ಆರೋಗ್ಯ

ನಿಮಗೆ ಹಲ್ಲು ನೋವು ಕಾಣಿಸಿಕೊಂಡರೆ ಇಲ್ಲಿದೆ ಪರಿಹಾರ …..

Pinterest LinkedIn Tumblr

ಹಲ್ಲು ಹಾಗೂ ವಸಡುಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸದಿದ್ದರೆ ನಾನಾ ಸಮಸ್ಯೆಗಳನ್ನು ಎದುರಿಸಲೇಬೇಕಾಗುತ್ತೆ. ಸಾಮಾನ್ಯವಾಗಿ ಕಾಡುವ ಹಲ್ಲು ನೋವು ಹಾಗೂ ವಸಡುಗಳ ರಕ್ತಸ್ರಾವದ ಕೆಲವು ಸಮಸ್ಯೆಗಳು ಕಾಣಿಸಿಕೊಂಡಾಗ ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಹಲವಾರು ಮದ್ದುಗಳಿಂದ ನಿಮ್ಮ ಹಲ್ಲು ನೋವಿಗೆ ಅಗತ್ಯವಾದ ಪರಿಹಾರವನ್ನು ಕಂಡುಕೊಳ್ಳಬಹುದು. ಬೆಳ್ಳುಳ್ಳಿಯು ಒಂದು ಪ್ರಾಕೃತಿಕವಾದ ಬ್ಯಾಕ್ಟೀರಿಯಾ ನಿರೋಧಕವಾಗಿದೆ. ಬೆಳ್ಳುಳ್ಳಿಯ ರಸವು ಇನ್‍ಫೆಕ್ಷನ್ ಹೋಗಲಾಡಿಸುತ್ತದೆ. ಬೆಳ್ಳುಳ್ಳಿಯನ್ನು ಜಜ್ಜಿ ರಸವನ್ನು ತೆಗೆಯಿರಿ. ಈ ರಸವನ್ನು ಸೋಂಕು ಇರುವ ಭಾಗಕ್ಕೆ ಲೇಪಿಸಿ. ಈ ಮನೆ ಮದ್ದು ನಿಮ್ಮ ಹಲ್ಲು ನೋವನ್ನು ನಿವಾರಿಸಲು ಪರಿಣಾಮಕಾರಿಯಾಗಿ ನೆರವಾಗುತ್ತದೆ.

ಲವಂಗದ ಎಣ್ಣೆಯು ಇನ್‍ಫೆಕ್ಷನ್ ನಿವಾರಿಸಲು ಹೇಳಿ ಮಾಡಿಸಿದ ಔಷಧಿಯಾಗಿದೆ. ಇದು ದವಡೆಗಳ ನೋವು ಮತ್ತು ಹಲ್ಲು ನೋವುಗಳಿಗೆ ರಾಮ ಬಾಣದಂತೆ ಕೆಲಸ ಮಾಡುತ್ತದೆ. ಸ್ವಲ್ಪ ಪ್ರಮಾಣದ ಲವಂಗದ ಎಣ್ಣೆಯನ್ನು ತೆಗೆದುಕೊಳ್ಳಿ. ಅದರಿಂದ ಮೃದುವಾಗಿ ಬ್ರಷ್ ಮಾಡಿ. ಇದನ್ನು ನೋವಿರುವ ಭಾಗಕ್ಕೆ ಬಳಸುವಾಗ ಸ್ವಲ್ಪ ಜಾಗರೂಕರಾಗಿರಿ. ಹೆಚ್ಚು ಒತ್ತಡವನ್ನು ನೀಡದೆ ಬ್ರಷ್ ಮಾಡಿ. ಇಲ್ಲವಾದಲ್ಲಿ ನಿಮ್ಮ ನೋವು ಮತ್ತಷ್ಟು ಹೆಚ್ಚಾಗಬಹುದು. ಲವಂಗದ ಎಣ್ಣೆಯನ್ನು ದವಡೆಗಳ ಮೇಲೆ ಹಾಕಿ ಮೃದುವಾಗಿ ಮಸಾಜ ಮಾಡಿ.

ಹಲ್ಲು ನೋವಿಗೆ ಉಪ್ಪು ತಕ್ಷಣದ ನೋವು ನಿವಾರಕವಾಗಿ ಕೆಲಸಕ್ಕೆ ಬರುವ ಅಂಶವಾಗಿದೆ. ಬೆಚ್ಚನೆಯ ನೀರಿಗೆ ಸ್ವಲ್ಪ ಉಪ್ಪುನ್ನು ಬೆರೆಸಿ ಅದರಿಂದ ಬಾಯಿಯನ್ನು ಮುಕ್ಕುಳಿಸಿ. ಮೊದಲೆರಡು ಬಾರಿ ಬಾಯಿಯನ್ನು ಮುಕ್ಕುಳಿಸುವಾಗ ನಿಮಗೆ ನೋವಿನ ಅನುಭವವಾಗಬಹುದು. ಆದರೆ ನಂತರ ನಿಮಗೆ ನೋವಿನಿಂದ ಉಪಶಮನ ದೊರೆಯುವುದು ಸುಳ್ಳಲ್ಲ. ಇದನ್ನು ಕೆಲವು ಬಾರಿ ಪುನರಾವರ್ತಿಸಿ ಮತ್ತು ಶೇ.90ರಷ್ಟು ನೋವನ್ನು ಕಡಿಮೆಯಾಗುವುದು. ಹಸಿ ತರಕಾರಿಗಳನ್ನು ಅಗಿಯುವುದರಿಂದ ಹಲ್ಲುಗಳು ಸ್ವಚ್ಚವಾಗುವುದಲ್ಲದೇ, ವಸಡುಗಳಲ್ಲಿ ರಕ್ತ ಪರಿಚಲನೆ ಸುಗಮವಾಗುವುದು. ಆದ್ದರಿಂದ ದಿನವೂ ಹಸಿ ತರಕಾರಿಗಳನ್ನು ಅಗಿಯುವುದು ಒಳ್ಳೆಯದು.

ಅಡುಗೆ ಸೊಡಾವು ಬಾಯಿಯ ವಾತಾವರಣವನ್ನು ಆಮ್ಲಿಯವಾಗಿಸುವ ಮೂಲಕ ಬಾಯಿಯಲ್ಲಿನ ಬ್ಯಾಕ್ಟಿರಿಯಾಗಳನ್ನು ಕೊಲ್ಲುತ್ತದೆ. ಇದನ್ನು ಬೆರಳುಗಳ ಸಹಾಯದಿಂದ ವಸಡುಗಳ ಮೇಲೆ ಲೇಪಿಸಿಕೊಳ್ಳಬಹುದು.

Comments are closed.