ಮಂಗಳೂರು: ಪಂಚೇಂದ್ರಿಯಗಳಲ್ಲಿ ಮೂಗಿಗೆ ತನ್ನದೇ ಆದ ಮಹತ್ವ ಇದೆ. ಇದು ತೀರಾ ಸೂಕ್ಷ ಮತ್ತು ಇದರ ಕಾರ್ಯ ವೈಖರಿಯು ಇಡೀ ದೇಹದ ಕಾರ್ಯ ವೈಖರಿಯ ಮೇಲೆ ಪ್ರಭಾವ ಬೀರುತ್ತದೆ. ಮೂಗು ಸರಿಯಾಗಿ ಕೆಲಸ ಮಾಡದೆ ಇದ್ದಲ್ಲಿ ನಾವು ಬಾಯಿಯಲ್ಲಿ ಉಸಿರಾಡುತ್ತವೆ. ಇದರಿಂದ ಅಲರ್ಜಿ ಸೇರಿದಂತೆ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲಿಯು ಈ ಮೂಗಿನ ಬಳಿ ಸೈನಸ್ ಎಂಬ ಭಾಗ ಕಟ್ಟಿಕೊಂಡು ಬಿಡುತ್ತದೆ. ಅದು ನಿಜಕ್ಕೂ ಸಮಸ್ಯೆಯಾಗಿ ಪರಿಣಮಿಸಿಬಿಡುತ್ತದೆ.
ಸೈನಸ್ ಎಂಬುದು ಮೂಗಿನ ಹಿಂದೆ ಮೂಳೆಗಳಲ್ಲಿರುವ ಪ್ರದೇಶ. ಇದರಲ್ಲಿ ಒಮ್ಮೊಮ್ಮೆ ಗಾಳಿಯು ಹೋಗಿ ಕಟ್ಟಿಕೊಂಡು ಬಿಡುತ್ತದೆ. ಇದರಿಂದ ಮೂಗು, ಕೆನ್ನೆ ಮತ್ತು ತಲೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದು ಕಾಣಿಸಿಕೊಂಡಾಗ ಇನ್‌ಫೆಕ್ಷನ್‌ನಿಂದ ಮೂಗು ಸಹ ಕಟ್ಟಿಕೊಳ್ಳುತ್ತದೆ, ಜೊತೆಗೆ ಉಸಿರಾಟಕ್ಕೂ ಕಷ್ಟಪಡಬೇಕಾಗುತ್ತದೆ. ಹೀಗೆ ಮೂಗು ಕಟ್ಟಿಕೊಳ್ಳುವುದಕ್ಕೆ ಯಾವ ಪರಿಹಾರವನ್ನು ನೀಡಬೇಕು ಎಂದು ತಿಳಿದುಕೊಳ್ಳುವ ಮೊದಲು, ಈ ಸೈನಸ್ ಕಿರಿಕಿರಿಯ ಸಮಸ್ಯೆಗೆ ನಿಜವಾದ ಕಾರಣವೇನು ಎಂದು ತಿಳಿದು ಕೊಳ್ಳುವುದು ಉತ್ತಮ.
ಸೈನಸ್ ಬರಲು ಬ್ಯಾಕ್ಟೀರಿಯಾ ಅಥವಾ ವೈರಸ್ ದಾಳಿಗಳೇ ನಿಜವಾದ ಕಾರಣ. ಸೈನಸ್ ಗುಣಪಡಿಸುವ ಆಹಾರಗಳಿವು ಇದರ ಜೊತೆಗೆ ಪರಿಸರ ಮಾಲಿನ್ಯ, ನಾಸಲ್ ಪಾಲಿಪ್ ಎಂಬ ಸಮಸ್ಯೆಯಿಂದಾಗಿ ಮೂಗಿನಲ್ಲಿ ಉಸಿರು ಕಟ್ಟಿಕೊಳ್ಳುವಿಕೆ, ಧೂಮಪಾನ ಮುಂತಾದ ದುಶ್ಚಟಗಳು ಮತ್ತು ದುರ್ಬಲ ರೋಗ ನಿರೋಧಕ ಶಕ್ತಿ ಸಹ ಇದಕ್ಕೆ ಕೊಡುಗೆಯನ್ನು ನೀಡುತ್ತವೆ. ತೀರಾ ಮೂಗು ಕಟ್ಟಿಕೊಂಡಾಗ ನೀವು ವೈದ್ಯಕೀಯ ಉಪಚಾರವನ್ನು ಪಡೆಯಬಹುದು. ಆದರೆ ಸ್ವಲ್ಪ ಪ್ರಮಾಣದಲ್ಲಿ ಮೂಗು ಕಟ್ಟಿಕೊಂಡಿದ್ದರೆ, ಮನೆ ಮದ್ದುಗಳನ್ನು ಪ್ರಯೋಗಿಸಿ, ಇದರಿಂದ ನಿಮಗೆ ಸುಲಭವಾಗಿ ಪರಿಹಾರ ಲಭಿಸುತ್ತದೆ.
