ಆರೋಗ್ಯ

ಮಿದುಳನ್ನು ಆಕ್ಟೀವ್ ಆಗಿ ಇಡಬೇಕೇ…? ಈ ಕೆಲಸಗಳನ್ನ ಮಾಡಿ

Pinterest LinkedIn Tumblr

ಮಾನವನ ದೇಹದಲ್ಲಿ ಮಿದುಳು ತುಂಬಾ ಮುಖ್ಯವಾದ ಅಂಗ. ನಮ್ಮ ದೇಹದ ತೂಕದಲ್ಲಿ ಮಿದುಳು ಶೇಕಡಾ ಎರಡರಷ್ಟಾದರೂ ಇದರ ಕೆಲದ ಬಗ್ಗೆ ಹೇಳಬೇಕಿಲ್ಲ..! ಪ್ರತಿಯೊಬ್ಬ ವ್ಯಕ್ತಿಯ ಶಕ್ತಿ ಸಾಮರ್ಥ್ಯಗಳು, ಜ್ಞಾಪಕ ಶಕ್ತಿ, ಬುದ್ಧಿಶಕ್ತಿ ಮೇಲೆ ಅವಲಂಭಿಸಿವೆ. ಸೋ ಅಂತಹ ಮಿದುಳನ್ನು ಆಕ್ಟೀವ್ ಆಗಿ ಇಟ್ಟುಕೊಳ್ಳಬೇಕಾದರೆ ಈ 4 ಕೆಲಸಗಳನ್ನು ಮಾಡಬೇಕು..! ಅವು ಏನು ಎಂದು ಈಗ ನೋಡೋಣ..!

1) ಪುಸ್ತಕ ಓದುವುದು:
ನಾವು ಏನಾದರೂ ಓದಬೇಕಾದಾಗ ಅದನ್ನು ಶ್ರದ್ಧೆಯಿಂದ ಓದುವುದರಿಂದ ಮಿದುಳಿನ ಅಭಿಜ್ಞಾ ಸಾಮರ್ಥ್ಯಗಳು ಹೆಚ್ಚಾಗಿ ಮಿದುಳನ್ನು ಉತ್ತೇಜಿಸುತ್ತವೆ. ಅಷ್ಟೇ ಅಲ್ಲದೆ ರಕ್ತಸಂಚಲನೆ ಎಲ್ಲಾ ಭಾಗಗಳಲ್ಲಿ ಆಗಿ ಜ್ಞಾಪಕಶಕ್ತಿ ಹೆಚ್ಚುತ್ತದೆಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ತಜ್ಞರ ಸಂಶೋಧನೆಯಲ್ಲಿ ಗೊತ್ತಾಗಿದೆ. ಇದು ಕೇವಲ ಪಠಣದಿಂದ ಮಾತ್ರ ಸಾಧ್ಯವಾಗುತ್ತದಂತೆ, ಕ್ರೀಡೆಗಳಿಂದ, ಟಿವಿ ನೋಡುವುದರಿಂದ ಆಗುವುದಿಲ್ಲವಂತೆ.

2). ಡ್ರಾಯಿಂಗ್:
ಡ್ರಾಯಿಂಗ್ ನಿಂದ ಮಿದುಳಿನ ಕೆಲಸದ ಸಾಮರ್ಥ್ಯ ಹೆಚ್ಚುತ್ತದೆ. ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ 62-70 ವರ್ಷಗಳ ವಯೋವೃದ್ಧರಲ್ಲಿ ಪೇಯಿಂಟಿಂಗ್ ಮತ್ತು ಕಲೆ ವಿಭಾಗಗಳನ್ನು ವಿಭಾಗಿಸಿದರೆ ಪೆಯಿಂಟಿಂಗ್ ವರ್ಗದವರ ಮಿದುಳಿನ ಕೆಲಸ ಚುರುಕಾಗಿದೆ ಎಂದು ಗೊತ್ತಾಗಿದೆ.

3). ಸಕ್ಕರೆಯನ್ನು ಕಡಿಮೆ ಮಾಡಬೇಕು:
ನಾವು ತಿನ್ನುವ ಆಹಾರದಲ್ಲಿ ಫ್ರಕ್ಟೋಸ್ ನಮ್ಮ ಜ್ಞಾಪಕಶಕ್ತಿಗೆ, ಸಾಧನೆ ಶಕ್ತಿಯನ್ನು ಕುಂದಿಸುತ್ತದೆ. ಇದಕ್ಕೆ ಕಾರಣ ಸಕ್ಕರೆ ಮಿದುಳಿನಲ್ಲಿನ ನಾಡಿವ್ಯವಸ್ಥೆಯನ್ನು ಬಲಹೀನಗೊಳಿಸುತ್ತವೆ. ಅಷ್ಟೇ ಅಲ್ಲದೆ ಹೊರಗೆ ಸಿಗುವ ಶೀತಲಪಾನೀಯಗಳು, ಒಮೆಗಾ-3 ಫ್ಯಾಟಿ ಆಸಿಡ್‌ಗಳ ಆಹಾರ ಪದಾರ್ಥಗಳಿಗಿಂತಲೂ ಇವುಗಳ ಪ್ರಭಾವ ಹೆಚ್ಚಾಗಿರುತ್ತದೆ ಎಂದು ಗೊತ್ತಾಗಿದೆ.

4). ನಿರ್ಜಲೀಕರಣದಿಂದ ಆಗುವ ನಷ್ಟ:
ಮಿದುಳಿನ ನಿರ್ಮಾಣದಲ್ಲಿ ಶೇ.80ರಷ್ಟು ನೀರು ಇರುತ್ತದೆ, ಇದರಲ್ಲಿ ಎಷ್ಟೇ ನೀರಿನ ಪ್ರಮಾಣ ಕಡಿಮೆಯಾದರೂ ಮಿದುಳಿನ ಕೆಲಸದ ಸಾಮರ್ಥ್ಯ ಕುಗ್ಗುತ್ತದೆ.

Comments are closed.