ಆರೋಗ್ಯ

ಮೊಬೈಲ್ ಫೋನ್‌ನಿಂದ ವೀರ್ಯಾಣು ಸಂಖ್ಯೆ ಇಳಿಕೆ

Pinterest LinkedIn Tumblr

ಇನ್ನು ಮುಂದೆ ಆದರೂ ಗಂಡಸರು ತಮ್ಮ ಮೊಬೈಲ್ ಫೋನ್ ಅನ್ನು ತಮ್ಮ ಬ್ಯಾಗ್ ಅಲ್ಲಿ ಇಟ್ಟುಕೊಂಡು ಓಡಾಡಲು ಶುರು ಮಾಡಬೇಕು. ಏಕೆಂದರೆ ಇಸ್ರೇಲ್ ದೇಶದ ಟೆಕ್ನಿಕಾಮ್ ಮೆಡಿಕಲ್ ಕಾಲೇಜಲ್ಲಿ ನಡೆಸಿದ ಸಂಶೋಧನೆಯಲ್ಲಿ ಮೊಬೈಲ್ ಅನ್ನು ಗಂಡಸರು ತಮ್ಮ ಪ್ಯಾಂಟಿನ ಜೇಬಿನಲ್ಲಿ ಇಟ್ಟುಕೊಂಡರೆ, ಅದು ಅವರ ವೀರ್ಯಾಣು ಸಂಖ್ಯೆಗೆ ಭಾರಿ ಪೆಟ್ಟು ಬೀಳುತ್ತದೆ ಎಂಬುದನ್ನ ಕಂಡು ಹಿಡಿದಿದ್ದಾರೆ. ಇದರಿಂದ ಗಂಡಸರ ಫಲವತ್ತತೆ ಕಡಿಮೆ ಆಗುತ್ತದೆ.

ಫಲವತ್ತತೆ ತಜ್ಞರು ಒಂದು ಫರ್ಟಿಲಿಟಿ ಕ್ಲಿನಿಕ್ ಗೆ ಭೇಟಿ ಕೊಡುತ್ತಿದ್ದ 100 ಮಂದಿ ಗಂಡಸರನ್ನ ಪರಿಗಣೆನೆಗೆ ತೆಗೆದುಕೊಂಡರು. ಅದರಲ್ಲಿ ಯಾವೆಲ್ಲಾ ಗಂಡಸರು ದಿನಕ್ಕೆ ಒಂದು ಗಂಟೆಯಾದರೂ ಮೊಬೈಲ್ ಅನ್ನು ಬಳಸುತ್ತಿದ್ದರೋ, ಅಥವಾ ಫೋನ್ ಅನ್ನು ಅವರ ಹತ್ತಿರವೇ ಇಟ್ಟುಕೊಂಡಿದ್ದರೋ, ಅವ್ರೆಲ್ಲಾ ತಮ್ಮ “ವೀರ್ಯಾಣುಗಳನ್ನ ಬೇಯಿಸಿದ್ದಾರೆ” ಮತ್ತು ತಮ್ಮ ವೀರ್ಯಾಣು ಸಂಖ್ಯೆಯನ್ನು ಗರ್ಭತಾಳುವಂತೆ ಮಾಡಲು ಸಹ ಆಗದಷ್ಟು ಇಳಿಕೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ. ಯಾರೆಲ್ಲಾ ಗಂಡಸರು ಫೋನ್ ಅನ್ನು ತಮ್ಮ ಪ್ಯಾಂಟಿನ ಮುಂದಿನ ಜೇಬಿನಲ್ಲಿ ಇಟ್ಟುಕೊಳ್ಳುತ್ತಿದ್ದರೋ, ಅಂತವರಲ್ಲಿ ಬಹಳ ಹೆಚ್ಚ್ಚಾಗಿ (47% ಅಷ್ಟು ಗಂಡಸರು) ಈ ತೊಂದರೆ ಹರಡಿತ್ತು. ಸಂಶೋಧನಾಕಾರರು ಇದಕ್ಕೆ ಕಾರಣ ಮೊಬೈಲ್ ಇಂದ ಉಂಟಾಗುವ ಎಲೆಕ್ಟ್ರೋಮ್ಯಾಗ್ನೆಟಿಕ್ (ವಿದ್ಯುತ್ಕಾಂತೀಯ ಚಟುವಟಿಕೆ) ಆಕ್ಟಿವಿಟಿ ಇಂದ ಫೋನ್ ಬಿಸಿ ಆಗಿ, ವೀರ್ಯಾಣುವನ್ನ ಬಿಸಿ ಮಾಡುತ್ತದೆ (ಬೇಯಿಸುವುದು).

ಇಷ್ಟೇ ಅಲ್ಲದೆ ಯಾರೆಲ್ಲಾ ಗಂಡಸರು ಫೋನ್ ಅನ್ನು ತಮ್ಮ ತಲೆದಿಂಬಿನ ಪಕ್ಕದಲ್ಲೇ ಇಟ್ಟುಕೊಂಡು ಮಲಗುತ್ತಾರೋ ಅಥವಾ ತಮ್ಮ ಮಂಚದ ಪಕ್ಕದಲ್ಲೇ ಇರುವ ಟೇಬಲ್ ಮೇಲೆ ಇಟ್ಟು ಮಲಗುತ್ತಾರೋ, ಅಂತವರಲ್ಲಿ ಇತರರಿಗಿಂತ ಹೆಚ್ಚು ವೀರ್ಯದ ಕೊರತೆ ಕಂಡುಬಂದಿದೆ.

ಹೀಗಾಗಿ ತಜ್ಞರ ಪ್ರಕಾರ ಗಂಡಸರು ತಮ್ಮ ಮೊಬೈಲ್ ಅನ್ನು ತಮ್ಮ ವೃಷಣಗಳಿಂದ ದೂರ – ಅಂದರೆ ಶರ್ಟ್ ಜೇಬಿನಲ್ಲಿ ಇಟ್ಟುಕೊಳ್ಳಬೇಕು. ಇದು ನೀವು ನಿಮ್ಮನ್ನು ವೀರ್ಯಾಣು ಸಂಖ್ಯೆಯನ್ನ ಇಳಿಸಿಕೊಳ್ಳುವುದರಿಂದ ಅಥವಾ ತೀರಾ ಗಣನೀಯವಾಗಿ ಇಳಿಸಿಕೊಳ್ಳುವುದರಿಂದ ತಪ್ಪಿಸುತ್ತದೆ.

ಹೆಂಗಸರು ತಮ್ಮ ಮೊಬೈಲ್ ಅನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಳ್ಳದ ಕಾರಣ, ಅವರ ಫಲವತ್ತತೆ ಮೇಲೇನೂ ಇದು ಪರಿಣಾಮ ಬೀರುವುದಿಲ್ಲ. ಹೀಗಾಗಿ ಇದು ಕೇವಲ ಗಂಡಸರಿಗೆ ಅನ್ವಯ ಆಗುವುದು. ಗಂಡಸರು ಇನ್ನುಮುಂದೆ ತಮ್ಮ ಫೋನ್ ಅನ್ನು ಬೇರೆ ಕೋಣೆಯಲ್ಲಿ ಇಟ್ಟುಬಂದು ಮಲಗಿ.

Comments are closed.