ಯ, ಯಾಕೆ..?

Pinterest LinkedIn Tumblr

ಮಂಗಳೂರು: ಹಲವು ಕಾರಣಗಳಿಂದ ಸೂರ್ಯನ ಕಿರಣಗಳು ನಮಗೆ ಉತ್ತಮ ಎಂದು ನಿಮಗೆಲ್ಲಾ ತಿಳಿದೇ ಇದೆ. ಅದು ಏನೇ ಇದ್ದರೂ, ನೀವು ಇದನ್ನು ತಿಳಿದುಕೊಳ್ಳಬೇಕು, ಕೆಲವು ನಿರ್ದಿಷ್ಟ ಸಮಯದಲ್ಲಿ ಸೂರ್ಯನ ಆರೋಗ್ಯ ಕಿರಣಗಳಿಗೆ ಮೈ ಒಡ್ಡುವುದು ತುಂಬಾ ಪ್ರಯೋಜನಕಾರಿ ಎಂಬುದನ್ನು. ಹಾಗದರೆ, ಸೂರ್ಯನ ಕಿರಣದಲ್ಲಿ ನಮ್ಮ ಮೈಯನ್ನು ನೆನೆಸಲು ಮುಂಜಾನೆಯು ಅತ್ಯುತ್ತಮ ಸಮಯವಾಗಿದೆ(ಬೆಳಿಗ್ಗೆ 6-9 ರ ಸಮಯ). ಇದು ಸೂರ್ಯೋದಯ ಸಮಯ ಮತ್ತು ಸೂರ್ಯನ ಮೊದಲ ಕಿರಣಗಳು ಧರೆಗೆ ಸ್ಪರ್ಶಿಸುವ ಕಾಲ. ಈ ಬೆಚ್ಚನೆಯ ಹೊಂಗಿರಣಗಳು ನಮ್ಮ ದೇಹದಲ್ಲಿ ವಿಟಮಿನ್ ಡಿ ನ ಸಂಶ್ಲೇಷಣೆಯನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತವೆ, ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಹೃದಯ ರಕ್ತನಾಳದ ಸಮಸ್ಯೆಗಳಿಂದ ದೂರವಿರಿಸುತ್ತದೆ.

ಮುಂಜಾನೆ ಸೂರ್ಯನು ನಿಮ್ಮ ಮತ್ತು ನಿಮ್ಮ ಮಗುವಿಗೆ ತುಂಬಾ ಆರೋಗ್ಯಕರವಾಗಿರುವುದಕ್ಕೆ ಕೆಲವು ಕಾರಣಗಳು ಇಲ್ಲಿವೆ.

೧.ಇದು ಔಷದಿ
ಸೂರ್ಯನ ಬೆಳಕು ಸಿರೊಟೋನಿನ್ನ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ಅದು ನಿಮ್ಮ ನರ ಕೋಶಗಳ ನಡುವೆ ಸಂಕೇತಗಳನ್ನು ಕಳುಹಿಸುತ್ತದೆ ಮತ್ತು ಭಾವನಾತ್ಮಕತೆಯಿಂದ ದೈಹಿಕ ಕಾರ್ಯಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಚಿತ್ತವನ್ನು ಸ್ಥಿರತೆಯಲ್ಲಿರಿಸಲು ಸಹಾಯ ಮಾಡುತ್ತದೆ, ಮತ್ತು ಇದು ಜೀರ್ಣಕ್ರಿಯೆ, ನಿರುತ್ಸಾಹ, ನಿದ್ರೆಯ ನಿಯಂತ್ರಣ ಮತ್ತು ವಾಕರಿಕೆಯಂತಹ ತೊಂದರೆಗಳಿಂದ ಮುಕ್ತಿಯೊಂದಲು ಸಹಾಯಕಾರಿ. ಇದು ಕಾಲೋಚಿತ ಪರಿಣಾಮಕಾರಿ ಅಸ್ವಸ್ಥತೆಯಿಂದಲೂ ದೂರವಿರಲು ಸಹಾಯ ಮಾಡುತ್ತದೆ.