ಸೈನಸ್ ಗೆ ಸರಳವಾದ ಮನೆಮದ್ದು ಇಂದು ನಿಮಗೆ ಸೂಚಿಸುತ್ತಿರುವ ಮನೆ ಮದ್ದುಗಳು ನಿಮಗೆ ಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ ಸಮಸ್ಯೆಯನ್ನು ನಿವಾರಿಸುತ್ತವೆ. ಒಂದು ವೇಳೆ ನಿಮಗೆ ಗಂಭೀರ ಸ್ವರೂಪದ ಸೈನುಸಿಟಿಸ್ ಇದ್ದಲ್ಲಿ, ಹವಾಮಾನ ಬದಲಾವಣೆಯಾದಾಗ ಅಗತ್ಯ ಮುಂಜಾಗರೂಕತೆಗಳನ್ನು ತೆಗೆದುಕೊಳ್ಳಿ.
ಚಳಿಗಾಲದಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಆದ್ದರಿಂದ ಈ ಮನೆ ಮದ್ದುಗಳ ಪರಿಚಯವನ್ನು ಇರಿಸಿಕೊಂಡು, ಅಗತ್ಯ ಬಿದ್ದಾಗ ಇವುಗಳನ್ನು ಬಳಸಿ,
ಈರುಳ್ಳಿಗಳು
ಈರುಳ್ಳಿಯಲ್ಲಿರುವ ಆಂಟಿ ಬ್ಯಾಕ್ಟೀರಿಯಾ ಮತ್ತು ಆಂಟಿ ಫಂಗಲ್ ಗುಣಗಳು ಶಿಲೀಂಧ್ರ ಮತ್ತು ಪರಾವಲಂಬಿಗಳನ್ನು ಕೊಲ್ಲುತ್ತವೆ. ಇದರಲ್ಲಿರುವ ಗಂಧಕವು ಮೂಗಿನಲ್ಲಿ ಆದ ಇನ್‌ಫೆಕ್ಷನ್ ಅನ್ನು ನಿವಾರಿಸುತ್ತದೆ ಮತ್ತು ಮೂಗಿನಲ್ಲಿ ಸೋರುವಿಕೆಯನ್ನು ತಡೆಯುತ್ತದೆ. ಇದಕ್ಕಾಗಿ ನಿಮಗೆ ಸೈನಸ್ ಕಾಣಿಸಿಕೊಂಡಾಗ ಒಂದು ಕಚ್ಛಾ ಈರುಳ್ಳಿಯನ್ನು ಹಾಗೆಯೇ ಸೇವಿಸಿ. ಆನಂತರ ಒಂದು ಲೋಟ ನೀರನ್ನು ಕುಡಿಯಿರಿ.
ಸಮುದ್ರದ ಉಪ್ಪು ಮತ್ತು ಬೇಕಿಂಗ್ ಸೋಡಾ
ಸೈನಸ್ ಕಟ್ಟಿಕೊಂಡಾಗ ಅದಕ್ಕೆ ಮನೆಯಲ್ಲಿಯೇ ಉಪಶಮನ ಮಾಡಿಕೊಳ್ಳಬೇಕು ಎಂದು ನೋಡುತ್ತಿರುವಿರಾ? ಅದಕ್ಕಾಗಿ 4 ಕಪ್ ನೀರನ್ನು ತೆಗೆದುಕೊಂಡು, ಅದನ್ನು ಚೆನ್ನಾಗಿ ಕುದಿಸಿ. ನಂತರ ಅದು ಕೊಠಡಿಯ ಉಷ್ಣಕ್ಕೆ ಬರಲು ಬಿಡಿ. ನಂತರ ಈ ನೀರಿಗೆ 1 ಟೀ ಚಮಚ ಬೇಕಿಂಗ್ ಸೋಡಾ ಮತ್ತು ಸಮುದ್ರದ ಉಪ್ಪನ್ನು ಬೆರೆಸಿ. ನಂತರ ಇದಕ್ಕೆ 3 ಹನಿ ಟೀ ಟ್ರಿ ಮತ್ತು ನೀಲಗಿರಿ ಎಣ್ಣೆಯನ್ನು, 5 ಹನಿಗಳನ್ನು ಒರಿಗಾನೊ ತಿರುಳನ್ನು ಮತ್ತು 20 ಹನಿ ಬೆಟಾಡೈನ್ ಅನ್ನು ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಮೂಗಿಗೆ ಸುರಿದುಕೊಳ್ಳಲು ಜಲ ನೇತಿ ಮಾಡಲು ಬಳಸುವ ಪಾತ್ರೆಯನ್ನು ಬಳಸಿ.
