ಆರೋಗ್ಯ

ತ್ವಚೆಯ ಅಲರ್ಜಿ ಸಮಸ್ಯೆಗೆ ಸೂಕ್ತ ಪರಿಹಾರ

Pinterest LinkedIn Tumblr

ತ್ವಚೆಗೆ ಹಲವು ಕಾರಣಗಳಿಂದ ಅಲರ್ಜಿ ಉಂಟಾಗಬಹುದು, ಅದರಲ್ಲೂ ಇತ್ತೀಚಿನ ಯುವ ಪೀಳಿಗೆಯಲ್ಲಿ ಇದು ಹೆಚ್ಚಾಗಿ ತಮ್ಮ ತ್ವಚೆಯಲ್ಲಿ ತೊಂದರೆಯನ್ನು ಅನುಭವಿಸುವರು. ತ್ವಚೆಯಲ್ಲಿ ೩ ವಿಧಗಳಿವೆ – ಸಾಮಾನ್ಯ, ಎಣ್ಣೆಯುಕ್ತ ಮತ್ತು ಒಣ ತ್ವಚೆ. ಮೂರರ ಅಂಶವುಳ್ಳ ತ್ವಚೆಯು ಕೂಡ ಇದೆ. ನಿಮ್ಮ ತ್ವಚೆಯ ವಿಧ ತಿಳಿದುಕೊಂಡು ಅದಕ್ಕೆ ಸೂಕ್ತವಾದ ಪರಿಹಾರ ಕಂಡುಕೊಳ್ಳುವುದು ಉತ್ತಮ, ಏಕೆಂದರೆ, ಕೆಲವು ಪರಿಹಾರಗಳು ಕೆಲವು ಬಗೆಯ ತ್ವಚೆಗೆ ಸರಿ ಹೊಂದದೆ ತ್ವಚೆಗೆ ಮತ್ತಷ್ಟು ಸಮಸ್ಯೆಯನ್ನು ಉಂಟುಮಾಡಬಹುದು.

ಚರ್ಮವು 3 ಪದರಗಳಿಂದ ಕೂಡಿದ್ದು, ಎಪಿಡರ್ಮಿಸ್(ಹೊರಚರ್ಮ), ಡರ್ಮಿಸ್(ಮದ್ಯದ ಚರ್ಮ) ಮತ್ತು ಹೈಪೋಡರ್ಮಿಸ್(ಒಳಚರ್ಮ). ಎಪಿಡರ್ಮಿಸ್ ಎಂಬುದು ರಕ್ಷಣಾತ್ಮಕ ಪದರವಾಗಿದ್ದು, ಪ್ರೊಟೀನ್ ಮತ್ತು ಲಿಪಿಡ್ ಅಂಶಗಳಿಂದ ಸಂಯೋಜನೆಯಾಗಿದೆ. ಲಿಪಿಡ್ ತ್ವಚೆಯನ್ನು ನೀರಿನಾಂಶದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ. ತ್ವಚೆಯು ಕೊಬ್ಬಿನಾಮ್ಲವನ್ನು ಕಳೆದುಕೊಂಡರೆ, ತ್ವಚೆಯ ರಕ್ಷಣೆ ಮತ್ತು ತೇವಾಂಶವನ್ನು ಕಳೆದುಕೊಳ್ಳುತ್ತದೆ. ಇದು ತ್ವಚೆಯನ್ನು ಸೂಕ್ಷ್ಮವಾಗಿಸಿ, ಒಣ ಚರ್ಮವನ್ನಾಗಿ ಮಾಡುವುದರ ಜೊತೆಗೆ ದದ್ದುಗಳನ್ನು ಅಥವಾ ತ್ವಚೆಯಲ್ಲಿ ಬಿರುಕುಗಳನ್ನು ಮಾಡುತ್ತದೆ.

