ಆರೋಗ್ಯ

ಹಸಿ ಹಾಲು v/s ಬಿಸಿ ಹಾಲು ಯಾವುದು ಆರೋಗ್ಯಕ್ಕೆ ಉತ್ತಮ

Pinterest LinkedIn Tumblr

ಹಾಲು..ಇದನ್ನು ಪರಿಪೂರ್ಣ ಆಹಾರ ಎಂದು ಕರೆಯುತ್ತಾರೆ. ಯಾಕೆಂದರೆ ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು ಹಾಲಿನಲ್ಲಿವೆ. ಹಾಲನ್ನು ಕುಡಿದರೆ ಪೋಷಣೆ ಸೂಕ್ತವಾಗಿ ಆಗುತ್ತದೆ. ಮುಖ್ಯವಾಗಿ ಬೆಳೆಯುವ ಮಕ್ಕಳಿಗೆ ತುಂಬಾ ಒಳ್ಳೆಯದು. ಮೂಳೆಗಳು ದೃಢವಾಗುತ್ತವೆ. ದಷ್ಟಪುಷ್ಟವಾಗಿ ಬೆಳೆಯುತ್ತಾರೆ. ಆದರೆ ಹಾಲನ್ನು ಯಾರೇ ಆಗಲಿ ಬಿಸಿ ಮಾಡಿ ಅದರಲ್ಲಿ ಸಕ್ಕರೆ ಅಥವಾ ಇನ್ಯಾವುದೋ ಪುಡಿ ಬೆರೆಸಿಕೊಂಡು ಕುಡಿಯುತ್ತಾರೆ. ಆದರೆ ಕೆಲವರು ಹಸಿ ಹಾಲನ್ನು ಹಾಗೆಯೇ ಕುಡಿಯುತ್ತಾರೆ. ಬಿಸಿ ಮಾಡದೆಯೇ ಹಾಲನ್ನು ಕುಡಿಯುತ್ತಾರೆ. ಇಷ್ಟಕ್ಕೂ ಹಾಲನ್ನು ಬಿಸಿ ಮಾಡಿ ಕುಡಿಯಬೇಕೆ..? ಅಥವಾ ಹಸಿ ಹಾಲು ಉತ್ತಮವೇ..? ಈ ಎರಡಲ್ಲಿ ಯಾವುದು ಕರೆಕ್ಟ್..? ಯಾವ ರೀತಿ ಕುಡಿದರೆ ನಮಗೆ ಉತ್ತಮ..? ಆರೋಗ್ಯವಾಗಿರುತ್ತೇವೆ…? ಎಂಬ ವಿಷಯಗಳನ್ನು ಈಗ ಚರ್ಚಿಸೋಣ.

ಈ ನಡುವೆ ಹಸಿ ಹಾಲಿನ ಬಗೆಗಿನ ಸುದ್ದಿಗಳು ವೈರಲ್ ಆಗುತ್ತಿವೆ. ಬಿಸಿ ಹಾಲಿಗಿಂತಲೂ ಹಸಿ ಹಾಲು ಕುಡಿದರೆ ಹೆಚ್ಚು ಲಾಭ ಎಂಬ ಸುದ್ದಿಗಳು ಬರುತ್ತಿವೆ. ಇದಕ್ಕೆ ಹಲವು ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ಪ್ರಚಾರ ಮಾಡಿದ ಮೇಲೆ ಬಹಳಷ್ಟು ಮಂದಿ ಹಸಿ ಹಾಲನ್ನು ಕುಡಿಯಲು ಶುರು ಮಾಡಿದ್ದಾರೆ. ಆದರೆ ನಿಜವಾಗಿ ಹಸಿ ಹಾಲು ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ. ಹಸಿ ಹಾಲಿನಲ್ಲಿ ಹಲವು ಬ್ಯಾಕ್ಟೀರಿಯಾಗಳು ಇರುತ್ತವೆ. ಇ.ಕೋಲಿ, ಸಾಲ್ಮೋನೆಲ್ಲಾ ಜತೆಗೆ ಸಾಕಷ್ಟು ಬ್ಯಾಕ್ಟೀರಿಯಾಗಳು, ಪರೋಪಕಾರಿ ಜೀವಿಗಳು ಹಸಿ ಹಾಲಿನಲ್ಲಿ ಇರುತ್ತವೆ ಎನ್ನುತ್ತಿದ್ದಾರೆ ವೈದ್ಯರು.

ಅಮೆರಿಕದಲ್ಲಾದರೆ 2007 ರಿಂದ 2012ನೇ ವರ್ಷದವರೆಗೆ ಹಾಲು ಕುಡಿಯುವುದರ ಬಗ್ಗೆ ಪುಕಾರುಗಳು ಹರಿದಾಡುತ್ತಿದ್ದವು. ಆದರೆ ಅವನ್ನು ನಂಬಿ ಹಾಲನ್ನು ಹಸಿಯಾಗಿಯೇ ಕುಡಿದರು ಕೆಲವರು. ಇದರಿಂದ ಅವರೆಲ್ಲಾ ಆಸ್ಪತ್ರೆ ಪಾಲಾಗಿದ್ದರು. ಈಗ ಮತ್ತೊಮ್ಮೆ ಹಸಿ ಹಾಲಿನ ಬಗ್ಗೆ ಸುದ್ದಿಗಳು ಸದ್ದು ಮಾಡುತ್ತಿವೆ. ಇದರಿಂದ ಸೆಂಟರ್ ಫರ್ ಡಿಸೀಸ್ ಕಂಟ್ರೋಲ್ ಅಂಡ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಅಧಿಕಾರಿಗಳು ಈ ವಿಷಯದ ಬಗ್ಗೆ ಸ್ಪಂದಿಸಿದ್ದಾರೆ. ಹಸಿ ಹಾಲು ಕುಡಿಯುವುದು ಅಪಾಯಕಾರಿ ಎಂದು ಅವರು ಎಚ್ಚರಿಸುತ್ತಿದ್ದಾರೆ.