ಆಪಲ್ ಸಿಡೆರ್ ವಿನೇಗರ್ ಒಂದು ಟೀ ಚಮಚ ಆಪಲ್ ಸಿಡೆರ್ ವಿನೇಗರ್ ಸಾಕು ಈ ಸಮಸ್ಯೆಯಿಂದ ನಿಮ್ಮನ್ನು ಪಾರು ಮಾಡಲು. ಆಪಲ್ ಸಿಡೆರ್ ವಿನೇಗರ್ ಅನ್ನು ನಿಮ್ಮ ಮೂಗಿಗೆ ಮೂರು ದಿನಗಳ ಕಾಲ ಕೆಲವು ಹನಿ ಬಿಟ್ಟುಕೊಳ್ಳಿ. ಇದರಿಂದ ಮೂಗು ಮತ್ತು ಗಂಟಲಿನಲ್ಲಿರುವ ಸಿಂಬಳ ಹೊರಟು ಹೋಗುತ್ತದೆ. ನಿಮಗೇ ಬೇಕಾದಲ್ಲಿ ಈ ವಿನೇಗರ್‌ನ ಹಬೆಯನ್ನು ಸಹ ಪಡೆದುಕೊಳ್ಳಬಹುದು.
ಬೆಳ್ಳುಳ್ಳಿ
ಬೆಳ್ಳುಳ್ಳಿಯು ಸಿಂಬಳದ ಶತ್ರು. ಬೆಳ್ಳುಳ್ಳಿಯಲ್ಲಿ ಆಂಟಿ ಬ್ಯಾಕ್ಟೀರಿಯಾ ಮತ್ತು ಆಂಟಿಫಂಗಲ್ ಅಂಶಗಳು ಹೆಚ್ಚಾಗಿ ಇರುತ್ತವೆ. ಅದಕ್ಕಾಗಿ 2-3 ತುಂಡು ಬೆಳ್ಳುಳ್ಳಿಯನ್ನು ಸೇವಿಸುತ್ತಾ ಇರಿ. ಇದು ನಿಮ್ಮ ಸೈನಸ್ ಇನ್‌ಫೆಕ್ಷನ್ ಅನ್ನು ನಿವಾರಿಸುತ್ತದೆ. ಜೊತೆಗೆ ಇದು ಪ್ರತಿ ವರ್ಷವು ನಿಮ್ಮನ್ನು ಕಾಪಾಡುವ ಗಂಭೀರ ಸ್ವರೂಪದ ಸೈನುಸಿಟಿಸ್ ಸಹ ಬರದಂತೆ ತಡೆಯುತ್ತದೆ.
ಹರ್ಬಲ್ ಟೀ ಶುಂಠಿ, ಪುದಿನಾ ಎಲೆಗಳು, ತುಳಸಿ, ದೊಡ್ಡ ಪತ್ರೆ ಮತ್ತು ಸೋಂಪು ಸೇರಿಸಿ ಮಾಡಿದ ಕಷಾಯ ಅಥವಾ ಟೀಯು ನಿಮ್ಮ ಸೈನಸ್ ಸಮಸ್ಯೆಯನ್ನು ದೂರ ಮಾಡುತ್ತದೆ. ಇದನ್ನು ಸೇವಿಸಿದ ಕೂಡಲೆ ನಿಮ್ಮ ಕಟ್ಟಿದ ಮೂಗಿನಿಂದ ನಿಮಗೆ ವಿಮುಕ್ತಿ
ದೊರೆಯುತ್ತದೆ. ಅಧಿಕ ನೀರನ್ನು ಸೇವಿಸಿ ಕಟ್ಟಿದ ಮೂಗಿನಿಂದ ವಿಮುಕ್ತರಾಗಬೇಕು ಎಂದಲ್ಲಿ ಅಧಿಕ ನೀರನ್ನು ಸೇವಿಸಬೇಕು. ದಿನಕ್ಕೆ 8 ಲೋಟ ನೀರನ್ನು ಸೇವಿಸಿ. ಇದು ನಿಮ್ಮನ್ನು ನಿರ್ಜಲೀಕರಣದಿಂದ ಕಾಪಾಡುವುದರ, ಜೊತೆಗೆ ಮೂಗಿನ ಹೊಳ್ಳೆಗಳ ಒಳಗೆ ಕಟ್ಟಿಕೊಂಡಿರುವ ಸಿಂಬಳದಿಂದ ಸಹ ನಿಮ್ಮನ್ನು ಮುಕ್ತಗೊಳಿಸುತ್ತದೆ.
ನಿಮಗೆ ಬರೀ ನೀರು ಕುಡಿಯಲು ಬೇಸರವಾದಲ್ಲಿ, ಬಿಸಿ ಸೂಪ್ ಅಥವಾ ಹರ್ಬಲ್ ಟೀಯನ್ನು ಸೇವಿಸಬಹುದು.