೨.ರೋಗಗಳನ್ನು ತಡೆಯುತ್ತದೆ
ಕಡಿಮೆ ಮಟ್ಟದ ವಿಟಮಿನ್ ಡಿ(D) ಕಾರಣದಿಂದಾಗಿ ಬೇಸಿಗೆ ಕಾಲಕ್ಕಿಂತ ಹೃದಯ ರೋಗಗಳು ಮತ್ತು ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಿ ಚಳಿಗಾಲದಲ್ಲಿ ಕಂಡುಬರುತ್ತವೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ತಜ್ಞ ಪರಿಣಿತರು, ಸೂರ್ಯನ ಮುಂಜಾನೆ ಹೊಂಗಿರಣಗಳಿಗೆ ನಮ್ಮ ದೇಹವನ್ನು ಒಡ್ಡುವುದರಿಂದ ಇದನ್ನು ತಡೆಯಬಹುದು ಎಂದು ನಂಬಿದ್ದಾರೆ.ಆದ್ದರಿಂದ ನೀವು ನಿಮ್ಮ ಮಗುವಿನ ಜೊತೆ ಈ ಹೊಂಗಿರಣದ ಕೆಳಗೆ ಕೆಲ ಸಮಯ ನಡೆದಾಡಿ ಆರೋಗ್ಯವನ್ನು ವೃದ್ದಿಸಿಕೊಳ್ಳಿ.

೩.ಕ್ಯಾಲ್ಸಿಯಮ್(ಲೋಹಧಾತು)
ಮಗುವಿನ ದೇಹದಲ್ಲಿ ಕ್ಯಾಲ್ಸಿಯಮ್ ಹಿರುಕೊಳ್ಳುವುದಕ್ಕೆ ವಿಟಮಿನ್ ಡಿ ಸಹಾಯ ಮಾಡುತ್ತದೆ, ಇದು ಹಲ್ಲು ಮತ್ತು ಮೂಳೆಗಳ ಬೆಳವಣಿಗೆಗೆ ಅತ್ಯವಶ್ಯಕ. ಇದು ರಿಕೆಟ್ ಗಳಂತಹ ಅಸ್ವಸ್ಥೆಯನ್ನು ಕೂಡ ತಡೆಯುತ್ತದೆ, ಇದು ಕ್ಯಾಲ್ಸಿಯಮ್ ಕೊರತೆ ಇರುವ ಮಕ್ಕಳಲ್ಲಿ ಕಂಡುಬರುವುದು ಸಾಮಾನ್ಯ. ಮೂಳೆಗಳ ದುರ್ಬಲತೆ ಎಂದರೆ, ಮೂಳೆಗಳು ದೇಹದ ತೂಕವನ್ನು ಹೊರಲು ಕಡಿಮೆ ಶಕ್ತಿಯನ್ನು ಹೊಂದಿದೆ ಎಂದರ್ಥ ಮತ್ತು ಇದರಿಂದ ಮುಂದಿನ ಭವಿಷ್ಯದಲ್ಲಿ ತೊಂದರೆಯಾಗಬಹುದು.

೪.ಹಳದಿ ಬಣ್ಣ
ಅನೇಕ ಪೋಷಕರ ದೂರು, ನಮ್ಮ ಮಗುವಿನ ಚರ್ಮದ ಬಣ್ಣ ಜನನದ ನಂತರ ಸ್ವಲ್ಪ ಹಳದಿಯಾಗಿ ಇದೆ ಎಂಬುದು. ಇದಕ್ಕೆ ಕಾರಣ ಮಗುವಿನ ದೇಹದಲ್ಲಿ ಉತ್ಪತ್ತಿಯಾಗುವ ಬಿಲಿರುಬಿನ್ ಮತ್ತು ಯಕೃತ್ತಿನ ಅಸಮರ್ಪಕ ಕಾರ್ಯನಿರ್ವಹಣೆಯಿಂದ ಆಗಿರಬಹುದು. ಬೆಳಿಗ್ಗೆ ಸೂರ್ಯನ ಕಿರಣಗಳು ನೀಲಿ ಬೆಳಕಿನ ರೋಹಿತವನ್ನು ಹೊಂದಿರುತ್ತವೆ, ಇವು ಮಗುವಿನ ದೇಹದಲ್ಲಿರುವ ಬಿಲಿರುಬಿನ್ ಪ್ರಮಾಣವನ್ನು ಕಡಿಮೆಮಾಡುತ್ತವೆ.

