ಆರೋಗ್ಯ

ಕಾಮದ ಅಮಲಿನಲ್ಲಿ ಆಗುವ ಗಾಯಕ್ಕೆ ಇಲ್ಲಿದೆ ಉಪಶಮನ…

Pinterest LinkedIn Tumblr

ಬೆಂಗಳೂರು: ಕಾಮ ತೃಷೆ ತೀರಿಸಿಕೊಳ್ಳುವ ಭರದಲ್ಲಿ ಸಂಗಾತಿ ಮೈ ಮೇಲೆ ಕಚ್ಚಿ ಗಾಯವಾಗಿದ್ದರೆ ಹೊರಗೆ ಮುಖ ತೋರಿಸುವುದು ಹೇಗೆಂದು ಸಂಕೋಚ ಪಡುತ್ತಿದ್ದೀರಾ? ಹಾಗಿದ್ದರೆ ಈ ಸಿಂಪಲ್ ಟ್ರಿಕ್ ಮಾಡಿ ನೋಡಿ.

ಐಸ್ ಪ್ಯಾಕ್
ಗಾಯವಾಗಿರುವ ಜಾಗಕ್ಕೆ ಐಸ್ ಪ್ಯಾಕ್ ಇಟ್ಟು ಮಸಾಜ್ ಮಾಡಿ. ಇದರಿಂದ ಗಾಯದಿಂದಾಗಿ ಆ ಭಾಗ ಕೊಂಚ ಊದಿಕೊಂಡಂತಿದ್ದರೆ ಇದರಿಂದ ಶಮನವಾಗುತ್ತದೆ.

ಮೇಕಪ್ ಪರಿಹಾರ!
ಗಾಯವಾದ ಜಾಗಕ್ಕೆ ಹೊರಗಿನವರಿಗೆ ಗೊತ್ತಾಗದಂತೆ ಮೇಕಪ್ ಮಾಡಿಕೊಳ್ಳಿ. ಗಾಯ ನೀಲಿಗಟ್ಟಿದಂತೆ ಇದ್ದರೆ, ಆ ಜಾಗದ ಸ್ಕಿನ್ ಟೋನ್ ಗೆ ತಕ್ಕಂತೆ ಮೇಕಪ್ ಮಾಡಿಕೊಳ್ಳಿ.

ಬ್ರಷ್ ಮಾಡಿ
ಗಾಯ ನೀಲಿಗಟ್ಟಿದ್ದರೆ ಆ ಜಾಗದಲ್ಲಿ ಉಪಯೋಗಿಸದ ಹೊಸ ಬ್ರಷ್ ಬಳಸಿ ಕೊಂಚ ಮೃದುವಾಗಿ ಬ್ರಷ್ ಮಾಡಿ. ಇದರಿಂದ ರಕ್ತ ಹೆಪ್ಪುಗಟ್ಟಿದಂತಹ ಗಾಯವಾಗಿದ್ದರೆ ರಕ್ತ ಸಂಚಾರವಾಗಿ ಗಾಯ ಮಾಸುತ್ತದೆ.

ಟೂತ್ ಪೇಸ್ಟ್ ಬಳಸಿ
ಟೂತ್ ಪೇಸ್ಟ್ ಬಳಸಿ ಗಾಯವಾದ ಜಾಗದಲ್ಲಿ ಮಸಾಜ್ ಮಾಡಿ. ಸ್ವಲ್ಪ ಹೊತ್ತು ಹಾಗೇ ಬಿಟ್ಟು, ನಂತರ ಒಣ ಬಟ್ಟೆಯಿಂದ ಒರೆಸಿ.

Comments are closed.