ಆರೋಗ್ಯ

ಕಾಂತಿಯುತ ಹೊಳೆಯುವ ಸೌಂದರ್ಯಕ್ಕಾಗಿ ENO ಬಳಕೆ

Pinterest LinkedIn Tumblr

ಸುಂದರವಾಗಿ ಕಾಣಬೇಕೆಂದು ಯಾರು ತಾನೆ ಬಯಸಲ್ಲ ಹೇಳಿ. ಜಗತ್ತಿನಲ್ಲಿ ಬಹಳಷ್ಟು ಮಂದಿ ಸುಂದರವಾಗಿರಬೇಕೆಂದು ತಮಗೆ ತಾವು ಅಂದವಾಗಿ ಕಾಣಿಸಬೇಕೆಂದು ಬಯಸುತ್ತಾರೆ. ಸುಂದರವಾಗಿದ್ದರೆ ಸಾಕು ಎಂದು ಬಯಸುವವರು ಬಹಳಷ್ಟು ಮಂದಿ ಇದ್ದಾರೆ… ಆದರೆ ಈ ಗಜಿಬಿಜಿ ಜೀವನದಲ್ಲಿ ಮನೆಯಲ್ಲಿನ ಸಹಜ ಸಲಹೆಗಳನ್ನು ಪಾಲಿಸುವಷ್ಟೂ ಪುರುಸೊತ್ತಿಲ್ಲದವರು ಬಹಳಷ್ಟು ಮಂದಿ. ನಮ್ಮ ಸುತ್ತ ನಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪದ್ಧತಿಗಳು ಸಾಕಷ್ಟು ಇದ್ದರೂ ಸಾವಿರಾರು ರೂಪಾಯಿ ಸುರಿದು ಬ್ಯೂಟಿಪಾರ್ಲರ್‌ಗಳ ಸುತ್ತ ಸುತ್ತುತ್ತಾರೆ. ನಾವೀಗ ಹೇಳಲಿರುವ ಸಲಹೆ ಪಾಲಿಸಿದರೆ ಹಣ, ಸಮಯ ಉಳಿತಾಯ…ಕಾಂತಿಯುತವಾದ ಮುಖ ನಿಮ್ಮದಾಗುತ್ತದೆ. ಅದಕ್ಕಾಗಿ ನಿಮಗೆ ಬೇಕಾಗಿದ್ದು ಒಂದು ENO ಪ್ಯಾಕೆಟ್ ಜತೆಗೆ ಎರಡು ನಿಂಬೆಹಣ್ಣು.

ಈಗ ಹೇಗೆ ಬಳಸಬೇಕೆಂದು ತಿಳಿದುಕೊಳ್ಳೋಣ. ಮೊದಲು ನಿಂಬೆಹಣ್ಣು ಕಟ್ ಮಾಡಿ ಒಂದು ಬೌಲ್‍ನಲ್ಲಿ ENO ಪೌಡರ್ ಹಾಕಿ ಅದರಲ್ಲಿ ನಿಂಬೆರಸ ಹಿಂಡಿಕೊಳ್ಳಬೇಕು. ಆ ಮಿಶ್ರಣವನ್ನು ಚೆನ್ನಾಗಿ ಬೆರೆಸಿಕೊಂಡು ಸ್ವಲ್ಪ ಸ್ವಲ್ಪವಾಗಿ ತೆಗೆದುಕೊಂಡು ಚರ್ಮದ ಮೇಲೆ ಅಪ್ಲೈ ಮಾಡಬೇಕು. ಮುಖಕ್ಕೆ ಹಚ್ಚುವಾಗ ಕಣ್ಣಿಗೆ ಬೀಳದಂತೆ ಎಚ್ಚರವಹಿಸಿ. ಸ್ವಲ್ಪ ಸಮಯದ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಬೇಕು. ನಿಂಬೆಹಣ್ಣಿನಲ್ಲಿ ಸಿಟ್ರಸ್ ಆಸಿಡ್ ಇರುತ್ತದೆ. ಅದು ನಮ್ಮ ಚರ್ಮದಲ್ಲಿನ ಡೆಡ್ ಸೆಲ್ಸ್ ಹೊರಹಾಕುತ್ತದೆ.

ನಿಂಬೆಹಣ್ಣಿನ ರಸ ನಮ್ಮ ಚರ್ಮದ ಮೇಲಿನ ಬೆವರುಗ್ರಂಥಿಗಳ ಒಳಕ್ಕೆ ಹೋಗಿ ಚರ್ಮದಲ್ಲಿರುವ ಕೊಳೆಯನ್ನು ತೊಲಗಿಸುವಲ್ಲಿ ಉಪಯೋಗಕ್ಕೆ ಬರುತ್ತದೆ. ENO ದಲ್ಲಿ ಇರುವ ಪ್ರೋಟೀನ್ಸ್ ಚರ್ಮದ ಮೇಲಿನ ಜಿಡ್ಡನ್ನು ತೊಲಗಿಸಿ ಚರ್ಮಕ್ಕೆ ಕಾಂತಿಯುತವಾಗಿ ಹೊಳೆಯಲು ಉಪಯೋಗಕ್ಕೆ ಬರುತ್ತದೆ. ಇದರಿಂದ ಯಾವುದೇ ಸೈಡ್ ಎಫೆಕ್ಟ್ಸ್ ಇರಲ್ಲ…ಆದಕಾರಣ ಬೇಗ ರೆಡಿಯಾಗಬೇಕು ಎಂದುಕೊಂಡರೂ ಹೀಗೆ ಮಾಡಿ ನೋಡಿ.

Comments are closed.