
ಬೆಂಗಳೂರು: ತೂಕ ಕಳೆದುಕೊಳ್ಳಲು ಬಯಸುವವರು ಪ್ರತಿನಿತ್ಯ ಖಾಲಿಹೊಟ್ಟೆಯಲ್ಲಿ ನಿಂಬೆ ರಸ ಮತ್ತು ಜೇನು ತುಪ್ಪ ಸೇರಿಸಿಕೊಂಡು ಹದ ಬಿಸಿ ನೀರು ಸೇವಿಸಬೇಕು ಎನ್ನಲಾಗುತ್ತದೆ. ನಿಂಬೆ ರಸದ ಪಾನೀಯ ಸೇವಿಸುವುದರಿಂದ ಎಷ್ಟೆಲ್ಲಾ ಉಪಯೋಗವಿದೆ ಗೊತ್ತಾ?
ಕ್ಯಾಲೊರಿ ಕಡಿಮೆ
ನಿಂಬೆ ರಸ ಸೇರಿಸಿದ ಪಾನೀಯದಲ್ಲಿ ಕ್ಯಾಲೋರಿ ಕಡಿಮೆಯಿರುತ್ತದೆ. ಹೀಗಾಗಿ ತೂಕ ಕಳೆದುಕೊಳ್ಳುವವರಿಗೆ ಇದು ಉತ್ತಮ ಪಾನೀಯ.
ಮೆಟಾಬೋಲಿಸಂ ಹೆಚ್ಚಿಸುತ್ತದೆ
ನಿಂಬೆ ಪಾನೀಯ ಸೇವಿಸುವುದರಿಂದ ದೇಹದಲ್ಲಿ ಮೆಟಾಬೋಲಿಸಂ ಅಂಶ ಹೆಚ್ಚುತ್ತದೆ. ಪರಿಣಾಮ ತೂಕ ಕಡಿಮೆಯಾಗುತ್ತದೆ. ಇದೇ ಕಾರಣಕ್ಕೆ ನಿಂಬೆ ಪಾನೀಯ ಹೆಚ್ಚು ಸೇವಿಸಲು ಹೇಳುತ್ತಾರೆ.
ನಿರ್ಜಲೀಕರಣವಾಗಲ್ಲ
ನಿಂಬೆ ಪಾನೀಯ ಸೇವಿಸುತ್ತಿದ್ದರೆ, ದೇಹದಲ್ಲಿ ನಿರ್ಜಲೀಕರಣವಾಗದು. ದೇಹದಲ್ಲಿ ಸಾಕಷ್ಟು ನೀರಿನಂಶವಿದ್ದರೆ ಅನುಪಯುಕ್ತ ಅಂಶಗಳು ಹೊರ ಹಾಕಲು ಅನುಕೂಲ. ಹಾಗಾಗಿಯೇ ತೂಕ ಕಳೆದುಕೊಳ್ಳಲು ಬಯಸುವವರಿಗೆ ನಿಂಬೆ ಪಾನೀಯ ಉತ್ತಮ.
Comments are closed.