1.ತೇವಾಂಶಗೊಳಿಸುವಿಕೆ
ತೇವಾಂಶಗೊಳಿಸುವುದು ಹೊರಗಿನ ಚಿಕಿತ್ಸೆಯಾಗಿದೆ. ತ್ವಚೆಯ ಸಮಸ್ಯೆ ಇರುವ ಜಾಗದಲ್ಲಿ ಇದರ ಬಳಕೆಯನ್ನು ಆಗಾಗ್ಗೆ ಮಾಡುವುದನ್ನು ಇದು ಒಳಗೊಂಡಿದೆ. ಇದನ್ನು ಮಾಡುವುದರಿಂದ ನಿಮ್ಮ ತ್ವಚೆಯು ನೀರನ್ನು ಹೀರಿಕೊಂಡು ತೇವಾಂಶದಿಂದ ಇರಲು ಸಹಾಯ ಮಾಡುತ್ತದೆ, ಜೊತೆಗೆ ಇದು ತ್ವಚೆಯ ಸಮಸ್ಯೆಗೆ ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುತ್ತದೆ.

2.ಔಷದಗಳು
ಒಂದು ವೇಳೆ, ನಿಮ್ಮ ತ್ವಚೆಯ ಸ್ಥಿತಿ ಕೆಟ್ಟದಾಗಿದ್ದರೆ, ಬೇರೆ ವಿಧಾನಗಳನ್ನು ಪ್ರಯತ್ನಿಸುವ ಬದಲು ತ್ವಚೆಯ ಸಮಸ್ಯೆಯನ್ನು ಪರೀಕ್ಷಿಸಿ ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ. ಅವರು ನಿಮ್ಮ ತ್ವಚೆಯ ಪರಿಸ್ಥಿತಿಯನ್ನು ಪರೀಕ್ಷಿಸಿ ಅದರ ಗುಣಕ್ಕೆ ಬೇಕಾಗಿರುವ ಉತ್ತಮ ಡೋಸೇಜ್ ಪ್ರಕಾರ ಔಷಧಿಗಳನ್ನು ನೀಡುವರು. ತ್ವಚೆಯ ಸ್ಥಿತಿ ತೀರಾ ಹದಗೆಟ್ಟಿದ್ದರೆ, ಸ್ಟೀರಾಯ್ಡ್ ಅನ್ನು ನೀಡುವರು.

3.ಜೀವನ ಶೈಲಿಯನ್ನು ಬದಲಿಸಿಕೊಳ್ಳಿ
ತ್ವಚೆಯ ಸಮಸ್ಯೆಗಳಿಗೆ ನಿಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳುವುದು ಉತ್ತಮ ಮಾರ್ಗವಾಗಿದೆ. ಹಲವು ತ್ವಚೆಯ ಸಮಸ್ಯೆಗಳು ನೇರವಾಗಿ ನಿಮ್ಮ ಪ್ರತಿದಿನದ ಜೀವನ ಶೈಲಿಗೆ ಸಂಪರ್ಕ ಹೊಂದಿವೆ. ಅಸಮತೋಲನ, ಅನಾರೋಗ್ಯಕರ, ಒತ್ತಡದ ಜೀವನಶೈಲಿ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡಿರುವ ವ್ಯಕ್ತಿಯು ಇಂತಹ ಸಮಸ್ಯೆಗಳಿಂದ ದೂರವಿರಬಹುದು.

4.ನೀರು
ನೀರು ನಮ್ಮ ದೇಹಕ್ಕೆ ತುಂಬಾ ಅವಶ್ಯವಾಗಿದ್ದು, ಹೆಚ್ಚು ನೀರನ್ನು ಕುಡಿಯುವುದರಿಂದ ತ್ವಚೆಯ ಸಮಸ್ಯೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ, ತ್ವಚೆಯ ಹೊಳಪನ್ನು ಹೆಚ್ಚಿಸಿಕೊಳ್ಳಬಹುದು. ಹೆಚ್ಚು ಬಿಸಿಲಿಗೆ ನಿಮ್ಮ ತ್ವಚೆಯನ್ನು ತೆರೆಯಬೇಡಿ. ಲೋಗಸರ ಮುಂತಾದ ನೈಸರ್ಗಿಕ ತ್ವಚೆ ವಸ್ತುಗಳನ್ನು ಬಳಸಿ

Comments are closed.