ಏನೋ ನಿರುತ್ಸಾಹ…ಕೆಲಸವನ್ನು ಜೋಶ್‌ನಿಂದ ಮಾಡಲಾಗುತ್ತಿಲ್ಲ, ಸಕತ್‌ಬೋರು ಅಂತೆಲ್ಲಾ ಅನಿಸಲಾರಂಭಿಸಿದೆಯೇ? ಹಾಗಾದರೆ ಅದಕ್ಕೆ ನಿಮ್ಮ ಸೆಕ್ಸ್‌ಲೈಫ್‌ನಲ್ಲಿ ನೀವು ತೋರುತ್ತಿರುವ ಉದಾಸೀನವೇ ಕಾರಣವಾಗಿರಬಹುದು!
ಸೆಕ್ಸ್‌ಎನ್ನುವುದು ಹುಶ್…ಹುಶ್‌ವಿಷಯ, ಆದ್ದರಿಂದ ಇದರ ಬಗ್ಗೆ ಬಹಿರಂಗವಾಗಿ ಮಾತನಾಡುವುದು ತಪ್ಪು ಎಂಬ ಕಲ್ಪನೆ ನಮ್ಮ ಸಮಾಜದಲ್ಲಿ ಇದೆ.
ಎಷ್ಟೋ ಜನರು ಸೆಕ್ಸ್‌ಕುರಿತು ತಮ್ಮ ಸಂಗಾತಿ ಬಳಿ ಚರ್ಚೆ ಮಾಡುವುದೇ ಇಲ್ಲ. ಓಪನ್‌ಆಗಿ ಮಾತನಾಡದ ಕಾರಣ ಒಬ್ಬರ ಆಸೆಯನ್ನು ಮತ್ತೊಬ್ಬರು ಅರ್ಥೈಹಿಸಿಕೊಳ್ಳಲು ವಿಫಲವಾಗುತ್ತಾರೆ. ಪರಿಣಾಮ ಸೆಕ್ಸ್ ಜೀವನದಲ್ಲಿ ಅತೃಪ್ತಿ ಹೊಂದುತ್ತಾರೆ.
ಈ ಅತೃಪ್ತಿ ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುವುದು. ದಂಪತಿ ನಡುವೆ ಮಾಧುರ್ಯ ಮೂಡಲು ಲೈಂಗಿಕ ತೃಪ್ತಿ ಮುಖ್ಯ.
ಹೌದು ಯಾರು ವಾರದಲ್ಲಿ 2-3 ಬಾರಿ ಸೆಕ್ಸ್‌ಮಾಡುತ್ತಾರೋ ಅವರು ಕೆಲಸವನ್ನು ತುಂಬಾ ಉತ್ಸಾಹದಿಂದ ಮಾಡುತ್ತಾರೆ ಎಂದು ಸಂಶೋಧನೆಯಿಂದ ದೃಢಪಟ್ಟಿದೆ.