ಆರೋಗ್ಯ

ನಿಮಗೆ ಮಗು ಆಗಬೇಕು ಎಂದಿದ್ದರೆ ಇದನ್ನು ಕುಡಿಯಲೇಬೇಡಿ…..!

Pinterest LinkedIn Tumblr

ಮಗು ಬೇಕೆಂದು ಬಯಸುತ್ತಿದ್ದೀರಾ? ಹಾಗಾದರೆ ಸೋಡಾ, ಮತ್ತಿತರ ತಂಪು ಪಾನೀಯಕ್ಕೆ ಗುಡ್‌ಬೈ ಹೇಳಲೇಬೇಕು. ಈ ಕೃತಕ ಪಾನೀಯ ಕುಡಿಯುವುದರಿಂದ ಹೆಣ್ಣು-ಗಂಡು ಇಬ್ಬರಲ್ಲಿ ಸಂತಾನ ಶಕ್ತಿ ಕಡಿಮೆಯಾಗುವುದೆಂದು ಅಧ್ಯಯನ ಎಚ್ಚರಿಕೆ ನೀಡಿದೆ.

ಸೋಡಾ ಹಾಗೂ ಇತರ ತಂಪು ಪಾನೀಯ ಕುಡಿಯುವುದರಿಂದ ಗರ್ಭಧಾರಣೆಯ ಸಾಧ್ಯತೆ 20% ಕಡಿಮೆಯಾಗುವುದೆಂದು Epidemiology ಎಂಬ ಜರ್ನಲ್‌ಹೇಳಿದೆ.

ಇದಕ್ಕೂ ಮೊದಲು ನಡೆಸಿದ ಅಧ್ಯಯನದಲ್ಲಿ ತಂಪು ಪಾನೀಯಗಳು ಮೈ ತೂಕ ಹೆಚ್ಚಿಸುವುದು, ಟೈಪ್‌2 ಮಧುಮೇಹ, ಚಿಕ್ಕ ಪ್ರಾಯದಲ್ಲಿಯೇ ಋತುಮತಿಯಾಗುವುದು, ವೀರ್ಯಾಣುಗಳ ಸಾಮರ್ಥ್ಯ ಕುಗ್ಗುವುದು ಮುಂತಾದ ಸಮಸ್ಯೆಗಳಿಗೆ ಒಂದು ಕಾರಣವಾಗಿದೆ ಎಂದು ಹೇಳಿದೆ.

ಕೆನಡಾದಲ್ಲಿ ನಡೆಸಿದ ಈ ಅಧ್ಯಯನದಲ್ಲಿ 21-45 ವರ್ಷದೊಳಗಿನ 3,828 ಮಹಿಳೆಯರು ಹಾಗೂ 1,045 ಪುರುಷರು ಭಾಗವಹಿಸಿದ್ದರು.

Comments are closed.