ಆರೋಗ್ಯ

ಗರ್ಭೀಣಿ ಮಹಿಳೆಯರು ಕೇಸರಿ ಸೇವಿಸಿದರೆ ಹಲವು ಸಮಸ್ಯೆಗಳು ನಿವಾರಣೆ , ಗೊತ್ತೇ..?

Pinterest LinkedIn Tumblr

ಮಂಗಳೂರು: ಮಹಿಳೆಯು ಗರ್ಭಾವಸ್ಥೆಯ ಸಂದರ್ಭದಲ್ಲಿ ಕೇಸರಿ ಸೇವನೆ ಮಾಡಬೇಕು ಇದರಿಂದ ಹುಟ್ಟುವ ಮಕ್ಕಳು ಬೆಳ್ಳಗೆಯಾಗುತ್ತಾರೆ ಎಂಬುದು ಹಿಂದಿನ ಕಾಲದಿಂದಲೂ ಬಂದತಹ ಒಂದು ಕಟ್ಟುಪಾಡು ಅದರೆ ಇದರ ನಿಜವಾದ ಸತ್ಯ ಅಸತ್ಯತೆ ಯಾರಿಗೂ ತಿಳಿದಿರುವುದಿಲ್ಲ.ಯಾಕೆಂದರೆ ಇದರ ಕುರಿತು ಈವರೆಗೆ ಯಾರೂ ಅಧ್ಯಯನ ನಡೆಸಿಲ್ಲ.

ಪ್ರಪಂಚದಲ್ಲಿ ಅತ್ಯಂತ ದುಬಾರಿ ವಸ್ತು ಎಂದರೆ ಅದು ಕೇಸರಿ. ಅದರೆ ಕೇಸರಿಯಲ್ಲಿರುವ ಹಲವಾರು ಔಷಧೀಯ ಗುಣಗಳಿರುವುದರಿಂದ ಗರ್ಭೀಣಿ ಮಹಿಳೆಯರು ಸೇವಿಸಿದರೆ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಬಹುದು. ಕೇಸರಿ ಸೇವನೆ ಮಾಡುವುದರಿಂದ ಮಕ್ಕಳ ಬಣ್ಣ ಬಿಳಿ ಆಗಬಹುದು ಅಥವಾ ಆಗದೆಯೂ ಇರಬಹುದು ಆದರೆ ಗರ್ಭಾವತಿ ಮಹಿಳೆಯರು ಇದನ್ನು ಸೇವನೆ ಮಾಡುವುದರಿಂದ ಲಾಭಗಳು ಹಲವಾರಿದೆ ಎಂದು ವೈದರೇ ತಿಳಿಸುತ್ತಾರೆ.

ಕೇಸರಿ ಸೇವನೆಯ ಉಪಯೋಗ :
ಕಣ್ಣು : ಗರ್ಭಾವತಿ ಮಹಿಳೆಯರಿಗೆ ಹೆಚ್ಚಾಗಿ ಕಣ್ಣಿನಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ಅವರು ಕೇಸರಿ ಹಾಕಿದ ಹಾಲನ್ನು ಸೇವನೆ ಮಾಡಿದರೆ ಕಣ್ಣುಗಳಿಗೆ ಆರಾಮ ಸಿಗುತ್ತದೆ.

ಜೀರ್ಣಕ್ರಿಯೆ : ಗರ್ಭಾವಸ್ಥೆಯ ಸಂದರ್ಭದಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಕಾಣಿಸುತ್ತದೆ. ಯಾಕೆಂದರೆ ಈ ಸಮಯದಲ್ಲಿ ರಕ್ತ ಸಂಚಾರದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಕೇಸರಿ ಹಾಲು ಸೇವನೆ ಮಾಡುವುದು ಲಾಭದಾಯಕವಾಗಿದೆ.

ಕಿಡ್ನಿ ಮತ್ತು ಲಿವರ್‌ : ಕೇಸರಿ ಒಂದು ಪ್ರಕಾರದ ರಕ್ತ ಶುದ್ಧಗೊಳಿಸುವ ಆಹಾರವಾಗಿದೆ. ಇದರಿಂದ ಕಿಡ್ನಿ ಮತ್ತು ಲಿವರ್‌ ಸಮಸ್ಯೆಗಳು ದೂರವಾಗುತ್ತವೆ.

ಹೊಟ್ಟೆ ನೋವು : ಗರ್ಭಾವಸ್ಥೆಯ ಸಮಯದಲ್ಲಿ ಹೊಟ್ಟೆಯಲ್ಲಿ ಕೆಲವೊಮ್ಮೆ ಅಸಹಜವಾದ ನೋವು ಕಾಣಿಸಿಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಕೇಸರಿ ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ.

ಗರ್ಭದಲ್ಲಿರುವ ಮಗುವಿಗೆ : ಗರ್ಭಾವತಿ ಮಹಿಳೆಯರಲ್ಲಿ ಐದನೇ ತಿಂಗಳಿನಿಂದ ಹೊಟ್ಟೆಯಲ್ಲಿ ಮಗು ತಿರುಗಾಡಲು ಆರಂಭಿಸುತ್ತದೆ. ಕೇಸರಿ ಸೇವನೆ ಮಾಡಿದರೆ ಇಂತಹ ಅನುಭವ ಕ್ಲಿಯರ್‌ ಆಗಿ ಆಗುತ್ತದೆ. ಇದರ ಸೇವನೆಯಿಂದ ಶರೀರದ ತಾಪಮಾನ ಸಮತೋಲನವಾಗುತ್ತದೆ. ಆದರೆ ಅತ್ಯಧಿಕ ಪ್ರಮಾಣದಲ್ಲಿ ಕೇಸರಿಯ ಸೇವನೆ ಮಾಡಬಾರದು.

ಬ್ಲಡ್‌ ಪ್ರೆಶರ್‌ : ಗರ್ಭಾವತಿ ಮಹಿಳೆಯರು ದಿನದಲ್ಲಿ ಒಂದು ಬಾರಿ ನಾಲ್ಕು ದಳ ಕೇಸರಿಯನ್ನು ಹಾಲಿನಲ್ಲಿ ಹಾ ಸೇವನೆ ಮಾಡಬೇಕು. ಇದರಿಂದ ಅವರು ಬ್ಲಡ್‌ ಪ್ರೆಶರ್‌ ಸಮತೋಲನದಲ್ಲಿರುತ್ತದೆ. ಇದರ ಸೇವನೆಯಿಂದ ಮಾಂಸಖಂಡಗಳು ಸದೃಢವಾಗಿರುತ್ತವೆ.

 

Comments are closed.