ಅಧಿಕ ಮಸಾಲಯುಕ್ತ ಆಹಾರ ಸೇವನೆ, ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡದಿರುವುದು, ಪೌಷ್ಟಿಕಾಂಶದ ಕೊರತೆ, ಅತಿಯಾದ ಕುರುಕಲು ತಿಂಡಿಯ ಸೇವನೆ ಸೇರಿದಂತೆ ಅನೇಕ ಕಾರಣಗಳಿಂದ ಅಸಿಡಿಟಿ ಅಥವಾ ಎದೆಯುರಿಯ ಸಮಸ್ಯೆ ಹುಟ್ಟಿಕೊಳ್ಳುತ್ತದೆ. ಈ ಸಮಸ್ಯೆ ಒಮ್ಮೆ ಶುರುವಾದರೆ ಇದರಿಂದ ಮುಕ್ತಿ ಪಡೆಯುವುದು ಕಷ್ಟ.
ಅಸಿಡಿಟಿ ಉಂಟಾದಾಗ ಜಠರದಲ್ಲಿ ಆಮ್ಲ ಬಿಡುಗಡೆ ಆಗುತ್ತದೆ, ಇದು ಜಠರ ಅಥವಾ ಅನ್ನನಾಳದ ಮೂಲಕ ಆಮ್ಲ ಬಾಯಿಗೆ ಬರುವ ಸಾಧ್ಯತೆ ಇರುತ್ತದೆ ಅದು ಹೊಟ್ಟೆಯಲ್ಲಿ ಆಮ್ಲದ ಪ್ರಮಾಣ ಹೆಚ್ಚಾಗಿರುವುದು ಕಾರಣ. ಇದು ಹೆಚ್ಚಾದರೆ ಕೆಲವೊಮ್ಮೆ ಎದೆಯ ಭಾಗದಲ್ಲಿ ಮತ್ತು ಉದರ ಭಾಗದಲ್ಲಿ ನೋವು ಕೂಡ ಕಾಣಿಸಿಕೊಳ್ಳುತ್ತದೆ.
ಯಾವುದೇ ಸಮಸ್ಯೆಯನ್ನು ಆರಂಭದಲ್ಲಿ ಪ್ರಯತ್ನಿಸಿದರೆ ಅದನ್ನು ಶಾಶ್ವತವಾಗಿ ಹೋಗಲಾಡಿಸಬಹುದು. ಇಂತಹ ಗ್ಯಾಸ್ಟ್ರಿಕ್ ಮತ್ತು ಅಸಿಡಿಟಿ ಸಮಸ್ಯೆಗೆ ನೈಸರ್ಗಿಕ ಆಹಾರ ಸೇವಿಸುವುದರಿಂದ ಪರಿಹಾರ ಕಂಡುಕೊಳ್ಳಬಹುದು. ಆ ಆಹಾರಗಳು ಯಾವುವು ಎಂದು ತಿಳಿದುಕೊಳ್ಳಲು ಮುಂದೆ ಓದಿ.
೧.ಶುಂಠಿ ಚಹಾ
ಎದೆಯುರಿ, ಗ್ಯಾಸ್ಟ್ರಿಕ್, ವಾಕರಿಕೆ ಮತ್ತು ಜೀರ್ಣಕ್ರಿಯೆ ಅಂತಹ ಯಾವುದೇ ಸಮಸ್ಯೆಗೆ ಶುಂಠಿ ಅತ್ಯುತ್ತಮ ಆಹಾರ.
ನೀವು ಏನು ಮಾಡಬೇಕು?
ಒಂದು ಶುಂಠಿಯ ಸಣ್ಣ ಭಾಗವನ್ನು ಜಜ್ಜಿಕೊಳ್ಳಿ
ಒಂದು ಪಾತ್ರೆಯಲ್ಲಿ ನೀರನ್ನು ಕಾಯಿಸಿ
ಇದಕ್ಕೆ ಜಜ್ಜಿಕೊಂಡ ಶುಂಠಿಯನ್ನು ಹಾಕಿ, ಕುದಿಯಲು ಬಿಡಿ
ನಂತರ ಇದನ್ನು ಶೋಧಿಸಿ, ಲೋಟಕ್ಕೆ ಹಾಕಿ ಕುಡಿಯಿರಿ
ಊಟದ ನಂತರ ಇದನ್ನು ಸೇವಿಸಿ. ಪರಿಣಾಮಕಾರಿ ಮತ್ತು ತ್ವರಿತ ಫಲಿತಾಂಶ ಕಾಣಲು ಪ್ರತಿದಿನ ಇದನ್ನು ಮಾಡಿ.
೨.ಬಾಳೆಹಣ್ಣು
ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನು ನಿತ್ಯ ಸೇವಿಸುವುದರಿಂದ ಎದೆಯುರಿ ಸಮಸ್ಯೆಯನ್ನು ನಿವಾರಿಸಬಹುದು. ಕೆಲವರಿಗೆ ಬಾಳೆ ಹಣ್ಣನ್ನು ಸೇವಿಸಿದರೆ ಸಮಸ್ಯೆ ಉಲ್ಭಣವಾಗುವ ಸಾಧ್ಯತೆ ಇರುತ್ತದೆ. ಅಂತಹವರು ಯಾವುದೇ ಕಾರಣಕ್ಕೂ ಬಾಳೆ ಹಣ್ಣನ್ನು ತಿನ್ನುವ ಪ್ರಯತ್ನಕ್ಕೆ ಮುಂದಾಗದಿರಿ.
