ಆರೋಗ್ಯ

ದೇಹಕ್ಕೆ ಪಾಸಿಟೀವ್ ಎನರ್ಜಿ ಸಿಗಬೇಕಾದರೆ ಈ ಸೂಚನೆ ಪಾಲಿಸಿ

Pinterest LinkedIn Tumblr

ನಿತ್ಯ ಸ್ನಾನ ಮಾಡುವುದರಿಂದ ನಮಗೆ ಯಾವೆಲ್ಲಾ ಲಾಭಗಳು ಉಂಟಾಗುತ್ತವೆ ಎಂದು ಎಲ್ಲರಿಗೂ ಗೊತ್ತು. ದೇಹವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದಷ್ಟೇ ಅಲ್ಲ, ಮಾನಸಿಕ ಉಲ್ಲಾಸಕ್ಕೆ, ಉತ್ತೇಜನಕ್ಕೆ ಸಹ ಸ್ನಾನ ತುಂಬಾ ಉಪಯೋಗಕ್ಕೆ ಬರುತ್ತದೆ. ಆದರೆ ಈಗ ಹೇಳಲಿರುವ ಹಲವು ಸೂಚನೆಗಳು ಪಾಲಿಸಿದರೆ ಆರೋಗ್ಯ ಪರವಾಗಿ ಲಾಭಗಳಷ್ಟೇ ಅಲ್ಲದೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇಹಕ್ಕೆ ಪಾಸಿಟೀವ್ ಎನರ್ಜಿ ಸಿಗುತ್ತದೆ. ಇದರಿಂದ ಎಲ್ಲವೂ ಒಳಿತಾಗುತ್ತದೆ. ಆ ಸೂಚನೆಗಳು ಏನು ಎಂದು ಈಗ ನೋಡೋಣ.

