ಕರ್ನಾಟಕ

ಚಿತ್ರದುರ್ಗ ಮೇಟಿಕುರ್ಕೆ ಬಳಿ ಕಾರುಗಳು ಮುಖಾಮುಖಿ; 5 ಸಾವು, 3 ಗಂಭೀರ

Pinterest LinkedIn Tumblr

ಚಿತ್ರದುರ್ಗ: ಜಿಲ್ಲೆಯ ಮೇಟಿಕುರ್ಕೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಕ್ವಾಲಿಸ್‌ ಮತ್ತು ಎರ್ಟಿಗೋ ಕಾರುಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ 5 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಬೆಂಗಳೂರಿನಿಂದ ಚಿತ್ರದುರ್ಗ ಕಡೆ ತೆರಳುತ್ತಿದ್ದ ಕ್ವಾಲಿಸ್‌ ಕಾರಿನ ಟಯರ್‌ ಸ್ಫೋಟಗೊಂಡು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಎರ್ಟಿಗೋ ಕಾರಿಗೆ ಢಿಕ್ಕಿಯಾಗಿದೆ ಎಂದು ಹೇಳಲಾಗಿದೆ.

ಅಪಘಾತದ ತೀವ್ರತೆಗೆ ಎರ್ಟಿಗೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕ್ವಾಲಿಸ್‌ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಓರ್ವ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಇನ್ನು ನಾಲ್ವರು ಚಿಂತಾಜನಕ ಸ್ಥಿತಿಯಲ್ಲಿದ್ದು ಆಸ್ಪತ್ರೆಗೆ ದಾಖಲಿಸಿರುವ ಬಗ್ಗೆ ವರದಿಯಾಗಿದೆ.

ಹಿರಿಯೂರು ಗ್ರಾಮಾಂತಠಾಣೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾದ ಬಗ್ಗೆ ವರದಿಯಾಗಿದೆ. ಮೃತರ ಪೈ ಕಿ ಓರ್ವರು ಚಿತ್ರದುರ್ಗ ಎಪಿಎಂಸಿ ಸದಸ್ಯ ಅನ್ವರ್‌ ಎಂದು ಗುರುತಿಸಲಾಗಿದೆ.

Comments are closed.