ಆರೋಗ್ಯ

ಪುರುಷರಿಗಾಗಿ ಬಂದಿದೆ ಗರ್ಭ ನಿರೋಧಕ ಜೆಲ್‌ !

Pinterest LinkedIn Tumblr

ಗರ್ಭ ನಿರೋಧಕವಾಗಿ ಪುರುಷರು ಇದೀಗ ಜೆಲ್‌ ಬಳಸಬಹುದು. ಹೌದು, ಅಂತಹದ್ದೊಂದು ಪ್ರಯೋಗ ನಡೆದಿದ್ದು, ಇದು ಯಶಸ್ವಿಯಾದರೆ ಪುರುಷರ ಗರ್ಭ ನಿರೋಧಕದಲ್ಲಿ ಇದೊಂದು ವಿನೂತನ ಪ್ರಯೋಗ ಎಂದೆನಿಸಿಕೊಳ್ಳಲಿದೆ.

ಈ ಜೆಲ್‌ ಬಳಕೆ ಸುಲಭ. ಪ್ರತಿ ನಿತ್ಯ ತೋಳುಗಳ ಮೇಲೆ ಇಂತಹದ್ದೊಂದು ಜೆಲ್‌ ಹಚ್ಚವುದರಿಂದ ಹಾರ್ಮೊ ನ್‌ ಮೇಲೆ ಪ್ರಭಾವ ಬೀರುತ್ತದೆ. ಶೇ. ನೂರರಷ್ಟು ಇದು ರಕ್ಷಣೆ ನೀಡುತ್ತದೆ ಎನ್ನಲ್ಲಿಕ್ಕಾಗದು. ಜೆಲ್‌ ಪ್ರಯೋಗಕ್ಕೆ ಸಿದ್ಧವಾಗಿದ್ದು, ಇದು ಎಷ್ಟು ಪರಿಣಾಮಕಾರಿ ಎಂಬುದನ್ನು ನೋಡಬೇಕಿದೆ.

Comments are closed.