ಆರೋಗ್ಯ

ಗರ್ಭಿಣಿಯರು ಮಸಾಲೆಯುಕ್ತ ಆಹಾರ ತಿಂದರೆ ನಿಮ್ಮ ಮಗುವಿಗೆ ಏನಾಗುತ್ತದೆ?

Pinterest LinkedIn Tumblr

ಗರ್ಭಧಾರಣೆಯಲ್ಲಿ ಉಂಟಾಗುವ ಬಯಕೆಗಳ ಬಗ್ಗೆ ಯಾರಿಗೆ ಗೊತ್ತಿರುವುದಿಲ್ಲ ಹೇಳಿ. ಅಮ್ಮಂದಿರು ಉಪ್ಪಿನಕಾಯಿ ಇಂದ ಹಿಡಿದು ಜೇಡಿ ಮಣ್ಣಿನವರೆಗೆ ವಿಚಿತ್ರವಾದ ಬಯಕೆಗಳನ್ನ ಹೊಂದುತ್ತಾರೆ. ಗರ್ಭಿಣಿ ಆಗಿದ್ದಾಗ ನಿಮ್ಮ ದೇಹದಲ್ಲಿನ ಹಾರ್ಮೋನುಗಳು ನೀವು ರುಚಿಸುವ ಹಾಗು ವಾಸನೆ ಹೀರುವ ರೀತಿಯ ಮೇಲೆ ಪ್ರಭಾವ ಬೀರಿ, ನೀವು ಹೆಚ್ಚೆಚ್ಚು ರುಚಿಯುಳ್ಳ ತಿನಿಸುಗಳನ್ನ ತಿನ್ನುವಂತೆ ಮಾಡುತ್ತದೆ, ಅದು ಬಹಳ ಮಸಾಲೆಯುಕ್ತ ಆಹಾರಗಳನ್ನೂ ಒಳಗೊಂಡು. ಆದರೆ ನೀವು ಪ್ರತಿದಿನ ಖಾರವಾದ ಬಿರಿಯಾನಿ ಅಥವಾ ಮಸಾಲೆಯುಕ್ತ ಸಾಂಬಾರ್ ತಿಂದರೆ ನಿಮ್ಮ ಮಗುವಿಗೆ ಏನಾಗುತ್ತದೆ? ಇಷ್ಟೊಂದು ಖಾರದಿಂದ ಮಗುವು ಒಳಗಡೆ ಬೆವರುತ್ತಿರುತ್ತದೆಯೇ?

ಕೆಲವೊಂದು ಸಂಶೋಧನೆಗಳ ಪ್ರಕಾರ ಗರ್ಭಿಣಿ ಹೆಂಗಸರು ಮಸಾಲೆಯುಕ್ತ ಆಹಾರವನ್ನ ತಿಂದರೆ, ಮಗುವು ಮೊದಲಿನಿಂದಲೇ ಆ ಸ್ವಾದಕ್ಕೆ ಒಗ್ಗಿಕೊಳ್ಳುತ್ತದೆ. ಒಂದು ಅಧ್ಯಯನವು ಊಟದ ರುಚಿಯು ಅಮ್ಮನಿಂದ ಮಗುವಿನ ಸುತ್ತ ತುಂಬಿಕೊಂಡಿರುವ ಆಮ್ನಿಯೋಟಿಕ್ ದ್ರವ್ಯ ಸೇರಬಹುದು. ಹೀಗಾಗಿ ಅಮ್ಮ ಗರ್ಭಧಾರಣೆಯಲ್ಲಿ ಏನು ತಿನ್ನುವಳೋ, ಮಗುವು ಮುಂದೆ ಅದೇ ರುಚಿಯನ್ನ ಕಂಡುಕೊಳ್ಳುತ್ತದೆ. ಹೀಗಾಗಿ ನೀವು ಖಾರವಾದ ಆಹಾರ ತಿಂದರೆ, ನಿಮ್ಮ ಆಮ್ನಿಯೋಟಿಕ್ ದ್ರವ್ಯ ಕೂಡ ಸ್ವಲ್ಪ ಖಾರ ರುಚಿ ಹೊಂದುತ್ತದೆ, ಇದು ನಿಮ್ಮ ಮಗುವನ್ನ ಖಾರದ ರುಚಿಗೆ ಪರಿಚಯಿಸುತ್ತದೆ.