೩.ತೋಕ್ಕೆ ಗೋಧಿ
ಸಾಮಾನ್ಯವಾಗಿ ಮಸಾಲೆಯುಕ್ತ ಆಹಾರಗಳು, ಕರಿದ ಪದಾರ್ಥಗಳು ಮತ್ತು ಕೆಲವು ಇತರ ಪ್ರಚೋದಕ ಆಹಾರಗಳಿಂದ ಉಂಟಾಗುತ್ತದೆ. ಆದ್ದರಿಂದ ನಿಮ್ಮ ಉಪಾಹಾರಕ್ಕಾಗಿ ಅಥವಾ ನಿಮ್ಮ ಊಟಕ್ಕೆ ಓಟ್ ಮೀಲ್ ಅನ್ನು ಸೇವಿಸಿ. ನಿಮ್ಮ ಉದರದಲ್ಲಿ ಆಮ್ಲಗಳನ್ನು ಸರಾಗಗೊಳಿಸಲು ಸಹಾಯ ಮಾಡುವುದು.
೪.ಬಾದಾಮಿ
ಬಾದಾಮಿ ಹಾಲನ್ನು ಸೇವಸುವುದರಿಂದ ಎದೆಯುರಿಯನ್ನು ನಿವಾರಿಸಿಕೊಳ್ಳಬಹುದು, ಮತ್ತು ಇದು ಉದರದಲ್ಲಿನ ಆಮ್ಲವು ಸಮತೋಲನದಲ್ಲಿರುವಂತೆ ಕಾಪಾಡುತ್ತದೆ. ಇದರ ಜೊತೆಗೆ ಬಾಳೆಹಣ್ಣನ್ನು ಸೇರಿಸಿ ಸೇವಿಸುವುದು ಹಲವು ಲಾಭಗಳನ್ನು ಪಡೆಯಬಹುದು, ನಿಮಗೆ ಬಾಳೆಹಣ್ಣಿನ ಅಲರ್ಜಿ ಇದ್ದರೆ ಬಾಳೆಹಣ್ಣನ್ನು ಉಪಯೋಗಿಸದೆ ಇರುವುದು ಒಳ್ಳೆಯದು.
೫.ಜೀರಿಗೆ
ಜೀರಿಗೆ ಅತ್ಯಂತ ಉತ್ತಮವಾದ ಜೀರ್ಣಕಾರಿ ಸಾಧನವಾಗಿದೆ. ಹಾಗಾಗಿಯೇ ಭಾರತದಲ್ಲಿ ಊಟದ ನಂತರ ಜೀರಿಗೆ ನೀರು ಕುಡಿಯುವುದು ಅಥವಾ ಸೋಂಪುಗಳ ಜೊತೆ ಜೀರಿಗೆ ತಿನ್ನುವ ಸಂಪ್ರದಾಯವಿದೆ. ಇದನ್ನು ಸೇವಿಸುವುದರಿಂದ ಬಾಯಿ ವಾಸನೆ ಕಡಿಮೆಯಾಗುವ ಜೊತೆಗೆ ಹೊಟ್ಟೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ, ಜೊತೆಗೆ ಹೊಟ್ಟೆಯನ್ನು ತಂಪಾಗಿ ಇರಿಸುತ್ತದೆ.
೬.ಮಿಣಕಿ ಹಣ್ಣು/ಕರ್ಬುಜ
ಕರ್ಬೂಜ ರಸಭರಿತ ಹಣ್ಣುಗಳಲ್ಲಿ ಒಂದು. ಇದು ದೇಹಕ್ಕೆ ತಂಪನ್ನು ನೀಡುವುದರ ಜೊತೆಗೆ ಆಸಿಡ್ ಮತ್ತು ಎದೆಯುರಿಯಂತಹ ಸಮಸ್ಯೆಯನ್ನು ನಿಯಂತ್ರಿಸುತ್ತದೆ. ಕೆಲವರಿಗೆ ಇದರ ರಸವು ಅಲರ್ಜಿ ಅಥವಾ ದೇಹಕ್ಕೆ ಒಗ್ಗದೆ ಇರಬಹುದು. ಅಂತಹವರು ಈ ಹಣ್ಣನ್ನು ಬಳಸದೆ ಇರುವುದು ಉತ್ತಮ.
೭.ಮೀನು
ಮೀನು ಮಾಂಸಹಾರ ಗುಂಪಿಗೆ ಸೇರಿದೆಯಾದರೂ ಅತ್ಯುತ್ತಮ ಆಹಾರ ಎನ್ನಬಹುದು. ಇದನ್ನು ಬೇಯಿಸಿ ತಿನ್ನುವುದರಿಂದ ಆಸಿಡಿಟಿಯನ್ನು ನಿಯಂತ್ರಿಸಬಹುದು. ಇದರೊಂದಿಗೆ ಇನ್ನೂ ಅನೇಕ ಆರೋಗ್ಯಕರ ಗುಣವನ್ನು ಮೀನು ಒಳಗೊಂಡಿದೆ ಎನ್ನಬಹುದು.
ಇದರ ಜೊತೆಗೆ ನೆಲ್ಲಿಕಾಯಿ, ಏಲಕ್ಕಿ, ಪರಂಗಿ ಹಣ್ಣು, ನಿಂಬೆಹಣ್ಣು, ಕ್ಯಾರೆಟ್, ಸಾಸಿವೆ ಮುಂತಾದವುಗಳನ್ನು ಸೇವಿಸುವುದು ಇಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಸಹಾಯವಾಗುತ್ತದೆ.

Comments are closed.