ಹಾಲನ್ನು ಪಾಶ್ಚರೀಕರಿಸುವುದರಿಂದ ಅದರಲ್ಲಿನ ವಿಟಮಿನ್‌ಗಳು ಹಾಳಾಗುತ್ತವೆ ಎಂಬ ಪ್ರಚಾರ ಸೂಕ್ತವಲ್ಲ. ರೈತರು ಯಥೇಚ್ಛವಾಗಿ ಕ್ರಿಮಿನಾಶಕಗಳನ್ನು ಬಳಸುತ್ತಿದ್ದಾರೆಂದು, ಹಸುಗಳು ಹುಲ್ಲು ತಿನ್ನುವುದು, ಇತರೆ ಮಾರ್ಗಗಳ ಮೂಲಕ ಎಚ್‌ಸಿಎಚ್, ಡಿಡಿಟಿ ಇನ್ನಿತರೆ ಪೆಸ್ಟಿಸೈಡ್ಸ್ (ಕ್ರಿಮಿನಾಶಕ) ಹಸುಗಳಲ್ಲಿ ಸೇರುತ್ತಿದೆ ಎಂದಿದ್ದಾರೆ. ಇದರಿಂದ ಹಸುಗಳು ಕೊಡುವ ಹಾಲಿನಲ್ಲೂ ಅವು ಇರುತ್ತವೆ.

ತಾಜಾ ಒಂದು ಲೀಟರ್ ಹಾಲು, ಹಾಲಿನ ಪದಾರ್ಥಗಳಲ್ಲಿ 4 ಮಿಲಿ ಗ್ರಾಮ್‌ಗಳಷ್ಟು ಎಚ್‌ಸಿಎಚ್ ಪತ್ತೆಯಾಯಿತು ಎಂದಿದ್ದಾರೆ. ಆದಕಾರಣ ಹಸಿ ಹಾಲು ಕುಡಿಯುವುದು ಹಾನಿಕರ. ಅಪಾಯಕಾರಿ ಬ್ಯಾಕ್ಟೀರಿಯಾಗಳ ಜತೆಗೆ ಕ್ರಿಮಿನಾಶಕಗಳ ಅಂಶ ಸಹ ದೇಹಕ್ಕೆ ಹೊಕ್ಕಿ ತೀವ್ರ ಅನಾರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂದು ಎಚ್ಚರಿಸಿದ್ದಾರೆ. ಹಾಲನ್ನು ಬಿಸಿ ಮಾಡಿಕೊಂಡು ಮಾತ್ರ ಕುಡಿಯಬೇಕೆಂದು, ಹಸಿಯಾಗಿದ್ದಾಗ ಯಾವುದೇ ಕಾರಣಕ್ಕೂ ಕುಡಿಯಬಾರದೆಂದು ಅವರು ಹೇಳುತ್ತಿದ್ದಾರೆ.

ಹಾಲನ್ನು ಕನಿಷ್ಟ ಹತ್ತು ನಿಮಿಷಗಳ ಕಾಲ ಬಿಸಿ ಮಾಡಿದರೆ ಅದರಲ್ಲಿ ಇರುವ ರಾಸಾಯನಿಕಗಳ ಪ್ರಭಾವ ಕಡಿಮೆಯಾಗುತ್ತದಂತೆ. ಅದೇ ರೀತಿ ಬ್ಯಾಕ್ಟೀರಿಯಾಗಳು ಸಹ ಬಹಳಷ್ಟು ಮಟ್ಟಿಗೆ ನಶಿಸುತ್ತವೆ. ಇದರಿಂದ ಕುದಿಸಿದ ಹಾಲನ್ನು ಸೇಫ್ ಆಗಿ ಕುಡಿಯಬಹುದೆಂದು ವೈದ್ಯರು ಹೇಳುತ್ತಿದ್ದಾರೆ. ಆದರೆ ಹಾಲನ್ನು ಕುದಿಸುವುದರಿಂದ ಅದರಲ್ಲಿನ ಪೋಷಕಾಂಶಗಳು ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆಂದು, ಆದರೂ ಅನಾರೋಗ್ಯಕ್ಕೆ ತುತ್ತಾಗಬಾರದು ಎಂದರೆ ಹಾಲನ್ನು ಕಡ್ಡಾಯವಾಗಿ ಕುದಿಸಿ ಕುಡಿಯಬೇಕೆಂದು ವೈದ್ಯರು ಹೇಳುತ್ತಿದ್ದಾರೆ.

ಆದಕಾರಣ ಎಚ್ಚರ. ಹಸಿ ಹಾಲಿನಿಂದ ಆರೋಗ್ಯ ಹೆಚ್ಚುತ್ತದೆ ಎಂಬ ಸುದ್ದಿಯನ್ನು ನಂಬಬೇಡಿ. ಅದೇ ಸತ್ಯ ಎಂದು ಹಸಿ ಹಾಲು ಕುಡಿದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಆ ಬಳಿಕ ಚಿಂತಿಸಿ ಫಲವಿಲ್ಲ.

Comments are closed.