ಮಗುವು ಮಸಾಲೆಯುಕ್ತ ಆಹಾರಕ್ಕೆ ಹೇಗೆ ಸ್ಪಂದಿಸುತ್ತದೆ ಎಂದು ನೀವು ಯೋಚಿಸುತ್ತಿದ್ದರೆ, ಅದಕ್ಕೆ ಉತ್ತರ ಸುಲಭವಿಲ್ಲ. ಹೆರಿಗೆ ಪ್ರಸೂತಿ ತಜ್ಞರ ಪ್ರಕಾರ, ಕೆಲವೊಂದು ಮಕ್ಕಳು ಊಟದ ನಂತರ ಹೊಟ್ಟೆಯೊಳಗೆ ಮಲಗಿಕೊಂಡರೆ, ಇನ್ನೂ ಕೆಲವು ಅಮ್ಮ ಊಟ ಮಾಡಿದ ನಂತರ ಹೆಚ್ಚು ಆಕ್ಟಿವ್ ಆಗುತ್ತವೆ. ಇದಕ್ಕೆ ಕಾರಣ ನೀವು ಸೇವಿಸುವ ಆಹಾರದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿದ್ದು, ಅದರೊಳಗಿನ ಕಾರ್ಬೋಹೈಡ್ರೇಟ್ಸ್ ಮಗುವನ್ನ ಹೆಚ್ಚು ಆಕ್ಟಿವ್ ಮಾಡುವುದು ಕೂಡ ಇರಬಹುದು ಎನ್ನುತ್ತಾರೆ ಅವರು. ಹೀಗಾಗಿ ನೀವು ತಿನ್ನುವ ಮಸಾಲೆಯುಕ್ತ ಪದಾರ್ಥದಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಅಥವಾ ಕಾರ್ಬೋಹೈಡ್ರೇಟ್ಸ್ ಇರದಿದ್ದರೆ, ಮಗುವು ಅಷ್ಟಾಗಿ ಹೆಚ್ಚೇನು ಪ್ರತಿಕ್ರಿಯಿಸುವುದಿಲ್ಲ.

ಮಸಾಲೆಯುಕ್ತ ಆಹಾರ ತಿನ್ನವುದು ನಿಮ್ಮ ಮಗುವಿಗೆ ಯಾವುದೇ ರೀತಿಯ ತೊಂದರೆಯನ್ನ ಉಂಟು ಮಾಡುವುದಿಲ್ಲ. ಆದರೆ ಅದು ನಿಮ್ಮ ಜೀರ್ಣಕ್ರಿಯೆಯ ಮೇಲೆ ಪ್ರಭಾವ ಬೀರಬಹುದು. ನೀವು ಹೆಚ್ಚು ಮಸಾಲೆಯುಕ್ತ ಆಹಾರ ಸೇವಿಸಿದರೆ, ಅದರಿಂದ ನಿಮ್ಮ ದೇಹದಲ್ಲಿ ಹೆಚ್ಚು ಅಸಿಡಿಕ್(ಆಮ್ಲಿಯ) ಅಂಶ ಸೇರಿಕೊಳ್ಳುತ್ತದೆ. ಗರ್ಭಧಾರಣೆಯಲ್ಲಿ ನಿಮ್ಮ ಗರ್ಭಕೋಶವು ಈ ಅಸಿಡಿಕ್ ಪದಾರ್ಥಗಳನ್ನ ಮೇಲಕ್ಕೆ ತಳ್ಳುವುದರಿಂದ, ನಿಮಗೆ ಎದೆಯುರಿ ಮತ್ತು ಬೆಳಗಿನ ಬೇನೆ (ಮಾರ್ನಿಂಗ್ ಸಿಕ್ನೆಸ್) ಮತ್ತಷ್ಟು ಜಾಸ್ತಿಯಾಗುತ್ತದೆ. ಹೀಗಾಗಿ ನೀವು ನಿಮ್ಮ ಜೀರ್ಣಾಂಗಗಳು ಎಷ್ಟು ಪ್ರಮಾಣದ ಖಾರ ಸ್ವೀಕರಿಸುತ್ತದೆ ಎಂಬುದನ್ನ ಅರಿತು ತಿಂದರೆ ಒಳ್ಳೆಯದು.

ಭಾರತದಂತಹ ದೇಶದಲ್ಲಿ ನಾವು ದಿನಕ್ಕೆ ಮೂರೂ ಬಾರಿಯೂ ಮಸಾಲೆಯುಕ್ತ ಆಹಾರವನ್ನೇ ಸೇವಿಸುತ್ತೇವೆ. ಅದು ಮಗುವಿನ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಿಲ್ಲ. ಗರ್ಭಿಣಿ ಆಗಿದ್ದಾಗ ಬಯಕೆಗಳು ಉಂಟಾಗುವುದು ಸಹಜ. ಇದು ಹಾರ್ಮೋನುಗಳ ಬದಲಾವಣೆ ಇಂದ ಆಗುವುದು. ನೀವು ನಿಮ್ಮ ಗರ್ಭಧಾರಣೆಯಲ್ಲಿ ಎದೆಯುರಿ ಅಂತಹ ಸಮಸ್ಯೆ ಎದುರಿಸದೆ ಖಾರವಾದ ಆಹಾರವನ್ನ ತಿನ್ನಬೇಕು ಎಂದರೆ, ನೀವು ಮೊದಲಿಗೆ ಸ್ವಲ್ಪ ಪ್ರಮಾಣದ ಖಾರದ ಆಹಾರವನ್ನ ಸ್ವೀಕರಿಸಿ ಪರೀಕ್ಷಿಸಿ. ನಿಮ್ಮ ದೇಹಕ್ಕೆ ಅದು ಸರಿ ಹೋಗುತ್ತದೆ ಎಂದರೆ, ಆಗ ಸ್ವಲ್ಪ ಸ್ವಲ್ಪ ಹೆಚ್ಚಿಸಿಕೊಂಡು ಬನ್ನಿ.

Comments are closed.