೫.ಶಕ್ತಿ
ನೈಸರ್ಗಿಕ ಬೆಳಕಿನಲ್ಲಿ ನಮ್ಮನ್ನು ನೆನೆಸುವುದರಿಂದ ಮೆಲಟೋನಿನ್ನ ಉತ್ಪಾದನೆಯನ್ನು ನಿಯಂತ್ರಿಸುತ್ತದೆ. ಮೆಲಟೋನಿನ್ ಮಟ್ಟವು ದೇಹವನ್ನು ಹಲವು ವಿಧಗಳಿಂದ ಪರಿಣಾಮ ಬೀರುತ್ತದೆಂದು ತಿಳಿದುಬಂದಿದೆ, ವಿಶೇಷವಾಗಿ ನಿದ್ರೆ ನಿಯಂತ್ರಣ. ಇದರ ಮಟ್ಟವು ಮಧ್ಯಾಹ್ನ ದಿಂದ ಸಂಜೆಯ ಸಮಯದಲ್ಲಿ ಹೆಚ್ಚುತ್ತದೆ, ಮತ್ತು ಇದು ರಾತ್ರಿಯಲ್ಲಿ ಅತಿ ಹೆಚ್ಚಾಗಿರುತ್ತದೆ, ಮತ್ತು ಮುಂಜಾನೆ ಇದರ ಮಟ್ಟ ಕಡಿಮೆಯಾಗುತ್ತದೆ. ಅಂದರೆ, ಕಡಿಮೆ ಮಟ್ಟಗಳು ಹೆಚ್ಚಿನ ಶಕ್ತಿಯೊಂದಿಗೆ ಸಂಬಂಧ ಹೊಂದಿವೆ. ಕಡಿಮೆ ಸೂರ್ಯನ ಬೆಳಕು ಇದ್ದಾಗ, ಈ ಹಾರ್ಮೋನ್ ಅನ್ನು ಮುಂಚೆ ಅಥವಾ ನಂತರದ ದಿನಗಳಲ್ಲಿ ಉತ್ಪಾದಿಸಬಹುದು, ಇದರಿಂದಾಗಿ ಕಡಿಮೆ ಶಕ್ತಿ ಇರುತ್ತದೆ. ವ್ಯತಿರಿಕ್ತವಾಗಿ, ಹೆಚ್ಚು ಸೂರ್ಯನ ಬೆಳಕಿಗೆ ಮೈ ಒಡ್ಡಿದರೆ ಹೆಚ್ಚು ಶಕ್ತಿ ದೊರಕುತ್ತದೆ.

ಇದನ್ನು ಗಮನದಲ್ಲಿರಿಕೊಳ್ಳುವುದು ಮುಖ್ಯವಾಗುತ್ತದೆ, ಅತಿ ಹೆಚ್ಚು ಸಮಯ ಸೂರ್ಯನ ಕಿರಣಗಳ ಕೆಳಗೆ ಇರಬೇಕಿಲ್ಲ, ನಿಮ್ಮ ಮಗುವಿನ ಸೂಕ್ಷ್ಮ ತ್ವಚೆಯ ಬಗ್ಗೆ ಎಚ್ಚರವಿರಲಿ. 15-20 ನಿಮಷಗಳ ಮುಂಜಾನೆ ಹೊಂಗಿರಣ ಪಡೆಯುವುದು ಆರೋಗ್ಯಕ್ಕೆ ಒಳ್ಳೆಯದು. ನಂತರದ ಬಿರುಸಾದ ಕಿರಣಗಳಿಂದ ಮಗು ಮತ್ತು ನಿಮ್ಮನ್ನು ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ. ನೆನಪಿನಲ್ಲಿಡಿ, ಮುಂಜಾನೆ 6 ರಿಂದ 9 ಗಂಟೆವರೆಗಿನ ಹೊಂಗಿರಣ ಆರೋಗ್ಯಕ್ಕೆ ಒಳ್ಳೆಯದು, ಮತ್ತು 10 ಗಂಟೆಯ ನಂತರ ಬರುವ ಬಿಸಿಲು ಬಿರುಸಾಗಿರುತ್ತದೆ ಮತ್ತು ಅದು ಅನಾರೋಗ್ಯಕ್ಕೂ ದಾರಿಯಾಗಬಹುದು. ನಿಮ್ಮ ಮಗುವಿನೊಡನೆ ಬಿಸಿಲಲ್ಲಿ ಮೈ ನೆನೆಯುವಾಗ ಇದನ್ನು ನೆನಪಿನಲ್ಲಿರಿಸಿಕೊಳ್ಳಿ.

Comments are closed.