
ಬೆಂಗಳೂರು: ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಮನೆಯಲ್ಲೇ ಮದ್ದು ಮಾಡಬಹುದು. ಅದಕ್ಕೆಈ ಕೆಲವು ಜ್ಯೂಸ್ ಗಳನ್ನು ಸೇವಿಸಿದರೆ ಸಾಕು.
ಮೂಸಂಬಿ ಜ್ಯೂಸ್
ಮೂಸಂಬಿ ಜ್ಯೂಸ್ ಕುಡಿಯುವುದರಿಂದ ಕರುಳಿನಲ್ಲಿರುವ ವಿಷಕಾರಿ ಅಂಶ ನಾಶವಾಗುತ್ತದೆ. ಮೂಸಂಬಿ ಜ್ಯೂಸ್ ಗೆ ಒಂದು ಚಿಟಿಕಿ ಉಪ್ಪು ಸೇರಿಸಿ ಕುಡಿದರೆ ಉತ್ತಮ.
ಪೈನಾಪಲ್ ಜ್ಯೂಸ್
ಪೈನಾಪಲ್ ದೇಹಕ್ಕೆ ಸಾಕಷ್ಟು ನೀರಿನಂಶ ಒದಗಿಸುತ್ತದೆ. ಇದರಿಂದಾಗಿ ಮಲ ವಿಸರ್ಜನೆ ಸುಗಮವಾಗುತ್ತದೆ.
ಕಲ್ಲಂಗಡಿ ಹಣ್ಣು
ಕಲ್ಲಂಗಡಿ ಹಣ್ಣಿನ ಜ್ಯೂಸ್ ದೇಹವನ್ನು ಹೈಡ್ರೇಟ್ ಮಾಡುವುದರ ಜತೆಗೆ ಜೀರ್ಣ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಹೀಗಾಗಿ ಕರುಳು ಸಂಬಂಧಿ ಸಮಸ್ಯೆಗಳಿಗೆ ಕಲ್ಲಂಗಡಿ ಹಣ್ಣು ಉತ್ತಮ.
ನಿಂಬೆ ಪಾನಕ
ನಿಂಬೆ ಪಾನಕ ಎಷ್ಟೆಲ್ಲಾ ರೋಗಕ್ಕೆ ಮದ್ದಲ್ಲ ಹೇಳಿ? ಇದರಲ್ಲಿರುವ ವಿಟಮಿನ್ ಸಿ ಅಂಶ ಅಜೀರ್ಣ ಹೋಗಲಾಡಿಸುತ್ತದೆ. ಮಲ ವಿಸರ್ಜಿಸಲು ಕಷ್ಟವಾಗುವುದಕ್ಕೆ ಪ್ರತಿ ನಿತ್ಯ ಎರಡು ಲೋಟ ನಿಂಬೆ ಪಾನಕ ಸೇವಿಸಿದರೆ ಸಾಕು.
Comments are closed.