ಆರೋಗ್ಯ

ಮಧುಮೇಹದಿಂದ ಪುರುಷರಲ್ಲಿ ಬಂಜೆತನ

Pinterest LinkedIn Tumblr

ನವದೆಹಲಿ: ಅಂತರರಾಷ್ಟ್ರೀಯ ಮಧುಮೇಹ ಒಕ್ಕೂಟ(ಐಡಿಎಫ್) ಇತ್ತೀಚಿನ ವರದಿಯಲ್ಲಿ ಭಾರತ ಮಧುಮೇಹಿಗಳ ರಾಜಧಾನಿ ಎಂದು ಘೋಷಿಸಿದೆ. ಭಾರತದ ಶೇಕಡಾ 9ರಷ್ಟು ಜನರು 2030ರ ವೇಳೆಗೆ ಮಧುಮೇಹಿಗಳಾಗಿರುತ್ತಾರೆ ಎಂದು ವರದಿ ಹೇಳಿದೆ.

ಮೇದೋಜೀರಕ ಗ್ರಂಥಿ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದಿಸದಿದ್ದಾಗ ಅಥವಾ ಇನ್ಸುಲಿನ್ ಉತ್ಪಾದನೆಗೆ ಸರಿಯಾಗಿ ದೇಹದಲ್ಲಿನ ಕೋಶಗಳು ಸರಿಯಾಗಿ ಪ್ರತಿಕ್ರಿಯಿಸದಿದ್ದಾಗ ಮಧುಮೇಹ ಕಾಯಿಲೆ ಉಂಟಾಗುತ್ತದೆ.

ಆರೋಗ್ಯಯುತ ಜೀವನಶೈಲಿ ಕಾಪಾಡಿಕೊಳ್ಳುವುದು ಕಷ್ಟವೇನಲ್ಲ, ಆರೋಗ್ಯಯುತ ಸತ್ವಯುತ ಆಹಾರ ಪದಾರ್ಥಗಳು, ದಿನನಿತ್ಯ ವ್ಯಾಯಾಮಗಳಿಂದ ರೋಗಗಳನ್ನು ತಡೆಗಟ್ಟಬಹುದು ಎನ್ನುತ್ತಾರೆ ದೆಹಲಿಯ ಐವಿಎಫ್ ಕ್ಲಿನಿಕ್ ನ ವೈದ್ಯೆ ಡಾ. ಪ್ರೀತಿ ಗುಪ್ತಾ ಹೇಳುತ್ತಾರೆ.

ರಕ್ತ ಗ್ಲುಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯ. ಸಂತಾನ ಆರಂಭಿಸಲು ಯೋಜನೆ ಹಾಕಿಕೊಳ್ಳುವಾಗ ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯ. ಸಕ್ಕರೆ ಕಾಯಿಲೆಯಿಂದ ಪುರುಷರಲ್ಲಿ ಬಂಜೆತನಕ್ಕೆ ಕಾರಣ ವಾಗಬಹುದು ಎಂದು ಇತ್ತೀಚಿನ ವರದಿ ಹೇಳುತ್ತದೆ. ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರಿ ಬಂಜೆತನಕ್ಕೆ ಕಾರಣವಾಗುವ ಮುನ್ನ ಗ್ಲುಕೋಸ್ ಮಟ್ಟವನ್ನು ಕಾಯ್ದುಕೊಳ್ಳುವುದು ಮುಖ್ಯ ಎಂದು ವೈದ್ಯರು ಹೇಳುತ್ತಾರೆ.

ಡಯಾಬಿಟಿಸ್ ಅಥವಾ ಸಕ್ಕರೆ ಕಾಯಿಲೆ ಮತ್ತು ಬಂಜೆತನದ ವಿಷಯ ಬಂದಾಗ ಪುರುಷರಲ್ಲಿ ಅಪಾಯದ ಪ್ರಮಾಣ ಹೆಚ್ಚು. ಸಕ್ಕರೆ ಕಾಯಿಲೆ ಮನುಷ್ಯನ ದೇಹದಲ್ಲಿ ಸಂತಾನೋತ್ಪತ್ತಿ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ದೇಹದಲ್ಲಿ ಗ್ಲುಕೋಸ್ ಮಟ್ಟ ಹೆಚ್ಚಾದಾಗ ಆಕ್ಸಿಡೇಟಿವ್ ಒತ್ತಡಕ್ಕೆ ಕಾರಣವಾಗಿ ವೀರ್ಯದ ಡಿಎನ್ಎಯನ್ನು ಹಾನಿ ಮಾಡುತ್ತದೆ.

ಡಿಎನ್ಎ ಹಾನಿಯುಂಟಾಗಿ ಛಿದ್ರಗೊಳ್ಳುತ್ತದೆ. ಇದರಿಂದ ಪುರುಷರ ದೇಹದಲ್ಲಿನ ಕೋಶಗಳು ಸಹಜವಾಗಿ ನಾಶವಾಗುವುದರಿಂದ ತಮ್ಮ ಪತ್ನಿಯರು ಗರ್ಭ ಧರಿಸಲು ಅನನುಕೂಲವಾಗುತ್ತದೆ. ಹೀಗಾಗಿ ರಕ್ತದ ಗ್ಲುಕೋಸ್ ಮಟ್ಟವನ್ನು ಪರೀಕ್ಷಿಸಬೇಕಾಗುತ್ತದೆ. ಇದಲ್ಲದೆ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಜಾಸ್ತಿಯಾದಾಗ ಪುರುಷರಲ್ಲಿ ಟೆಸ್ಟೊಸ್ಟಿರೊನ್ ಮಟ್ಟ ಕಡಿಮೆಯಾಗುವುದಲ್ಲದೆ ಡಯಾಬಿಟಿಸ್ ನಿಂದ ಲೈಂಗಿಕ ಆಸಕ್ತಿ ಕಡಿಮೆಯಾಗುವಂತೆ ಮಾಡುತ್ತದೆ.

Comments are closed.