ಆರೋಗ್ಯ

ಬೆವರಿನ ವಾಸನೆಯನ್ನು ತೊಲಗಿಸಲು ಈ ವಿಧಾನ ಅನುಸರಿಸಿ…

Pinterest LinkedIn Tumblr

ಬೆಂಗಳೂರು: ಬೆವರಿನಿಂದ ದೇಹದಲ್ಲಿ ಕೆಟ್ಟ ವಾಸನೆ ಬರುವುದು ಸಹಜ. ಕೆಲವರ ಬೆವರಿನ ವಾಸನೆ ಅಕ್ಕ ಪಕ್ಕ ಇರುವವರು ಮೂಗು ಮುಚ್ಚಿಕೊಳ್ಳುವಂತೆ ಮಾಡುತ್ತದೆ. ಅದಕ್ಕಾಗಿ ಕೆಲವರು ಅನೇಕ ರೀತಿಯ ಸುಗಂಧ ದ್ರವ್ಯಗಳನ್ನು ಬಳಸುತ್ತಾರೆ. ಇದರಿಂದ ಅಲರ್ಜಿಯಾಗುವ ಸಂಭವವಿರುತ್ತದೆ. ಹಾಗಾಗಿ ಸುಗಂಧ ದ್ರವ್ಯಗಳನ್ನು ಬಳಸದೆ ಬೆವರಿನ ವಾಸನೆಯನ್ನು ಹೋಗಲಾಡಿಸಲು ಈ ವಿಧಾನ ಅನುಸರಿಸಿ.

ಶ್ರೀಗಂಧವನ್ನು ತೇದಿ ಅಥವಾ ಅದರ ಪುಡಿಯಿಂದ ಪೇಸ್ಟ ಮಾಡಿಕೊಂಡು ಕಂಕುಳ ಭಾಗಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಸ್ನಾನ ಮಾಡಿ. ಅಥವಾ ನಿಂಬೆರಸವನ್ನು ಹತ್ತಿಯ ಸಹಾಯದಿಂದ ಕಂಕುಳ ಭಾಗಕ್ಕೆ ಹಚ್ಚಿ ಒಣಗಿದ ಮೇಲೆ ಸ್ನಾನ ಮಾಡಿ. ಇದರಿಂದ ಬೆವರಿನ ವಾಸನೆ ಬರುವುದಿಲ್ಲ.

1 ಚಮಚ ಮಸೂರ್ ದಾಲ್ ಪುಡಿಗೆ 6 ಚಮಚ ನಿಂಬೆರಸ ಬೇರೆಸಿ ಪೇಸ್ಟ್ ಮಾಡಿ ಕಂಕುಳ ಭಾಗಕ್ಕೆ ಹಚ್ಚಿ 10 ನಿಮಿಷ ಬಿಟ್ಟು ಸ್ನಾನ ಮಾಡಿ. ಇದು ಬೆವರಿನಿಂದ ಬರುವ ವಾಸನೆಯನ್ನು ತಡೆಯುತ್ತದೆ. ಸ್ನಾನ ಮಾಡುವ ನೀರಿಗೆ ಒಂದು ಚಮಚ ಕರ್ಪೂರ ಎಣ್ಣೆ ಮಿಕ್ಸ್ ಮಾಡಿ ಸ್ನಾನ ಮಾಡುವುದರಿಂದ ಬೆವರಿನ ದುರ್ವಾಸನೆ ಹಾಗು ಬ್ಯಾಕ್ಟಿರಿಯಾಗಳಿಂದ ಮುಕ್ತಿ ಸಿಗುತ್ತದೆ. ನೀರಿಗೆ ಪುದೀನಾ ಅಥವಾ ತುಳಸಿ ರಸ ಹಾಕಿ ಸ್ನಾನ ಮಾಡುವುದರಿಂದ ದೇಹದ ದುರ್ಗಂಧ ತೊಲಗುತ್ತದೆ. ಕಹಿ ಬೇವಿನ ಎಲೆ ಪೇಸ್ಟ್ ಮಾಡಿ ಕಂಕುಳಿಗೆ ಹಚ್ಚಿ ಸ್ನಾನ ಮಾಡಿದರೂ ಕೂಡ ಬೆವರಿನ ವಾಸನೆ ಹೋಗುತ್ತದೆ. 2 ಚಮಚ ಬೇಕಿಂಗ್ ಸೋಡಕ್ಕೆ 2 ಚಮಚ ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ ಕಂಕುಳಿಗೆ ಹಚ್ಚಿ 5 ನಿಮಿಷ ಬಿಟ್ಟು ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಬೆವರಿನ ವಾಸನೆಯಿಂದ ಮುಕ್ತಿ ಸಿಗುತ್ತದೆ.

Comments are closed.