1. ಸ್ನಾನ ಮಾಡುವ ಮೊದಲು ನೀರಿನಲ್ಲಿ ಕಪ್ಪು ಎಳ್ಳನ್ನು ಬೆರೆಸಬೇಕು. ಆ ಬಳಿಕ 5 ನಿಮಿಷಗಳ ಕಾಲ ಬಿಟ್ಟು ಆ ನೀರಿನಲ್ಲಿ ಸ್ನಾನ ಮಾಡಬೇಕು. ಇದರಿಂದ ದೇಹದಲ್ಲಿನ ನೆಗಟೀವ್ ಎನರ್ಜಿ ಹೋಗುತ್ತದೆ.
2. ತಲೆಗೆ ಸ್ನಾನ ಮಾಡುವಾಗ ಮೊದಲು ನೀರನ್ನು ತಲೆಮೇಲೆ ಹಾಕಿಕೊಳ್ಳಬೇಕು. ಆ ಬಳಿಕ ಉಳಿದ ಭಾಗಗಳ ಮೇಲೆ ನೀರು ಹಾಕಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ದೇಹದಲ್ಲಿನ ವಿಷ ಪದಾರ್ಥಗಳು ಹೋಗುವುದಷ್ಟೇ ಅಲ್ಲದೆ, ದೇಹದಲ್ಲಿನ ಬಿಸಿ ಕಡಿಮೆಯಾಗುತ್ತದೆ. ತಂಪಾಗುತ್ತದೆ.
3. ಇಂದಿನ ದಿನಗಳಲ್ಲಿ ಹಲವಾರು ಕಾರಣಗಳಿಂದ ಬಹಳಷ್ಟು ಮಂದಿ ಲೇಟಾಗಿ ನಿದ್ದೆ ಎದ್ದು ಯಾವಾಗಲೋ ಮಧ್ಯಾಹ್ನದವರೆಗೂ ಸ್ನಾನ ಮಾಡುತ್ತಿರುತ್ತಾರೆ. ಕೆಲವರಾದರೆ ಬೆಳಗ್ಗೆ ಅಲ್ಲದೆ ರಾತ್ರಿ ಹೊತ್ತು ಸ್ನಾನ ಮಾಡುತ್ತಾರೆ. ಆದರೆ ಆ ರೀತಿ ಮಾಡಬಾರದು. ಬೆಳಗಿನ ಜಾವ ಎಂದರೆ ಸೂರ್ಯನು ಉದಯಿಸುವುದಕ್ಕೂ ಮುನ್ನ ತಲೆಸ್ನಾನ ಮಾಡಿದರೆ ತುಂಬಾ ಒಳ್ಳೆಯದು. ಎಲ್ಲವೂ ಶುಭವಾಗುತ್ತದೆ.
4. ಸ್ನಾನ ಮಾಡುವಾಗ ಬಾತ್ ರೂಂನಲ್ಲಿ ಹಾಡುಗಳಲ್ಲದೆ ಓಂ ಹ್ರೀಂ ಶ್ರೀಂ ಎಂಬ ಮಂತ್ರ ಜಪಿಸುತ್ತಾ ಇದ್ದರೆ ಇನ್ನೂ ಒಳ್ಳೆಯದು. ಅಂದುಕೊಂಡ ಕೆಲಸಗಳು ನೆರವೇರುತ್ತವೆ.
5. ಸ್ನಾನ ಮಾಡುವಾಗ ಅರ್ಧಗಂಟೆಗೂ ಮುನ್ನ ಫುಲ್ ಬಾಡಿ ಮಸಾಜ್ ಮಾಡಿಕೊಳ್ಳಬೇಕು. ಇದರಿಂದ ದೇಹದಲ್ಲಿ ಇರುವ ಎಲ್ಲಾ ಅವಯವಗಳಿಗೆ ರಕ್ತ ಸಂಚಲನೆ ಚೆನ್ನಾಗಿ ಆಗುತ್ತದೆ. ಈ ರೀತಿ ಮಾಡುವುದರಿಂದ ಅನಾರೋಗ್ಯ ಸಮಸ್ಯೆಗಳು ಏನಾದರೂ ಇದ್ದರೆ ದೂರವಾಗುತ್ತವೆ.
6. ಸ್ನಾನ ಮಾಡುವುದಕ್ಕೂ ಮೊದಲು ವ್ಯಾಕ್ಸಿಂಗ್, ಶೇವಿಂಗ್ ಮಾಡಬಾರದು. ಆ ರೀತಿ ಮಾಡಿದರೆ ಚರ್ಮ ಹಾಳಾಗುತ್ತದೆ. ರಂಧ್ರಗಳು ಉಂಟಾಗುತ್ತದೆ. ಚರ್ಮ ಡ್ರೈ ಆಗಿ ಬದಲಾಗುತ್ತದೆ.
7. ವ್ಯಾಯಾಮ ಮಾಡಿದ ಕೂಡಲೆ ಸ್ನಾನ ಮಾಡಬಾರದು. ಸ್ವಲ್ಪ ವಿರಾಮದ ಬಳಿಕ ಸ್ನಾನ ಮಾಡಬೇಕು. ಈ ರೀತಿ ಮಾಡುವುದರಿಂದ ನೆಗಡಿ, ಕೆಮ್ಮಿನಂತಹ ಶ್ವಾಸಕೋಶ ಸಮಸ್ಯೆಗಳು ಬರಲ್ಲ.
8. ಯಾವುದಾದರೂ ನದಿಯಲ್ಲಿ ಸ್ನಾನ ಮಾಡುವಾಗ ಅವುಗಳಲ್ಲಿ ಇಳಿಯುವ ಮುನ್ನ ಓಂ ಎಂದು ಹೇಳಬೇಕು. ಈ ರೀತಿ ಮಾಡುವುದು ತುಂಬಾ ಒಳ್ಳೆಯದು.
9. “ಗಂಗೇಚ ಯಮುನೇಚ ಗೋದಾವರಿ ಸರಸ್ವತಿ ನರ್ಮದೆ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿದಿಂ ಕುರು” ಎಂಬ ಮಂತ್ರವನ್ನು ಸ್ನಾನ ಮಾಡುವಾಗ ಜಪಿಸಬೇಕು. ಈ ರೀತಿ ಮಾಡುವುದರಿಂದ ಆಯಾ ನದಿಗಳ ರೂಪದಲ್ಲಿರುವ ದೇವತೆಗಳ ಆಶೀರ್ವಾದ ಲಭಿಸುತ್ತದೆ. ಅವು ನಮಗೆ ತುಂಬಾ ಒಳಿತು ಮಾಡುತ್ತವೆ.

Comments are closed.